ಪ್ಲಾನ್ ವರ್ಕೌಟ್ ಆಗ್ತಿಲ್ಲ; ಬದಲಾಯ್ತು ಷೆವರ್ಲೆ ನೀತಿ, ಬರುತ್ತಿದೆ ಹೊಸ ಕಾರು

By Nagaraja

ಹೌದು, ಸಣ್ಣ ಕಾರು ಮಾರುಕಟ್ಟೆಯಲ್ಲಿ ಬೀಟ್‌ಗಳಂತಹ ಆಕರ್ಷಕ ಮಾದರಿಗಳನ್ನು ಪರಿಚಯಿಸಿರುವುದರ ಹೊರತಾಗಿಯೂ ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್, ಶೈಲಿಯ ವಿಚಾರದಲ್ಲಿ ಮೇಲುಗೈ ಸಾಧಿಸಿರುವುದನ್ನು ಹೊರತುಪಡಿಸಿದರೆ ಮಾರಾಟದಲ್ಲಿ ದೊಪ್ಪನೆ ಕಳಕ್ಕೆ ಸರಿದಿತ್ತು.

ಇದರಿಂದ ಎಚ್ಚೆತ್ತುಕೊಂಡಿರುವ ಷೆವರ್ಲೆ ತನ್ನ ನೀತಿಯಲ್ಲಿ ವ್ಯಾಪಕ ಬದಲಾವಣೆಗೆ ಮುಂದಾಗುತ್ತಿದೆ. ಅಷ್ಟೇ ಯಾಕೆ ಫೋರ್ಡ್ ಹಾಗೂ ಫೋಕ್ಸ್‌ವ್ಯಾಗನ್ ಅದೇ ನೀತಿ ಅನುಸರಿಸಲು ಮುಂದಾಗುತ್ತಿರುವ ಷೆವರ್ಲೆ, ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಕಾರು ಬಿಡುಗಡೆ ಮಾಡಲು ತಯಾರಾಗುತ್ತಿದೆ.

chevorlet beat

ನಾಲ್ಕು ಮೀಟರ್ ಪರಿಧಿಯೊಳಗೆ ಕಾಂಪಾಕ್ಟ್ ಸೆಡಾನ್ ಕಾರು ಅಭಿವೃದ್ಧಿಪಡಿಸುವುದು ಸಂಸ್ಥೆಯ ಗುರಿಯಾಗಿದೆ. ಇದು ಮಾರುತಿ ಸ್ವಿಫ್ಟ್ ಡಿಜೈರ್, ಹ್ಯುಂಡೈ ಎಕ್ಸ್‌ಸೆಂಟ್, ಹೋಂಡಾ ಅಮೇಜ್ ಹಾಗೂ ಇದೀಗಷ್ಟೇ ಬಿಡುಗಡೆಯಾಗಿರುವ ಟಾಟಾ ಜೆಸ್ಟ್ ಮಾದರಿಗಳಿಗೆ ಸ್ಪರ್ಧೆ ಒಡ್ಡುವುದಷ್ಟೇ ಅಲ್ಲದೆ ಇದರಿಂದ ಸರಕಾರದಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ.

ಕೇವಲ ಕಾಂಪಾಕ್ಟ್ ಸೆಡಾನ್ ಮಾತ್ರವಲ್ಲದೆ ಹೊಸ ಹ್ಯಾಚ್‌ಬ್ಯಾಕ್ ಕಾರನ್ನು ಲಾಂಚ್ ಮಾಡುವ ಇರಾದೆಯನ್ನು ಷೆವರ್ಲೆ ಹೊಂದಿದೆ. ಇವೆರಡು 'ಎಂ300' ತಳಹದಿಯಲ್ಲಿ ನಿರ್ಮಾಣವಾಗಲಿದೆ. ಆದರೆ ಸ್ವಲ್ಪ ತಡವಾಗಿ 2017ರ ವೇಳೆಯಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ.

ಏತನ್ಮಧ್ಯೆ ಆಂತಕಕಾರಿ ಬೆಳವಣಿಗೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇರು ನಷ್ಟಕ್ಕೊಳಗಾಗುತ್ತಿರುವ ಷೆವರ್ಲೆ ಸಂಸ್ಥೆಯು 2014ನೇ ಆರ್ಥಿಕ ಸಾಲಿನಲ್ಲಿ ಅಂದಾಜು 6,552 ಕೋಟಿ ರು.ಗಳ ನಷ್ಟ ಅನುಭವಿಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

Article Published On: Friday, December 5, 2014, 7:27 [IST]
English summary
American carmaker General Motors is reworking its strategy in India due to its rapidly falling market share, losses and low capacity utilisation.
Read in English: Project MCM By GM
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+