4ನೇ ವಸಂತಕ್ಕೆ ಕಾಲಿರಿಸಿದ ಕನ್ನಡ ಡ್ರೈವ್‌ಸ್ಪಾರ್ಕ್
ಒನ್‌ಇಂಡಿಯಾ ಜಾಲತಾಣದ ಆಟೋಮೊಬೈಲ್ ವೆಬ್‌ಸೈಟ್ ಆಗಿರುವ ಡ್ರೈವ್‌ಸ್ಪಾರ್ಕ್ ಮೂರು ಯಶಸ್ವಿ ವರ್ಷಗಳನ್ನು ಪೂರ್ಣಗೊಳಿಸಿದ್ದು, ನಾಲ್ಕನೇ ವಸಂತಕ್ಕೆ ಕಾಲಿರಿಸಿದೆ. ಮೂರು ವರ್ಷಗಳ ಹಿಂದೆ ಇದೇ ದಿನದಂದು (11/11/11) ಆರಂಭವಾಗಿದ್ದ ಡ್ರೈವ್‌ಸ್ಪಾರ್ಕ್ ಆಟೋಮೊಬೈಲ್ ವೆಬ್‌ಸೈಟ್ ವಾಹನ ಪ್ರಿಯರ ಮನ ಮೆಚ್ಚುವಲ್ಲಿ ಯಶಸ್ವಿಯಾಗಿದೆ.
ಆಂಗ್ಲ ಭಾಷೆಯ ಜೊತೆಗೆ ಹಿಂದಿ, ಕನ್ನಡ, ತೆಲುಗು, ಮಳಯಾಳಂ ಹಾಗೂ ತಮಿಳುಗಳೆಂಬ ಪ್ರಾದೇಶಿಕ ಭಾಷೆಗಳಲ್ಲೂ ಡ್ರೈವ್‌ಸ್ಪಾರ್ಕ್ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ವಾಹನ ಜಗತ್ತಿನ ತಾಜಾ ಸುದ್ದಿ, ವಿಮರ್ಶೆ, ಅವಲೋಕನ, ಚಾಲನಾ ಪರೀಕ್ಷೆ ಮತ್ತು ವಾಹನ ಸಲಹೆಗಳನ್ನು ಅತಿ ವೇಗದಲ್ಲಿ ಓದುಗರಿಗೆ ತಲುಪಿಸುವುದು ನಮ್ಮ ಧ್ಯೇಯವಾಗಿದೆ.

ಇದರ ಜೊತೆ ಜೊತೆಗೆ ಹೊಸದಾಗಿ ಕಾರು ಖರೀದಿಸಲು ಬಯಸುವವರಿಗಾಗಿ ವಿಶೇಷ 'ಹೊಸ ಕಾರು' ಪುಟವನ್ನು ತೆರೆಯಲಾಗಿದೆ. ಮೇಲೆ ತಿಳಿಸಿದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಈ ಸೌಲಭ್ಯ ಲಭ್ಯ ಎಂಬುದು ಡ್ರೈವ್ ಸ್ಪಾರ್ಕ್ ಜಾಲಜಾಣವನ್ನು ಇತರ ವೆಬ್‌ಸೈಟ್‌ಗಳಿಂದ ವಿಭಿನ್ನವಾಗಿಸುತ್ತದೆ. ಇಲ್ಲಿ ಕಾರು ಹೋಲಿಕೆ ಕೂಡಾ ಅತ್ಯಂತ ಸರಳ ಹಾಗೂ ಸುಲಭವಾಗಿದ್ದು, ದರ, ತಾಜಾ ಚಿತ್ರಗಳ ಜೊತೆಗೆ ಕಾರಿನ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಕಲೆಹಾಕಬಹುದು.
ಕನ್ನಡದ ಪ್ರಪ್ರಥಮ ಹಾಗೆಯೇ ಏಕಮಾತ್ರ ಸಮರ್ಪಿತ ವಾಹನ ಜಾಲತಾಣವೆಂಬ ಕೀರ್ತಿಯು ಡ್ರೈವ್ ಸ್ಪಾರ್ಕ್‌ಗೆ ಸಲ್ಲುತ್ತದೆ. ಎಲ್ಲ ವೆಬ್‌ಸೈಟ್‌ಗಳ ಪ್ರಗತಿಯಲ್ಲಿ ಓದುಗರ ಪಾಲುದಾರಿಕೆ ಅತಿ ಪ್ರಾಮುಖ್ಯವೆನಿಸುತ್ತದೆ. ಈ ಸಂದರ್ಭದಲ್ಲಿ ಕಳೆದ ಮೂರು ವರ್ಷಗಳ ಕಾಲ ನಮ್ಮ ಜೊತೆಗಿದ್ದು, ನಮ್ಮ ಲೇಖನಗಳಿಗೆ ಪೂರಕವಾಗಿ ಸ್ಪಂದಿಸಿದ ಎಲ್ಲ ಓದುಗರಿಗೂ ಹೃತ್ಪೂರ್ವಕ ವಂದನೆಗಳನ್ನು ಸಮರ್ಪಿಸಲು ಬಯಸುತ್ತೇವೆ. ಇನ್ನು ಮುಂದೆಯು ಇದೇ ರೀತಿಯ ಸಹಕಾರ ಮುಂದುವರಿಯರಿ ಎಂಬುದು ನಮ್ಮ ಆಶಯ. ಹ್ಯಾಪಿ ಡ್ರೈವಿಂಗ್!
ನೀವು ಕನ್ನಡ ಡ್ರೈವ್‌ಸ್ಪಾರ್ಕ್‌ಗೆ ಶುಭ ಹಾರೈಸಲು ಮರೆಯದಿರಿ. ಹಾಗೆಯೇ ಎಲ್ಲ ಸಲಹೆ ಸೂಚನೆಗಳನ್ನು ಕೆಳಗೆ ಕೊಟ್ಟಿರುವ ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿರಿ.


Click it and Unblock the Notifications








