ದೇಶಕ್ಕೆ ಸಣ್ಣ ಕಾರು; ಗೊಂದಲದಲ್ಲಿ ಹೋಂಡಾ
ದೇಶಕ್ಕೆ ಅತ್ಯಾಕರ್ಷಕ ಮಾದರಿಗಳನ್ನು ಪರಿಚಯಿಸಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ಭಾರತಕ್ಕೆ ಹೊಸತಾದ ಬ್ರಿಯೊ ಸಣ್ಣ ಕಾರು ಬಿಡುಗಡೆಗೊಳಿಸುವ ಕುರಿತಂತೆ ಗೊಂದಲದಲ್ಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಂಡಾದ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷರಾಗಿರುವ ಜ್ಞಾನ್ವೇಶ್ವರ್ ಸೆನ್, ಸಣ್ಣ ಕಾರು ವಿಭಾಗಕ್ಕೆ ಪ್ರವೇಶಿಸುವ ಕುರಿತಂತೆ ಸಂಸ್ಥೆಯು ಇನ್ನು ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.

ಹಾಗಿದ್ದರೂ ಭಾರತಕ್ಕೆ ಹೊಸ ಮಾದರಿಗಳ ಬಿಡುಗಡೆ ಕುರಿತಂತೆ ಹೋಂಡಾ ಸಂಶೋಧನಾ ಹಾಗೂ ಅಭಿವೃದ್ಧಿ ತಂಡವು ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ.
ಕಳೆದ ಕೆಲವು ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿರುವ ಹೋಂಡಾ ಅಮೇಜ್ ಹಾಗೂ ಸಿಟಿಗಳಂತಹ ಜನಪ್ರಿಯ ಮಾದರಿಗಳನ್ನು ಪರಿಚಯಿಸಿತ್ತು. ಇದಾದ ಬೆನ್ನಲ್ಲೇ ಮೊಬಿಲಿಯೊ ಮಲ್ಟಿ ಪರ್ಪಸ್ ವಾಹನವನ್ನು ಮಾರುಕಟ್ಟೆಗೆ ಇಳಿಸಿತ್ತು.


Click it and Unblock the Notifications








