ಷೆವರ್ಲೆಯಿಂದ ಹೊಸ ಸೈಲ್ ಸೆಡಾನ್, ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ
ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಕಾರು ಬ್ರಾಂಡ್ ಆಗಿರುವ ಷೆವರ್ಲೆ, ಭಾರತೀಯ ಮಾರುಕಟ್ಟೆಗೆ ಹೊಸತಾದ ಸೈಲ್ ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಕಾರನ್ನು ಪರಿಚಯಿಸಿದೆ. ಈ ಪೈಕಿ ಸೈಲ್ ಹ್ಯಾಚ್‌ಬ್ಯಾಕ್ 4.41 ಲಕ್ಷ ರು.ಗಳಿಂದ 6.81 ಲಕ್ಷ ರು.ಗಳ ವರೆಗೂ ಮತ್ತು ಸೈಲ್ ಸೆಡಾನ್ 5.19 ಲಕ್ಷ ರು.ಗಳಿಂದ 7.64 ಲಕ್ಷ ರು.ಗಳ ವರೆಗೆ ದರ ನಿಗದಿಯಾಗಿದೆ. (ಎಕ್ಸ್ ಶೋ ರೂಂ ದೆಹಲಿ).
ನಿರಂತರ ಅಂತರಾಳದಲ್ಲಿ ದೇಶದ ಮಾರುಕಟ್ಟೆಗೆ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ತನ್ನ ಬದ್ಧತೆ ಪ್ರದರ್ಶಿಸಿರುವ ಸಂಸ್ಥೆಯು ಮಗಗೊಂದು ಆಕರ್ಷಕ ಫ್ಯಾಮಿಲಿ ಕಾರನ್ನು ಪರಿಚಯಿಸಿದ್ದು, ತಾಜಾ ನೋಟವನ್ನು ಪಡೆದುಕೊಂಡಿದೆ.

ಮುಖ್ಯಾಂಶಗಳು
ಹೊಸತಾದ ಒಳಮೈ,
15 ಆಕರ್ಷಕ ವೈಶಿಷ್ಟ್ಯಗಳು,
ಕ್ರೀಡಾತ್ಮಕ ಹೊರಮೈ,
ಮುಂದುವರಿದ ಸುರಕ್ಷತೆ
ವಿಶೇಷವಾಗಿಯೂ ಭಾರತ ಹಾಗೂ ತ್ವರಿತ ಗತಿಯಲ್ಲಿ ಬೆಳೆದು ಬರುತ್ತಿರುವ ಮಾರುಕಟ್ಟೆಗಳಿಗಾಗಿ ಸಿದ್ಧಪಡಿಸಿರುವ ಹಾಗೂ ಜಾಗತಿಕ ಪ್ರಯಾಣಿಕ ಕಾರು ತಲಹದಿಯಲ್ಲಿ ನಿರ್ಮಾಣವಾಗಿರುವ ಸೈಲ್ 2012ರಲ್ಲಿ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯವಾಗಿತ್ತು. ಇದು 2014ರ ವೇಳೆಯಾಗುವಾಗ ಹತ್ತು ದಶಲಕ್ಷ ಮಾರಾಟವನ್ನು ತಲುಪಿತ್ತು.

ಪ್ರೀಮಿಯಂ ಇಂಟಿರಿಯರ್
ಷೆವರ್ಲೆಯ ಜನಪ್ರಿಯ ಕೋವರ್ಟೆಯಿಂದ ಸ್ಪೂರ್ತಿ ಪಡೆದ ಡ್ಯುಯಲ್ ಕೊಕ್‌ಪಿಟ್ ಡಿಸೈನ್, ಉತ್ತಮ ಬೆಂಬಲದ ಸೀಟು ಮತ್ತು ಲೆಥರ್ ಅಪ್‌ಹೋಲ್‌ಸ್ಟ್ರೆ ಪಡೆದುಕೊಂಡಿದೆ.
ಸ್ಮಾರ್ಟ್ ಹಾಗೂ ಹೆಚ್ಚು ಸ್ಥಳಾವಕಾಶಯುಕ್ತ ವಿನ್ಯಾಸ ತಂತ್ರಗಾರಿಕೆಯನ್ನು ಇಲ್ಲಿ ಅನುಸರಿಸಲಾಗಿದೆ. ಈ ಮೂಲಕ ಪರಿಪೂರ್ಣ ಕುಟುಂಬ ಕಾರೆನೆಸಿಕೊಳ್ಳಲಿದೆ. ಸೈಲ್ ಹ್ಯಾಚ್‌ಬ್ಯಾಕ್ ಕಾರಲ್ಲಿ ಐವರು ಮಂದಿಗೆ ಆರಾಮವಾಗಿ ಪಯಣಿಸಬಹುದಾಗಿದೆ. ಹಾಗೆಯೇ ಉದ್ದನೆಯ ಪ್ರಯಾಣಿಕರಿಗೂ ಉತ್ತಮ ಹೆಡ್ ರೂಂ ಪ್ರದಾನ ಮಾಡುತ್ತಿರುವುದಾಗಿ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅದೇ ರೀತಿ ವಿಶಾಲವಾದ ಬೂಟ್ ಸ್ಪೇಸ್ ನಿಮ್ಮ ದೈನಂದಿನ ಪಯಣವನ್ನು ಸಾಮಗ್ರಿಯನ್ನು ಕೊಂಡೊಯ್ಯಲು ನೆರವಾಗಲಿದೆ.
ಇದರಲ್ಲಿ 2 ಡಿನ್ ಮ್ಯೂಸಿಕ್ ಸಿಸ್ಟಂ ಜೊತೆಗೆ ಬ್ಲೂಟೂತ್ ಲಭ್ಯವಾಗಲಿದೆ. ಹಾಗೆಯೇ ಏಕಕಾಲದಲ್ಲಿ ಐದು ಫೋನ್‌ಗಳ ಸಂಪರ್ಕ ಸಾಧಿಸಬಹುದಾಗಿದೆ. ಕ್ರೋಮ್‌ನಿಂದ ಸುತ್ತುವರಿದ ಹೊಸ ಎಸಿ ವೆಂಟ್, ಎಚ್‌ವಿಎಸಿ ನಿಯಂತ್ರಣ ಮತ್ತು ಬೆಳ್ಳಿ ಬಣ್ಣದಿಂದ ಸುತ್ತುವರಿಯಲ್ಪಟ್ಟ ಗೇರ್ ಶಿಫ್ಟ್ ಕಾರಿಗೆ ಕ್ಲಾಸಿಕ್ ನೋಟ ನೀಡಲಿದೆ.

ಡೈನಾಮಿಕ್ ಮತ್ತು ಸ್ಪೋರ್ಟಿ ಹೊರಮೈ
ಅದೇ ಹೊರಗಡೆ ಕ್ರೀಡಾತ್ಮಕ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ. ಇದು ಮುಂದುಗಡೆಯಿಂದ ಆಕ್ರಮಣಕಾರಿ ಶೈಲಿ ಪಡೆದುಕೊಂಡಿದೆ. ಹಾಕ್ ವಿಂಗ್ ಶೈಲಿಯ ಹೆಡ್‌ಲ್ಯಾಂಪ್, ಶೂಟಿಂಗ್ ಸ್ಟಾರ್ ಶೈಲಿಯ ಫಾಗ್ ಲ್ಯಾಂಪ್, ಕ್ರೋಮ್ ಗಾರ್ನಿಶ್ ಕಾರಿಗೆ ಯೂನಿಕ್ ಲುಕ್ ಪ್ರದಾನ ಮಾಡಲಿದೆ.
ಬಣ್ಣಗಳು
ವೆಲ್ವೆಟ್ ರೆಡ್ (ಸೆಡಾನ್‌ಗೆ ಮಾತ್ರ), ಸೂಪರ್ ರೆಡ್ (ಹ್ಯಾಚ್‌ಬ್ಯಾಕ್‌ಗೆ ಮಾತ್ರ) ಸ್ವಿಚಬಲ್ ಸಿಲ್ವರ್, ಸಮ್ಮಿತ್ ವೈಟ್, ಕೆವಿಯರ್ ಬ್ಲ್ಯಾಕ್, ಲಿನೆನ್ ಬೀಜ್, ಸ್ಯಾಡ್ರಿಫ್ಟ್ ಗ್ರೇ
ಕ್ರಾಂತಿಕಾರಿ ಡೀಸೆಲ್ ಎಂಜಿನ್
1.3 ಲೀಟರ್ ಎಸ್‌ಡಿಐ ಸ್ಮಾರ್ಟ್‌ಟೆಕ್ ಟರ್ಬೊ ಚಾರ್ಜ್ಡ್ ಕಾಮನ್ ರೈಲ್ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು, ಇದನ್ನು ಜನರಲ್ ಮೋಟಾರ್ಸ್ ಇಟಲಿಯ ಡೀಸೆಲ್ ಎಂಜಿನ್ ಟೆಕ್ನಿಕಲ್ ಸೆಂಟರ್‌ನಲ್ಲಿ ಪುಣೆ ಹಾಗೂ ಬೆಂಗಳೂರು ಎಂಜಿನಿಯರ್‌ಗಳ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದು 75 ಅಶ್ವಶಕ್ತಿ ಹಾಗೂ 190 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಅಂತೆಯೇ ಪ್ರತಿ ಲೀಟರ್‌ಗೆ 22.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.
ಅದೇ ರೀತಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ 1.2 ಲೀಟರ್ ಸ್ಮಾರ್ಟ್ ಟೆಕ್ ಪೆಟ್ರೋಲ್ ಎಂಜಿನ್ ಸಹ ಹೊಂದಿರಲಿದೆ. ಇದನ್ನು ಜನರಲ್ ಮೋಟಾರ್ಸ್ ಪುಣೆಯ ತಾಂತ್ರಿಕ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು 83.6 ಅಶ್ವಶಕ್ತಿಯೊಂದಿಗೆ 108.5 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ.


Click it and Unblock the Notifications








