ಯುರೋಪ್ ವರ್ಷದ ಕಾರು 2014 - ಪ್ಯೂಜೊ 308
ಯುರೋಪ್ ವರ್ಷದ ಕಾರು 2014 ಪ್ರಶಸ್ತಿಗೆ ಪ್ಯೂಜೊ 308 ಭಾಜನವಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಯಾಕೆಂದರೆ ಇತ್ತೀಚೆಗಷ್ಟೇ ಬ್ರಿಟನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗೆ ಪಾತ್ರವಾಗಿದ್ದ ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು ಮತ್ತು ಮಾಜ್ದಾ 3 ಹಾಗೂ ಸ್ಕೋಡಾ ಒಕ್ಟಾವಿಯಾಗಳಂತಹ ಮಾದರಿಗಳನ್ನು ಹಿಂದಿಕ್ಕಿ ಪ್ಯೂಜೊ ಇಂತಹದೊಂದು ಮಾನ್ಯತೆಗೆ ಪಾತ್ರವಾಗಿದೆ.
ಯುರೋಪ್ ವರ್ಷದ ಕಾರಿನ ಅಂತಿಮ ಪಟ್ಟಿಯಲ್ಲಿ ಏಳು ಕಾರುಗಳನ್ನು ಆಯ್ಕೆ ಮಾಡಲಾಗಿತ್ತು. ಇದನ್ನು 58 ಆಟೋಮೋಟಿವ್ ಪತ್ರಕರ್ತರು ಹಾಗೂ ಯುರೋಪ್ ಖಂಡದ 22 ದೇಶಗಳ ಬರಹಗಾರರು ಆಯ್ಕೆಗೊಳಿಸಿದ್ದರು.

ಎಲ್ಲ ವಿಭಾಗಗಳಲ್ಲೂ ಪ್ಯೂಜೊ ಹ್ಯಾಚ್‌ಬ್ಯಾಕ್ ಅತ್ಯುತ್ತಮ ಕಾರೆಂಬುದನ್ನು ನಿರೂಪಿಸಿದೆ. ಈ ಹಿಂದೆ 1969, 1988 ಹಾಗೂ 2002ನೇ ಇಸವಿಯಲ್ಲಿ ಅನುಕ್ರಮವಾಗಿ ಪ್ಯೂಜೊ 504, 405 ಹಾಗೂ 307 ಆವೃತ್ತಿಗಳು ಯುರೋಪಿಯನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನವಾಗಿತ್ತು.
ಯುರೋಪ್ ವರ್ಷದ ಕಾರು 2014
ಅಂಕಪಟ್ಟಿ ಇಂತಿದೆ:
ಪ್ಯೂಜೊ 308 - 307
ಬಿಎಂಡಬ್ಲ್ಯು ಐ3 - 223
ಟೆಸ್ಲಾ ಮಾಡೆಲ್ ಎಸ್ - 216
ಸಿಟ್ರಾನ್ ಸಿ4 ಪಿಕಾಸೊ - 182
ಮಾಜ್ದಾ3 - 180
ಸ್ಕೋಡಾ ಒಕ್ಟಾವಿಯಾ - 172
ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ - 170


Click it and Unblock the Notifications