ವರ್ಷಂಪ್ರತಿ ಟಾಟಾದಿಂದ ಹೊಸ ಹೊಸ ಕಾರುಗಳು ಆಗಮನ

Written By:

ದೇಶದ ಅತಿ ದೊಡ್ಡ ವಾಹನ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, 2020ರ ವರೆಗೆ ವರ್ಷಂಪ್ರತಿ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

2014 ಆಟೋ ಎಕ್ಸ್ ಪೋದಲ್ಲಿ ಪ್ರಭಾವತ್ಮಾಕ ಪ್ರದರ್ಶನ ನೀಡಿದ್ದ ಸೈರಸ್ ಮಿಸ್ತ್ರಿ ನೇತೃತ್ವದಲ್ಲಿ ಹೊಸ ಆಶಾಕಿರಣ ಮೂಡಿಸಿತ್ತು. ಇದರ ಪರಿಣಾಮವಾಗಿಯೇ ಬೋಲ್ಟ್ ಹಾಗೂ ಜೆಸ್ಟ್ ಮಾದರಿಗಳ ಪ್ರದರ್ಶನವಾಗಿತ್ತು.

To Follow DriveSpark On Facebook, Click The Like Button
Tata Motors

ಮುಂಬರುವ ಆರು ವರ್ಷಗಳಲ್ಲಿ ಸರಿ ಸುಮಾರು 14 ವಾಹನಗಳನ್ನು ಪರಿಚಯಿಸುವ ಯೋಜನೆಯನ್ನು ಟಾಟಾ ಹೊಂದಿದೆ. ಪ್ರಸಕ್ತ ಸಾಲಿನಲ್ಲೇ ಬೋಲ್ಟ್ ಹಾಗೂ ಜೆಸ್ಟ್ ಬಿಡುಗಡೆಯೊಂದಿಗೆ ಯೋಜನೆ ಆರಂಭಗೊಳ್ಳಲಿದೆ.

ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಮಾದರಿ ಬಿಡುಗಡೆ ಮಾಡುವುದು ಟಾಟಾ ಯೋಜನೆಯಾಗಿದೆ. ಹಾಗೆಯೇ ಹೊಸ ಸುಧಾರಿತ ಎಂಜಿನ್ ಅಭಿವೃದ್ಧಿಯಲ್ಲೂ ತೊಡಗಿಸಿಕೊಂಡಿದೆ. ಈಗಾಗಲೇ ಟಾಟಾ 1.2 ಲೀಟರ್ ರೇವೊಟ್ರಾನ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಿದೆ.

ಈ ನಿಟ್ಟಿನಲ್ಲಿ ರೇವೋಟ್ರಾನ್ ಎಂಜಿನ್ ಅಭಿಯಾನವನ್ನು ಸಂಸ್ಥೆ ಹಮ್ಮಿಕೊಳ್ಳುತ್ತಿದೆ. ಟಾಟಾ ಯೋಜನೆಯಂತೆ ವರ್ಷಂಪ್ರತಿ ಕನಿಷ್ಠ ಎರಡೆರಡು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. 

English summary
Tata Motors had an impressive showcase of vehicles at the 2014 Auto Expo held in New Delhi. They are readying its Zest, Bolt and even Kite, they also plan to launch a new vehicle every year till 2020.
Story first published: Tuesday, July 8, 2014, 11:36 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark