ದೀಪಾವಳಿ ಕೊಡುಗೆ; ಬಹುನಿರೀಕ್ಷಿತ ಫಿಯೆಟ್ ಅವೆಂಚ್ಯುರಾ ಬಿಡುಗಡೆ

By Nagaraja

ಬೆಳಕಿನ ಹಬ್ಬ ದೀಪಾವಳಿ ಬರಮಾಡಿಕೊಳ್ಳುತ್ತಿರುವ ದೇಶದ ವಾಹನ ಪ್ರೇಮಿಗಳಿಗೆ ಸಿಹಿ ಸುದ್ದಿಯೊಂದಿಗೆ ಮುಂದೆ ಬಂದಿರುವ ಇಟಲಿ ಮೂಲದ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್ ಗ್ರೂಪ್ ಆಟೋಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್‌ಜಿಎಐಪಿಎಲ್) ಸಂಸ್ಥೆಯು ಬಹುನಿರೀಕ್ಷಿತ ಫಿಯೆಟ್ ಅವೆಂಚ್ಯುರಾ ಸಮಕಾಲೀನ ಅರ್ಬಲ್ ವಾಹನವನ್ನು (ಸಿಯುವಿ) ಬಿಡುಗಡೆಗೊಳಿಸಿದೆ.

ಎಲ್ಲ ವಾತಾವರಣಕ್ಕೂ ಹೊಂದಿಕೆಯಾಗುವಂತಹ ಫಿಯೆಟ್‌ನ ಹೊಸ ಕ್ರಾಸೋವರ್ ಶೈಲಿಯ ಅವೆಂಚ್ಯುರಾ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 5.99 ಲಕ್ಷ ರು. ಆಗಿರಲಿದೆ. ಅದೇ ಹೊತ್ತಿಗೆ ಮುಂಬೈ ಪ್ರಾರಂಭಿಕ ಬೆಲೆ 6.14 ಲಕ್ಷ ರು.ಗಳಿಷ್ಟಿರಲಿದೆ (ಎಕ್ಸ್ ಶೋ ರೂಂ).


ಫಿಯೆಟ್ ಅವೆಂಚ್ಯುರಾ ಪುಣೆಯ ರಂಜಗಾಂವ್‌ನಲ್ಲಿ ನಿರ್ಮಾಣವಾಗಲಿದ್ದು, ದೇಶೆದೆಲ್ಲೆಡೆ ಸ್ಥಿತಗೊಂಡಿರುವ ವಿತರಣ ಮಳಿಗೆಗೆ ರವಾನೆಯಾಗಲಿದೆ. ಕಾಂಪಾಕ್ಟ್ ಶೈಲಿಯೆನ್ನು ಹೊಂದಿರುವ ಫಿಯೆಟ್ ಅವೆಂಚ್ಯುರಾ ದೇಶದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ನಿರೀಕ್ಷೆಯಿದ್ದು, ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಂಡಿದೆ.

ಭಾರತೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಫಿಯೆಟ್ ಅವೆಂಚ್ಯುರಾ ವಿನ್ಯಾಸಗೊಳಿಸಲಾಗಿದೆ. ಸಂಪೂರ್ಣವಾಗಿಯೂ ಭಾರತದಲ್ಲೇ ನಿರ್ಮಾಣವಾಗಿರುವ ಈ ಮಹತ್ತರ ಗಾಡಿಯ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿರುತ್ತದೆ.


ನಿಮ್ಮ ಮಾಹಿತಿಗಾಗಿ, ವರ್ಷಾರಂಭದಲ್ಲಿ ನಡೆದ ದೆಹಲಿ ಆಟೋ ಎಕ್ಸ್ ಪೋದಲ್ಲಿ ಫಿಯೆಟ್ ಅವೆಂಚ್ಯುರಾ ಭರ್ಜರಿ ಪ್ರದರ್ಶನ ಕಂಡಿತ್ತು. ಇದು ಹೈ ಟರೈನ್ ಗೇಜ್, ಕ್ರಿಯಾತ್ಮಕ ರೂಫ್ ರೈಲ್, ದೊಡ್ಡದಾದ ಬೂಟ್ ಸ್ಪೇಸ್ ಮತ್ತು 60:40 ವಿಭಜಿತ ಸೀಟು ವ್ಯವಸ್ಥೆಯನ್ನು ಹೊಂದಿದೆ. ಹಾಗಯೇ 205 ಎಂಎಂ ಗ್ರೌಂಡ್ ಕ್ಲಿಯರನ್ಸ್ ನೆರವಿನೊಂದಿಗೆ ನಯವಾದ ಚಾಲನಾ ಅನುಭವ ನೀಡಲಿದೆ. ಇಟಲಿಯ ವಿನ್ಯಾಸ, ಆಕ್ರಮಣಕಾರಿ ಹಾಗೂ ದಿಟ್ಟವಾದ ಸ್ವಭಾವ, ಫ್ಯಾಶನ್‌ಗೆ ತಕ್ಕ ಸ್ಪೇರ್ ವೀಲ್ ಎಲ್ಲವೂ ಸಕ್ರಿಯ ಜೀವನಕ್ಕೆ ಸಹಕಾರಿಯಾಗಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್ (ಬೆಲೆ ಲಕ್ಷ ರು.ಗಳಲ್ಲಿ)
1.4 ಫೈರ್ ಪೆಟ್ರೋಲ್ ಆಕ್ಟಿವ್ - 5,99
1.4 ಫೈರ್ ಪೆಟ್ರೋಲ್ ಡೈನಾಮಿಕ್ - 7.05

ಡೀಸೆಲ್ (ಬೆಲೆ ಲಕ್ಷ ರು.ಗಳಲ್ಲಿ)
1.3 ಮಲ್ಟಿಜೆಟ್ ಡೀಸೆಲ್ ಆಕ್ಟಿವ್ - 6.89
1.3 ಮಲ್ಟಿಜೆಟ್ ಡೀಸೆಲ್ ಡೈನಾಮಿಕ್ - 7.65
1.3 ಮಲ್ಟಿಜೆಟ್ ಡೀಸೆಲ್ ಇಮೊಷನ್ - 8.17

Avventura

ದರ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

ಪೆಟ್ರೋಲ್ (ಬೆಲೆ ಲಕ್ಷ ರು.ಗಳಲ್ಲಿ)
1.4 ಫೈರ್ ಪೆಟ್ರೋಲ್ ಆಕ್ಟಿವ್ - 6.14
1.4 ಫೈರ್ ಪೆಟ್ರೋಲ್ ಡೈನಾಮಿಕ್ - 7.24

ಡೀಸೆಲ್ (ಬೆಲೆ ಲಕ್ಷ ರು.ಗಳಲ್ಲಿ)
1.3 ಮಲ್ಟಿಜೆಟ್ ಡೀಸೆಲ್ ಆಕ್ಟಿವ್ - 7.07
1.3 ಮಲ್ಟಿಜೆಟ್ ಡೀಸೆಲ್ ಡೈನಾಮಿಕ್ - 7.86
1.3 ಮಲ್ಟಿಜೆಟ್ ಡೀಸೆಲ್ ಇಮೊಷನ್ - 8.41

More from DriveSpark

Article Published On: Tuesday, October 21, 2014, 14:54 [IST]
English summary
Fiat Group Automobiles India Private Limited (FGAIPL) today launched its Avventura – Contemporary Urban Vehicle (CUV), for the global market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+