ಹ್ಯಾಚ್‌ಬ್ಯಾಕ್ ಸೀಮೆ ದಾಟಿದ ಫಿಯೆಟ್ ಅವೆಂಚ್ಯುರಾ

By Nagaraja

ಭಾರತದಲ್ಲಿ ಕ್ರಾಸೋವರ್ ಎಂಬ ನೂತನ ಕಾರು ವಿಭಾಗ ಹೆಚ್ಚು ಜನಪ್ರಿಯವಾಗತೊಡಗಿದೆ. ಹಾಗಿರಬೇಕೆಂದರೆ ಇಟಲಿಯ ಐತಿಹಾಸಿಕ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್ ನೂತನ ಅವೆಂಚ್ಯುರಾ ಕ್ರಾಸೋವರ್ ಮಾದರಿಯನ್ನು ಪರಿಚಯಿಸಿತ್ತು.

ಈಗಾಗಲೇ ಅವೆಂಚ್ಯುರಾ ಭಾರತ ಪ್ರವೇಶಿಸಿ ಸ್ವಲ್ಪ ಸಮಯವಾಗಿದೆ. ಹ್ಯಾಚ್‌ಬ್ಯಾಕ್‌ಗಿಂತಲೂ ಹೆಚ್ಚು ಪವರ್‌ಫುಲ್ ಹಾಗೂ ಗರಿಷ್ಠ ನಿರ್ವಹಣೆ ನೀಡುವ ಕ್ರಾಸೋವರ್ ಕಾರು ಒಂದೇ ಸಮಯಕ್ಕೆ ಅದ್ಭುತ ಚಾಲನಾ ಜೊತೆಗೆ ಆಫ್ ರೋಡ್ ಅನುಭವ ನೀಡುತ್ತದೆ. ಹಾಗಿರುವಾಗ ನಮ್ಮ ಆಟೋ ವಿಮರ್ಶಕರು ಇತ್ತೀಚೆಗಷ್ಟೇ ನಡೆಸಿರುವ ಫಿಯೆಟ್ ಅವೆಂಚ್ಯುರಾ ಚಾಲನಾ ಪರೀಕ್ಷೆಯತ್ತ ಒಮ್ಮೆ ಕಣ್ಣಾಯಿಸೋಣವೇ...

ಫಿಯೆಟ್ ಅವೆಂಚ್ಯುರಾ ಚಾಲನಾ ಅನುಭವ

ಮಾದರಿ ಪರೀಕ್ಷೆ: ಫಿಯೆಟ್ ಅವೆಂಚ್ಯುರಾ 1.4 ಡೈನಾಮಿಕ್

ಇಂಧನ ವಿಧ: ಪೆಟ್ರೋಲ್

ಸ್ಥಳ: ಮುಂಬೈ, ಪುಣೆ

ವಿನ್ಯಾಸ - ಮುಂಭಾಗ

ವಿನ್ಯಾಸ - ಮುಂಭಾಗ

ಕ್ರಾಸೋವರ್ ಮಾದರಿಗೆ ಹೆಚ್ಚು ಹೋಲಿಕೆಯಾಗುವಂತೆಯೇ ಒಂದೇ ಸಮಯಕ್ಕೆ ಸಾಂಪ್ರಾದಾಯಿಕ ಜೊತೆಗೆ ಆಧುನಿಕ ಗ್ರಾಹಕರನ್ನು ಆಕರ್ಷಿಸುವತ್ತ ಫಿಯೆಟ್ ಕೆಲಸ ಮಾಡಿದೆ. ಇದಕ್ಕೆ ಸೂಚಕವಾಗಿ ಫಿಯೆಟ್ ವಿನ್ಯಾಸವನ್ನು ಮೆಲುಕು ಹಾಕಬಹುದಾಗಿದೆ.

ಬದಿ ವಿನ್ಯಾಸ

ಬದಿ ವಿನ್ಯಾಸ

ಬದಿಯಿಂದ ನೋಡಿದಾಗ ಅವೆಂಚ್ಯುರಾ ಮಾದಿರಯನ್ನು ಸುಲಭವಾಗಿ ಗುರುತಿಸಿಕೊಳ್ಳಬಹುದಾಗಿದೆ. ಮೇಲ್ಜಾವಣಿಯಲ್ಲಿ ರೂಫ್ ರೈಲ್ ಹಾಗೂ ಇನ್ನಷ್ಟು ಕ್ರೀಡಾತ್ಮಕ ವಿನ್ಯಾಸಕ್ಕಾಗಿ ಡೋರ್ ಪ್ಯಾನೆಲ್ ನೋಡಬಹುದಾಗಿದೆ.

ಹಿಂಬದಿ ವಿನ್ಯಾಸ

ಹಿಂಬದಿ ವಿನ್ಯಾಸ

ಹಿಂಬದಿಯಿಂದಲೂ ಪುಂಟೊ ಇವೊ ತಳಹದಿಯಲ್ಲಿ ನಿರ್ಮಾಣವಾಗಿರುವ ಅವೆಂಚ್ಯುರಾ ದೊಡ್ಡದಾದ ಆಕಾರವನ್ನು ಪಡೆದಿದೆ. ಅಲ್ಲದೆ ವೀಲ್ ಕವರ್ ಮುಂತಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಎಂಜಿನ್

ಎಂಜಿನ್

ಇದರಲ್ಲಿ 1368ಸಿಸಿ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದ್ದು, 115 ತಿರುಗುಬಲದಲ್ಲಿ 89 ಅಶ್ವಶಕ್ತಿ ಉತ್ಪಾದಿಸುವ ಶಕ್ತಿ ಹೊಂದಿದೆ. ಇನ್ನು ಸಂಸ್ಥೆಯ ಪ್ರಕಾರ ಪ್ರತಿ ಲೀಟರ್‌ಗೆ 14.4 ಕೀ.ಮೀ. ಮೈಲೇಜ್ ನೀಡಲಿದೆ.

ಗೇರ್ ಬಾಕ್ಸ್

ಗೇರ್ ಬಾಕ್ಸ್

ಇದು ಐದು ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಂಡಿದೆ. ಆದರೆ ಗೇರ್ ನಾಬ್‌ನಲ್ಲಿ ಲೆಥರ್ ಹೋದಿಕೆಯ ಕೊರತೆ ಕಾಣುತ್ತಿದೆ.

ಚಾಲನೆ, ಹ್ಯಾಂಡ್ಲಿಂಗ್

ಚಾಲನೆ, ಹ್ಯಾಂಡ್ಲಿಂಗ್

ಹೊಸ ಅವೆಂಚ್ಯುರಾ ಚಾಲನೆ ಹಾಗೂ ಹ್ಯಾಂಡ್ಲಿಂಗ್ ಹೆಚ್ಚು ಪ್ರಭಾತ್ಮಾವಕವಾಗಿದೆ. ಇದರಲ್ಲಿ 16 ಇಂಚಿನ್ ಅಲಾಯ್ ವೀಲ್ ಉತ್ತಮ ರಸ್ತೆ ಸಾನಿಧ್ಯವನ್ನು ಖಚಿತಪಡಿಸುತ್ತಿದೆ. ಇನ್ನು ಸಸ್ಪೆನ್ಷನ್ ಸಿಸ್ಟಂ ಸಹ ಮೆಚ್ಚುಗೆಗೆ ಪಾತ್ರವಾಗಿದೆ.

ಒಳಮೈ

ಒಳಮೈ

ಸಾಮಾನ್ಯ ಟು ಟೋನ್ ಇಂಟಿರಿಯರ್‌ಗಿಂತಲೂ ವಿಭಿನ್ನವಾಗಿ ಫಿಯೆಟ್ ಅವೆಂಚ್ಯುರಾ ಡ್ಯಾಶ್ ಬೋರ್ಡ್ ಮೆಚ್ಚುಗೆಗೆ ಪಾತ್ರವಾಗಿದ್ದು, ತ್ರಿ ಟೋನ್ ಮೈ ಬಣ್ಣವನ್ನು ಪಡೆದಿದೆ. ಮುಂಭಾಗದಲ್ಲಿನ ಸ್ಥಳಾವಕಾಶ ಸಹ ಮೆಚ್ಚುಗೆಗೆ ಪಾತ್ರವಾಗಿದೆ.

ಲೆಗ್ ರೂಂ

ಲೆಗ್ ರೂಂ

ಹಾಗಿದ್ದರೂ ಹಿಂದುಗಡೆ ಉದ್ದನೆಯ ಕಾಯದ ಪ್ರಯಾಣಿಕರಿಗೆ ಕುಳಿತುಕೊಂಡು ಸಂಚರಿಸುವಾಗ ಸ್ವಲ್ಪ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಮಾಡಲಿದೆ. ಆದರೂ ನಾಲ್ಕು ಮಂದಿ ಪ್ರಯಾಣಿಕರಿಗೆ ಆರಾಮದಾಯಕವಾಗಿ ಸಂಚರಿಸಬಹುದಾಗಿದೆ.

ಇನ್ಪೋಟೈನ್ಮೆಂಟ್ ಸಿಸ್ಟಂ

ಇನ್ಪೋಟೈನ್ಮೆಂಟ್ ಸಿಸ್ಟಂ

ಉತ್ತಮವಾಗಿ ಗೋಚರಿಸುತ್ತಿರುವ ಇನ್ಪೋಟೈನ್ಮೆಂಟ್ ಸಿಸ್ಟಂ ಕಂಡೆ ಫಿಯೆಟ್ ಕಾರ್ಯ ನಿರ್ವಹಿಸಿದೆ. ಇದರ ಬಟನ್ ಬಳಕೆ ನಯವಾಗಿದ್ದು, 4 ಸ್ಪೀಕರ್ ವ್ಯವಸ್ಥೆ ಮೆಚ್ಚೆಗೆಗೆ ಪಾತ್ರವಾಗಿದೆ.

ಢಿಕ್ಕಿ ಜಾಗ

ಢಿಕ್ಕಿ ಜಾಗ

ಹೊಸ ಅವೆಂಚ್ಯುರಾದಲ್ಲಿ 280 ಲೀಟರ್ ಢಿಕ್ಕಿ ಜಾಗವಿರಲಿದ್ದು, ನಿಮ್ಮ ವಾರಂತ್ಯದ ಪಯಣಕ್ಕೆ ಹೆಚ್ಚು ಸೂಕ್ತವಾಗಲಿದೆ.

ಪ್ಲಸ್ ಪಾಯಿಂಟ್ - ಇನ್ಸ್ಟ್ರುಮೆಂಟ್ ಕ್ಲಸ್ಟರ್

ಪ್ಲಸ್ ಪಾಯಿಂಟ್ - ಇನ್ಸ್ಟ್ರುಮೆಂಟ್ ಕ್ಲಸ್ಟರ್

ಸ್ಪಷ್ಟವಾಗಿ ಎದ್ದು ಕಾಣಿಸಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್ ವ್ಯವಸ್ಥೆಯು ಚಾಲಕರ ಪಯಣವನ್ನು ಹೆಚ್ಚು ಆನಂದದಾಯಕವೆನಿಸುತ್ತಿದೆ.

ಲೋವರ್ ಫೆಂಡರ್

ಲೋವರ್ ಫೆಂಡರ್

ಕ್ರೀಡಾತ್ಮಕ ಶೈಲಿಗೆ ಕಾರಣವಾಗಿರುವ ಲೋವರ್ ಫೆಂಡರ್ ನಮ್ಮ ಆಕರ್ಷಣೆಗೆ ಪಾತ್ರವಾಗಿದೆ.

ಸೈಡ್ ಕ್ಲಾಡಿಂಗ್

ಸೈಡ್ ಕ್ಲಾಡಿಂಗ್

ಕಾರಿನ ಬದಿಯಲ್ಲಿ ಅವೆಂಚ್ಯುರಾ ಲಾಂಛನವನ್ನು ಹೊಂದಿರುವ ಸೈಡ್ ಕ್ಲಾಡಿಂಗ್ ನೋಟವು ಸಾಮಾನ್ಯ ಕಾರಿಗಿಂತಲೂ ವಿಭಿನ್ನವಾಗಿಸುತ್ತದೆ.

ಚಕ್ರಗಳು

ಚಕ್ರಗಳು

ಇನ್ನು 10 ಸ್ಪೋಕ್ ಚಕ್ರಗಳು ಕಾರಿಗೆ ಕ್ರೀಡಾತ್ಮಕ ಚಾಲನಾ ಅನುಭವ ತರುವಲ್ಲಿ ಯಶ ಕಂಡಿದೆ.

ಎಸಿ ನಿಯಂತ್ರಣ

ಎಸಿ ನಿಯಂತ್ರಣ

ಎಸಿ ನಿಯಂತ್ರಣ ಮ್ಯಾನುವಲ್ ಆಗಿದ್ದರೂ ಇದರ ಬಳಕೆ ಸುಲಭವೆನಿಸುತ್ತಿದೆ.

ಮಾಹಿತಿ ಪರದೆ

ಮಾಹಿತಿ ಪರದೆ

ಫಿಯೆಟ್ ಅವೆಂಚ್ಯುರಾದ ಬಹು ಮಾಹಿತಿ ಪರದೆಯು ಪ್ರವಾಸ, ವ್ಯಾಪ್ತಿ, ಇಂಧನ ಬಳಕೆ, ಸರಾಸರಿ ವೇಗ ಹಾಗೂ ಎಷ್ಟು ದೂರ ಚಲಿಸಿದ್ದೀರಾ ಎಂಬುದರ ಬಗ್ಗೆ ಪರದೆಯಲ್ಲಿ ಸುಲಭವಾಗಿ ಮೂಡಿಬರಲಿದೆ.

ಗ್ಲೋವ್ ಬಾಕ್ಸ್

ಗ್ಲೋವ್ ಬಾಕ್ಸ್

ಫಿಯೆಟ್ ಅವೆಂಚ್ಯುರಾ ಗ್ಲೋವ್ ಬಾಕ್ಸ್ ದೊಡ್ಡದಾಗಿದ್ದು, ನಿಮ್ಮ ಅಗತ್ಯ ದಾಖಲಾತಿಗಳನ್ನು ಇಡಬಹುದಾಗಿದೆ.

ಕ್ರೋಮ್ ಎಕ್ಸಾಸ್ಟ್ ರಂಧ್ರ

ಕ್ರೋಮ್ ಎಕ್ಸಾಸ್ಟ್ ರಂಧ್ರ

ಹಿಂದುಗಡೆ ನೀಡಿರುವ ಕ್ರೋಮ್ ಸ್ಪರ್ಶದ ಎಕ್ಸಾಸ್ಟ್ ರಂಧ್ರವು ಫಿಯೆಟ್ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ಲಾಂಛನ

ಲಾಂಛನ

ಇನ್ನು ಫಿಯೆಟ್ ಅಭಿಮಾನಿಗಳು ಹೆಮ್ಮೆ ಪಡುವ ರೀತಿಯಲ್ಲಿ ಫಿಯೆಟ್ ಲಾಂಛನ ರಚನೆಯಾಗಿದೆ.

ಹೆಡ್ ಲೈಟ್

ಹೆಡ್ ಲೈಟ್

ಫಿಯೆಟ್ ಹೆಡ್ ಲೈಟ್‌ಗಳು ರಾತ್ರಿ ಪಯಣದ ವೇಳೆಯಲ್ಲೂ ಉತ್ತಮ ಗೋಚರತೆಯನ್ನು ಪ್ರದಾನ ಮಾಡುತ್ತದೆ. ಹಾಗಿದ್ದರೂ ಡೇ ಟೈಮ್ ರನ್ನಿಂಗ್ ಲೈಟ್ಸ್ ಕೊರತೆ ಕಾಡಲಿದೆ.

ಡೋರ್ ಬಳಕೆ

ಡೋರ್ ಬಳಕೆ

ಫಿಯೆಟ್ ಅವೆಂಚ್ಯುರಾ ಬಾಗಿಲುಗಳನ್ನು ತೆರೆಯುವುದು ಹಾಗೂ ಮುಚ್ಚುಗಡೆಗೊಳಿಸುವುದು ಬಹಳ ಸುಲಭವಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಕಾರಿನೊಳಗೆ ಪ್ರವೇಶಿಸುವುದು ಸುಲಭವೆನಿಸುತ್ತದೆ.

ದೊಡ್ಡದಾದ ಚಕ್ರ

ದೊಡ್ಡದಾದ ಚಕ್ರ

16 ಇಂಚಿನ ಚಕ್ರಗಳು ಫಿಯೆಟ್ ಅವೆಂಚ್ಯುರಾ ಉರುಳಿಕೆಯನ್ನು ಇನ್ನಷ್ಟು ನಯಗೊಳಿಸುತ್ತದೆ.

ಟೈಲ್ ಲ್ಯಾಂಪ್ ವಿನ್ಯಾಸ

ಟೈಲ್ ಲ್ಯಾಂಪ್ ವಿನ್ಯಾಸ

ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಂಡಿರುವ ಟೈಲ್ ಲ್ಯಾಂಪ್‌ಗಳು ಕತ್ತಲೆಯಲ್ಲೂ ಅವೆಂಚ್ಯುರಾ ಎದ್ದು ಕಾಣಿಸುವಂತೆ ಮಾಡುತ್ತದೆ.

ಒಳಮೈ

ಒಳಮೈ

ಡ್ಯಾಶ್ ಬೋರ್ಡ್ ಮೇಲಿನ ತಿಳಿ ಬೂದು ಬಣ್ಣವು ಮಗದೊಂದು ಧನಾತ್ಮಕ ಅಂಶವಾಗಿ ಪರಿಣಮಿಸಿದೆ.

ಮೇಲ್ಚಾವಣಿ

ಮೇಲ್ಚಾವಣಿ

ಕ್ರಾಸೋವರ್ ಕಾರಿಗೆ ತಕ್ಕಂತೆ ರೂಫ್ ರೈಲ್ ನೀಡಲಾಗಿದೆ. ಈ ಮೂಲಕ ಫಿಯೆಟ್ ಪ್ರಾಮಾಣಿಕತೆಯನ್ನು ಮೆರೆದಿದೆ.

ಹೆಡ್ ಲ್ಯಾಂಪ್

ಹೆಡ್ ಲ್ಯಾಂಪ್

ನೇರ ಹಾಗೂ ದಿಟ್ಟತನದ ಸಂಕೇತವಾಗಿ ಫಿಯೆಟ್ ಹೆಡ್ ಲ್ಯಾಂಪ್‌ಗಳನ್ನು ನಾವು ಕಾಣಬಹುದಾಗಿದೆ. ಹಾಗಿದ್ದರೂ ನಾವು ಈ ಮೊದಲೇ ತಿಳಿಸಿರುವಂತೆಯೇ ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಕೊರತೆ ಕಾಡುತ್ತಿದೆ.

ಎತ್ತರ ಹೊಂದಾಣಿಕೆ

ಎತ್ತರ ಹೊಂದಾಣಿಕೆ

ಚಾಲಕ ಸೀಟು ಹೊಂದಾಣಿಕೆ ವ್ಯವಸ್ಥೆಯು ಫಿಯೆಟ್ ಅವೆಂಚ್ಯುರಾದ ಮಗದೊಂದು ಪ್ಲಸ್ ಪಾಯಿಂಟ್ ಆಗಿದೆ.

ಗ್ರೌಂಡ್ ಕ್ಲಿಯರನ್ಸ್

ಗ್ರೌಂಡ್ ಕ್ಲಿಯರನ್ಸ್

205 ಎಂಎಂ ಗ್ರೌಂಡ್ ಕ್ಲಿಯರನ್ಸ್ ಪರಿಣಾಮಕಾರಿಯೆನಿಸಿದೆ. ಇದು ಒರಟಾದ ರಸ್ತೆಯಲ್ಲೂ ನೈಜ ಚಾಲನಾ ಅನುಭವ ನೀಡಲಿದೆ. ಇಲ್ಲಿ ಕೆಲವು ಪ್ರತಿಸ್ಪರ್ಧಿಗಳ ಹೋಲಿಕೆ ಇಂತಿದೆ.

ಗ್ರೌಂಡ್ ಕ್ಲಿಯರನ್ಸ್

ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ (168 ಎಂಎಂ)

ಟೊಯೆಟಾ ಎಟಿಯೋಸ್ ಕ್ರಾಸ್ (174 ಎಂಎಂ)

ಹಿಂದುಗಡೆ ಸೀಟು

ಹಿಂದುಗಡೆ ಸೀಟು

ಇಲ್ಲಿ ಫಿಯೆಟ್ ತಂತ್ರಜ್ಞಾನವನ್ನು ಮೆಚ್ಚಲೇಬೇಕಾಗುತ್ತದೆ. ಯಾಕೆಂದರೆ ಹಿಂದುಗಡೆ ಸೀಟು ಮಡಚಲು ಬಳಸಲಾದ ಲಾಕ್ ಹಾಗೂ ಅನ್ ಲಾಕ್ ವ್ಯವಸ್ಥೆಯ ನಿಯಂತ್ರಣ ತುಂಬಾನೇ ಸರಳವಾಗಿದೆ.

ಇನ್ಸ್ಟ್ರುಮೆಂಟ್ ಬಣ್ಣ

ಇನ್ಸ್ಟ್ರುಮೆಂಟ್ ಬಣ್ಣ

ಕೆಂಪು ಆಕರ್ಷಣೆಯ ಬಣ್ಣ. ಇದು ಬಹಳ ಬೇಗನೇ ಗಮನ ಸೆಳೆಯುತ್ತದೆ. ಇದೇ ಕಾರಣಕ್ಕಾಗಿ ಫಿಯೆಟ್ ಇನ್ಸ್ಟ್ರಮೆಂಟ್ ಕ್ಲಸ್ಟರ್‌ನಲ್ಲಿ ಕೆಂಪು ಬಣ್ಣವನ್ನು ಬಳಸಲಾಗಿದ್ದು, ಸುಲಭವಾಗಿ ಮಾಹಿತಿ ಕಲೆಹಾಕಬಹುದಾಗಿದೆ.

ಮೈನಸ್ ಪಾಯಿಂಟ್ - ಗೋಚರತೆ

ಮೈನಸ್ ಪಾಯಿಂಟ್ - ಗೋಚರತೆ

ಹಿಂದುಗಡೆ ಆಳವಡಿಸಲಾದ ಸಣ್ಣ ವಿಂಡ್ ಸ್ಕ್ರೀನ್‌ನಿಂದ ರಿವರ್ಸ್ ಪಡೆಯುವಾಗ ಗೋಚರತೆಯ ಅಭಾವ ಕಾಡುತ್ತದೆ. ಈ ಸಮಸ್ಯೆ ಇಕ್ಕಟ್ಟಿನ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ವೇಳೆ ಇನ್ನಷ್ಟು ಭಾಸವಾಗಲಿದೆ.

ಬಾಟಲಿ ಸ್ಟೋರೆಜ್

ಬಾಟಲಿ ಸ್ಟೋರೆಜ್

ದೂರ ಪ್ರಯಾಣದ ವೇಳೆ ಆಯಾಸ ಕಡಿಮೆ ಮಾಡಲು ನೀರು ಕುಡಿಯಬೇಕು. ಆದರೆ ಕನಿಷ್ಠ 500 ಮಿಲ್ಲಿ ಲೀಟರ್ ನೀರಿನ ಬಾಟಲಿ ಇಡಲು ಸಹ ಫಿಯೆಟ್‌ ಅವೆಂಚ್ಯುರಾದಲ್ಲಿ ಸೂಕ್ತ ಸ್ಥಳಾವಕಾಶಕ್ಕಾಗಿ ಹುಡುಕಾಡಬೇಕಾಗುತ್ತದೆ.

ಟೈಲ್ ಗೇಟ್

ಟೈಲ್ ಗೇಟ್

ಢಿಕ್ಕಿಯಲ್ಲಿ ಸಾಮಾಗ್ರಿಗಳಿನ್ನಡಲು ಟೈಲ್ ಗೇಟ್ ವಿಶಾಲವಾಗಿಯೇ ತೆರೆದುಕೊಳ್ಳಬೇಕು. ಆದರೆ ನಾವು ನಿರೀಕ್ಷೆ ಮಾಡಿದಕ್ಕಿಂತಲೂ ಸ್ವಲ್ಪ ಜಾಸ್ತಿನೇ ಟೈಲ್ ಗೇಟ್ ತೆರೆದುಕೊಳ್ಳುತ್ತಿದೆ. ಇದರಿಂದಾಗಿ ನಿರ್ವಹಿಸುವುದು ಸ್ವಲ್ಪ ಕಷ್ಟವೆನಿಸುತ್ತದೆ.

ಡೋರ್ ಲಾಕ್

ಡೋರ್ ಲಾಕ್

ಒಳಗಡೆಯಿಂದ ಹ್ಯಾಂಡಲ್ ದೂಡಿದಾಗ ಡೋರ್ ಲಾಕ್ ತೆರೆದುಕೊಳ್ಳುತ್ತದೆ. ಇಲ್ಲಿ ಡೋರ್ ಲಾಕ್ ವ್ಯವಸ್ಥೆಯು ನಿಖರತೆಯ ಕೊರತೆ ಅನುಭವಿಸುತ್ತದೆ.

ಕ್ಲಚ್

ಕ್ಲಚ್

ಭಾರತದ ವಾಹನ ದಟ್ಟಣೆಯ ಪರಿಸ್ಥಿತಿಯನ್ನು ಗಮನಿಸಿದಾಗ ಪದೇ ಪದೇ ಕ್ಲಚ್ ಬಳಕೆ ಅತ್ಯಗತ್ಯವಾಗಿದೆ. ಆದರೆ ಇಲ್ಲಿಯೂ ಕೂಡಾ ಸ್ಥಾನಪಲ್ಲಟವಾದಂತೆ ಭಾಸವಾಗುತ್ತಿದೆ.

ಗುಣಮಟ್ಟತೆ

ಗುಣಮಟ್ಟತೆ

ಬಹು ಕ್ರಿಯಾತ್ಮಕ ಸ್ವಿಚ್‌ಗಳನ್ನು ಬಳಕೆ ಮಾಡಿದರೂ ಪ್ಲಾಸ್ಟಿಕ್ ಗುಣಮಟ್ಟತೆ ಸ್ವಲ್ಪ ಹಿನ್ನಡೆಗೆ ಕಾರಣವಾಗಿದೆ.

ಆರ್ಮ್ ರೆಸ್ಟ್

ಆರ್ಮ್ ರೆಸ್ಟ್

ಮುಂಭಾಗದಲ್ಲಿ ಚಾಲಕ ಬದಿಯ ಆರ್ಮ್ ರೆಸ್ಟ್ ಕೂಡಾ ಸ್ವಲ್ಪ ಹಿನ್ನಡೆಗೆ ಕಾರಣವಾಗಿದೆ.

ರಿವರ್ಸ್ ಲೈಟ್, ಲೈಸನ್ಸ್ ಪ್ಲೇಟ್

ರಿವರ್ಸ್ ಲೈಟ್, ಲೈಸನ್ಸ್ ಪ್ಲೇಟ್

ಇದರಲ್ಲಿ ಏಕಮಾತ್ರ ರಿವರ್ಸಿಂಗ್ ಲೈಟ್ ಕಂಡುಬಂದಿದೆ. ಇನ್ನು ಬಹಳ ಕೆಳಗಡೆ ಲೈಸನ್ಸ್ ಪ್ಲೇಟ್ ಲಗತ್ತಿಸಲಾಗಿದೆ. ಇದು ಕಾನೂನಾತ್ಮಕವಾಗಿ ಚಿಂತನೆ ಮಾಡಿದಾಗ ಗೋಚರತೆಯ ಅಭಾವ ಕಾಡಲಿದೆ.

ಸ್ಟೀರಿಂಗ್ ವೀಲ್ ನಿಯಂತ್ರಣ

ಸ್ಟೀರಿಂಗ್ ವೀಲ್ ನಿಯಂತ್ರಣ

ಆಧುನಿಕ ಕಾರುಗಳಲ್ಲಿ ನೀವು ನೋಡಿರುತ್ತಿರುವಂತೆಯೇ ಸ್ಟೀರಿಂಗ್ ವೀಲ್‌ನಲ್ಲಿ ಆಡಿಯೋ ಹಾಗೂ ಬ್ಲೂಟೂತ್ ನಿಯಂತ್ರಣವಿರುತ್ತದೆ. ಆದರೆ ಈ ಎಲ್ಲ ಸಂಗತಿಗಳನ್ನು ಅವೆಂಚ್ಯುರಾ ಮಿಸ್ ಮಾಡಿಕೊಂಡಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಈಗ ಫಿಯೆಟ್ ಅವೆಂಚ್ಯುರಾ ಕಾರಿನ ಧನಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನು ನೀವು ಈಗಾಗಲೇ ನೋಡಿರುವೀರಾ. ಇದರಿಂದಲೇ ಇಂತಹದೊಂದು ಕಾರನ್ನು ನೀವು ಹುಡುಕುತ್ತಿದ್ದೀರಾ? ಎಂಬುದನ್ನು ನೀವೇ ಗ್ರಹಿಸಿಕೊಳ್ಳಬಹುದಾಗಿದೆ. ಹಾಗಿದ್ದರೂ ನಮ್ಮ ಪ್ರಕಾರ ಕ್ರಾಸೋವರ್ ವಿಭಾಗದ ಗ್ರಾಹಕರಿಗೆ ಇಂದೊಂದು ಉತ್ತಮ ಅನುಭವವಾಗಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಹೆಚ್ಚಿನ ಗ್ರೌಂಡ್ ಕ್ಲಿಯರನ್ಸ್, ದಿಟ್ಟ ವಿನ್ಯಾಸ ಮುಂತಾದವುಗಳು ಧನಾತ್ಮಕವಾಗಿ ಪರಿಣಮಿಸಿದರೆ ಎಬಿಎಸ್‌ಗಳಂತಹ ಸ್ಟ್ಯಾಂಡರ್ಡ್ ಸುರಕ್ಷತೆಯ ಕೊರತೆಗಳು ಹಿನ್ನಡೆಗೆ ಕಾರಣವಾಗಿದೆ. ಹಾಗಿದ್ದರೂ 8.2 ಲಕ್ಷ ರು.ಗಳಲ್ಲಿ (ದೆಹಲಿ ಎಕ್ಸ್ ಶೋ ರೂಂ) ಇಂದೊಂದು ಉತ್ತಮ ಕಾರಾಗಿದೆ ಎಂಬುದರಲ್ಲಿ ಸಂಶಯವೇ ಬೇಡ.

Most Read Articles

Kannada
English summary
We recently completed our testing of the latest entrant to the Indian crossover market, the Fiat Avventura, a car based on the Fiat Punto Evo. We will break the car down in detail so you can be the judge of whether you should consider this one for your garage. So where does the car shine, and where does it struggle? Let's find out.
Story first published: Saturday, March 7, 2015, 14:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X