ಆಯ್ದ ಮಾದರಿಗಳಿಗೆ ಫಿಯೆಟ್ ವರ್ಷಾಂತ್ಯದ ಆಫರ್
ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್, ಕ್ರಿಸ್ಮಸ್ ಹಾಗೂ ವರ್ಷಾಂತ್ಯದ ಮಾರಾಟವನ್ನು ಗುರಿಯಲ್ಲಿಟ್ಟುಕೊಂಡು ಆಯ್ದ ಮಾದರಿಗಳಿಗೆ ಆಫರ್ ಅನ್ನು ಘೋಷಿಸಿದೆ.
ಈ ಮೂಲಕ ವರ್ಷಾಂತ್ಯದ ಮಾರಾಟ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸುವ ಇರಾದೆಯಲ್ಲಿದೆ. ಫಿಯೆಟ್‌ನ ಮೂರು ಮಾದರಿಗಳಿಗೆ ಮಾತ್ರ ಆಫರುಗಳು ಅನ್ವಯವಾಗಲಿದೆ. ಅವುಗಳೆಂದರೆ,
ಲಿನಿಯಾ, ಲಿನಿಯಾ ಕ್ಲಾಸಿಕ್ ಮತ್ತು ಪುಂಟೊ ಇವೊ

ಇದರಂತೆ ಲಿನಿಯಾ ಖರೀದಿ ವೇಳೆ ಗರಿಷ್ಠ ಎರಡು ಲಕ್ಷದ ವರೆಗೂ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಇನ್ನೊಂದೆಡೆ ಲಿನಿಯಾ ಕ್ಲಾಸಿಕ್ ಖರೀದಿಯಲ್ಲಿ ರು. 80,000ಗಳ ಪ್ರಯೋಜ ಪಡೆಯಬಹುದಾಗಿದೆ. ಇನ್ನುಳಿದಂತೆ ಪುಂಟೊ ಇವೊ ಖರೀದಿಯಲ್ಲಿ ರು. 65,000 ವರೆಗೆ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ.
ಇವೆಲ್ಲದರ ಜೊತೆಗೆ ಎರಡು ವರ್ಷಗಳ ವರ್ಧಿತ ವಾರಂಟಿ ಸೌಲಭ್ಯವನ್ನು ಈ ಎಲ್ಲ ಮೂರು ಮಾದರಿಗಳಿಗೂ ಫಿಯೆಟ್ ಒದಗಿಸುತ್ತಿದೆ. ಒಟ್ಟಾರೆಯಾಗಿ ತನ್ನ ಉತ್ಪನ್ನಗಳಿಗೆ ಫಿಯೆಟ್ ಐದು ವರ್ಷಗಳ ವಾರಂಟಿ ಒದಗಿಸಲಿದೆ.
ಹಾಗಿದ್ದರೂ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಅವೆಂಚ್ಯುರಾ ಮಾದರಿಗೆ ಆಫರ್ ಅನ್ವಯವಾಗುವುದಿಲ್ಲ. 2015ನೇ ಸಾಲಿನಲ್ಲಿ ಬಹುತೇಕ ಎಲ್ಲ ವಾಹನ ತಯಾರಿಕ ಸಂಸ್ಥೆಗಳು ಬೆಲೆ ಏರಿಕೆ ಘೋಷಿಸಿರುವಂತೆಯೇ ವಾಹನ ಖರೀದಿಗಿದು ಇದುವೇ ಸೂಕ್ತ ಕಾಲ.


Click it and Unblock the Notifications








