ಹೋಂಡಾ ಅಕಾರ್ಡ್‌ಗೆ ತಟ್ಟಿದ ರಿಕಾಲ್ ಬಿಸಿ

By Nagaraja

ದೆಹಲಿಯಲ್ಲಿ ಫೆಬ್ರವರಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಹೋಂಡಾ ತನ್ನ ಜನಪ್ರಿಯ ಅಕಾರ್ಡ್ ಮಾದರಿಯ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಿತ್ತು. ಪ್ರಸ್ತುತ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, 10 ವರ್ಷಗಳ ಹಿಂದೆ ಮಾರಾಟವಾಗಿದ್ದ ಅಕಾರ್ಡ್ ಆವೃತ್ತಿಗಳನ್ನು ವಾಪಾಸ್ ಕರೆಯಿಸಿಕೊಳ್ಳುತ್ತಿದೆ.

ಭಾರತದಲ್ಲಿ ಮಾರಾಟವಾಗಿರುವ ಅಕಾರ್ಡ್ ಸೆಡಾನ್ ಕಾರು ಸಹ ರಿಕಾಲ್‌ ಪಟ್ಟಿಯಲ್ಲಿದೆ. ಏರ್ ‌ಬ್ಯಾಗ್‌ನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ವಾಪಾಸ್ ಪಡೆಯಲಾಗುತ್ತಿದೆ.

Honda Accord

ಕೆಲವೊಂದು ಪರಿಸ್ಥಿತಿಯಲ್ಲಿ ಏರ್ ಬ್ಯಾಗ್ ಸ್ಪೋಟಗೊಳ್ಳುವ ಸಾಧ್ಯತೆಯಿರುವ ಕಾರಣ ಇಂತಹದೊಂದು ಪ್ರಕ್ರಿಯೆ ಕಂಡುಬಂದಿದೆ. ಕಳೆದ ದಶಕದಲ್ಲಿ ಮಾರಾಟವಾಗಿರುವ ಪೈಕಿ ಮೊದಲೈದು ವರ್ಷಗಳ ಅಕಾರ್ಡ್ ವೆರಿಯಂಟ್‌ಗಳು ಇದರಲ್ಲಿ ಸೇರಿರಲಿದೆ.

ಜಾಗತಿಕವಾಗಿ ಎರಡು ದಶಲಕ್ಷದಷ್ಟು ಅಕಾರ್ಡ್ ಮಾದರಿಗಳನ್ನು ವಾಪಾಸ್ ಪಡೆಯಲಾಗುತ್ತಿದೆ. ಹೋಂಡಾ ಪ್ರಕಟಣೆಯಲ್ಲಿ ತಿಳಿಸಿರುವ ಪ್ರಕಾರ 2000ನೇ ಇಸವಿಯ ಆಗಸ್ಟ್ ತಿಂಗಳಿಂದ 2005 ಡಿಸೆಂಬರ್ ವೆರೆಗಿನ ಅವಧಿಯಲ್ಲಿ ಬಿಡುಗಡೆಯಾದ ಆವೃತ್ತಿಯನ್ನು ಹಿಂದಕ್ಕೆ ಪಡೆಯಲಾಗುತ್ತಿದೆ.

ಭಾರತದಲ್ಲಿ 2001ರಿಂದ 2013ನೇ ಇಸವಿಯ ವರೆಗೆ ಅಕಾರ್ಡ್ ಮಾರಾಟದಲ್ಲಿತ್ತು. ಅಲ್ಲದೆ ಹೊಸ ಮಾದರಿಯು ಸದ್ಯದಲ್ಲೇ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ ಜಪಾನ್‌ನ ತಕಟ ಕಾರ್ಪ್ ಒದಗಿಸಿರುವ ಏರ್ ಬ್ಯಾಗ್‌ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ಇದೇ ಸಂಸ್ಥೆಯು ಟೊಯೊಟಾ, ನಿಸ್ಸಾನ್ ಹಾಗೂ ಬಿಎಂಡಬ್ಲ್ಯು ಸಂಸ್ಥೆಗಳಿಗೂ ಏರ್ ಬ್ಯಾಗ್ ಪೂರೈಸುತ್ತಿರುವುದು ಗಮನಾರ್ಹವೆನಿಸಿದೆ.

Article Published On: Wednesday, June 25, 2014, 12:06 [IST]
English summary
Honda had earlier in the year showcased its updated version of Accord sedan at the 2014 Auto Expo held in New Delhi. The Japanese manufacturer will be recalling the Accord globally, which was sold in ten years ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+