ಗೂಗಲ್ ತೆಕ್ಕೆಗೆ ಫೋರ್ಡ್‌ನ ಮುಲಾಲಿ; ಗುರಿ ಗೂಗಲ್ ಕಾರು?

By Nagaraja

ಜಾಗತಿಕ ಮಟ್ಟದಲ್ಲಿ ಫೋರ್ಡ್ ಪ್ರಗತಿಯಲ್ಲಿ ದೊಡ್ಡ ಪಾತ್ರ ವಹಿಸಿರುವ ಮಾಜಿ ಸಿಇಒ ಹಾಗೂ ಅಧ್ಯಕ್ಷರಾಗಿದ್ದ ಅಲನ್ ಮುಲಾಲಿ ಅವರನ್ನು ಗೂಗಲ್ ತನ್ನ ತೆಕ್ಕೆಗೆ ಸೇರಿಸಿಕೊಂಡಿರುವುದು ವಾಹನ ಜಗತ್ತಿನಲ್ಲಿ ಗಮನಾರ್ಹ ಬೆಳವಣಿಗೆಯೆನಿಸಿದೆ.

ಇವನ್ನೂ ಓದಿ: ಬೆಲ್ಲು, ಬ್ರೇಕ್ ಇಲ್ಲದ ಗೂಗಲ್ ಕಾರು

ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಗೂಗಲ್, ಮುಲಾಲಿ ಅವರು ತಮ್ಮ ನಿರ್ದೇಶಕ ಮಂಡಳಿಗೆ ಸೇರ್ಪಡೆಗೊಂಡಿದ್ದಾರೆ ಎಂದಿದೆ. ಮುಲಾಲಿ ಅವರು ಜುಲೈ 15ರಂದು ಗೂಲನ್ ನಿರ್ದೇಶಕ ಮಂಡಳಿಗೆ ನೇಮಕಗೊಂಡಿದ್ದಾರೆ.


ನಿಮ್ಮ ಮಾಹಿತಿಗಾಗಿ, ಗೂಗಲ್ ಇತ್ತೀಚೆಗಷ್ಟೇ ಸ್ವಯಂಚಾಲಿತ (self-driving car) ಕಾರುಗಳ ಮೊದಲ ಮಾದರಿಯನ್ನು ಪ್ರದರ್ಶಿಸಿತ್ತು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಗೂಗಲ್, ಈ ನಿಟ್ಟಿನಲ್ಲಿ ಅಲಾನ್ ಮುಲಾಲಿ ತಂತ್ರಕುಶಲತೆಯ ನೀತಿಯನ್ನು ಕೈಗೊಳ್ಳುವ ನಂಬಿಕೆಯನ್ನು ಹೊಂದಿದೆ.

ಫೋರ್ಡ್ ಮೋಟಾರು ಕಂಪನಿಯ ಏಳಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಈ 68 ವರ್ಷದ ಅಮೆರಿಕದ ಎಂಜಿನಿಯರ್, ಕಳೆದ ಎಂಟು ವರ್ಷಗಳಿಂದಲೂ ಫೋರ್ಡ್ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.

Alan Mulally

ಬೋಯಿಂಗ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಬೋಯಿಂಗ್ ಕಮರ್ಷಿಯಲ್ ಏರ್‌ಪ್ಲೇನ್ಸ್‌ನ ಸಿಇಒ ಆಗಿಯೂ ಕಾರ್ಯನಿರ್ವಹಿಸಿರುವ ಮುಲಾಲಿ, ಆರ್ಥಿಕ ಹಿಂಜರಿತದ ನಡುವೆಯೂ ಫೋರ್ಡ್‌ ಮಾರಾಟ ವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಒಟ್ಟಿನಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ ಅದ್ವಿತೀಯ ಸಾಧನೆ ಮಾಡಿರುವ ಗೂಗಲ್, ಭವಿಷ್ಯದಲ್ಲಿ ವಾಹನ ಜಗತ್ತಿಗೂ ಪ್ರವೇಶ ಪಡೆಯಬಹುದೇ? ಈ ನಿಟ್ಟಿನಲ್ಲಿ ಮುಲಾಲಿ ಕಾರ್ಯತಂತ್ರ ನಿರ್ಣಾಯಕೆನಿಸಲಿದೆ.

More from DriveSpark

Article Published On: Thursday, July 17, 2014, 14:29 [IST]
English summary
Ex-President and CEO of Ford, Alan mulally has served for the American automobile manufacturer for a long time. Google now confirms that Alan mulally will join their board of Directors. He will be working with the Audit Committee and has begun work on 8th of July, 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+