ಬೆಂಗಳೂರಿಗೂ ಬೀಸಿದ ಫಿಯೆಟ್ ಅಬ್ಬರ; ಅವೆಂಚ್ಯುರಾ ಬಿಡುಗಡೆ

Written By:

ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್ ಗ್ರೂಪ್ ಆಟೋಮೊಬೈಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್‌ಜಿಎಐಪಿಎಲ್), ಸ್ಥಳೀಯ ಲಾಂಚ್ ಕಾರ್ಯಕ್ರಮದ ಭಾಗವಾಗಿ ಸಮಕಾಲೀನ ಅರ್ಬನ್ ವೆಹಿಕಲ್ (ಸಿಯುವಿ) ಆಗಿರುವ ಅವೆಂಚ್ಯುರಾ ಮಾದರಿಯನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದೆ.

ನಗರದ ಒಳಗೂ ಹೊರಗೂ ಸಂತೋಷದಾಯಕ ಚಾಲನೆ ನೀಡಲಿರುವ ಫಿಯೆಟ್ ಅವೆಂಚ್ಯುರಾಗೆ ಈಗಾಗಲೇ ದೇಶದ್ಯಾಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಪ್ರಮುಖವಾಗಿಯೂ ಭಾರತೀಯ ರಸ್ತೆ ಪರಿಸ್ಥಿತಿಯನ್ನು ಗಮನಲ್ಲಿಟ್ಟುಕೊಂಡು ರಚಿಸಲಾಗಿದೆ. ಹಾಗೆಯೇ ಪುಣೆಯ ರಂಜನ್‌ಗಾಂವ್‌ನಲ್ಲಿ ನಿರ್ಮಿಸಲಾಗುವುದು.

ಭಾರತದಲ್ಲಿ ಭರ್ಜರಿ ಪುನರಾಗಮನ ನಿರೀಕ್ಷೆ ಮಾಡುತ್ತಿರುವ ಫಿಯೆಟ್ ಪಾಲಿಗೆ ಅವೆಂಚ್ಯುರಾ ನಿರ್ಣಾಯಕವೆನಿಸಲಿದೆ. ಈಹಿಂದೆ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣ ಕಂಡಿದ್ದ ಅವೆಂಚ್ಯುರಾ, ಹೈ ಟರೈನ್ ಗೇಜ್, ಕ್ರಿಯಾತ್ಮಕ ರೂಫ್ ರೈಲ್, ದೊಡ್ಡದಾದ ಲಗ್ಗೇಜ್ ಸ್ಪೇಸ್ ಮತ್ತು 60:40 ವಿಭಜಿತ ಸೀಟು ವಿನ್ಯಾಸವನ್ನು ಪಡೆದುಕೊಂಡಿದೆ.

ಇವೆಲ್ಲದಕ್ಕಿಂತಲೂ ಮಿಗಿಲಾಗಿ 205 ಎಂಎಂ ಗ್ರೌಂಡ್ ಕ್ಲಿಯರನ್ಸ್ ಅತಿ ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ. ಅದೇ ರೀತಿ ಹೆಚ್ಚುವರಿ ಚಕ್ರವು ಕಾರಿಗೆ ಇನ್ನು ಹೆಚ್ಚಿನ ಕ್ರೀಡಾತ್ಮಕ ಲುಕ್ ಪ್ರದಾನ ಮಾಡುತ್ತಿದೆ. ಒಟ್ಟಿನಲ್ಲಿ ಸಕ್ರಿಯ ಜೀವನ ಬಯಸುವ ಯುವ ಗ್ರಾಹಕರ ಪಾಲಿಗೆ ಹೊಸತನವನ್ನು ನೀಡಲಿದೆ.

ವೆರಿಯಂಟ್, ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್ (ಲಕ್ಷ ರು.ಗಳಲ್ಲಿ)

1.4 ಫೈರ್ ಪೆಟ್ರೋಲ್ ಆಕ್ಟಿವ್ - 6,08,979

1.4 ಫೈರ್ ಪೆಟ್ರೋಲ್ ಡೈನಾಮಿಕ್ - 7,17,624

ಡೀಸೆಲ್ (ಲಕ್ಷ ರು.ಗಳಲ್ಲಿ)

1.3 ಮಲ್ಟಿಜೆಟ್ ಡೀಸೆಲ್ ಆಕ್ಟಿವ್ - 7,01,222

1.3 ಮಲ್ಟಿಜೆಟ್ ಡೀಸೆಲ್ ಡೈನಾಮಿಕ್ - 7,79,121

1.3 ಮಲ್ಟಿಜೆಟ್ ಡೀಸೆಲ್ ಇಮೊಷನ್ - 8,32,421

fiat avventura
English summary
Fiat Avventura Bangalore launch price specs features details.
Please Wait while comments are loading...

Latest Photos

X