ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರೆನೆಗೆಡ್ ಸ್ಮಾಲ್ ಎಸ್‍‍‍ಯುವಿ..

ಕೆಲ ದಿನಗಳ ಹಿಂದಷ್ಟೆ ಜೀಪ್ ಇಂಡಿಯಾ ಸಂಸ್ಥೆಯು ಜೀಪ್ ಕಂಪಾಸ್‍‍ನಂತೆಯೆ ಎರಡು ಎಸ್‍‍ಯುವಿ ಕಾರುಗಳನ್ನು ಬಿಡುಗಡೆಗೊಳಿಸುವುದರ ಬಗ್ಗೆ ಸುಳಿವು ನೀಡಿತ್ತು.

By Rahul Ts

ಕೆಲ ದಿನಗಳ ಹಿಂದಷ್ಟೆ ಜೀಪ್ ಇಂಡಿಯಾ ಸಂಸ್ಥೆಯು ಜೀಪ್ ಕಂಪಾಸ್‍‍ನಂತೆಯೆ ಎರಡು ಎಸ್‍‍ಯುವಿ ಕಾರುಗಳನ್ನು ಬಿಡುಗಡೆಗೊಳಿಸುವುದರ ಬಗ್ಗೆ ಸುಳಿವು ನೀಡಿದ್ದು, ಬಿಡುಗಡೆಗೊಳಿಸಲಿರುವ ಎರಡು ಕಾರುಗಳು ಸಬ್ 4 ಮೀಟರ್ ಎಸ್‍‍ಯುವಿ ಮತ್ತು 7 ಸೀಟರ್ ಎಸ್‍‍ಯುವಿ ಮಾದರಿಗಳಾಗಿರಲಿವೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರೆನೆಗೆಡ್ ಸ್ಮಾಲ್ ಎಸ್‍‍‍ಯುವಿ..

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಎಸ್‌ಯುವಿ ಕಾರುಗಳನ್ನು ಹಿಂದಿಕ್ಕಲು ಜೀಪ್ ಇಂಡಿಯಾ ಸಂಸ್ಥೆಯು ಮಹತ್ವದ ಯೋಜನೆಯೊಂದನ್ನು ರೂಪಿಸುತ್ತಿದ್ದು, ಕೈಗೆಟುವ ಬೆಲೆಯಲ್ಲಿ ಸಣ್ಣ ಗಾತ್ರದ ಎಸ್‌ಯುವಿ ಕಾರು ಮಾದರಿ ಒಂದನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರೆನೆಗೆಡ್ ಸ್ಮಾಲ್ ಎಸ್‍‍‍ಯುವಿ..

ಹೊಸ ಕಾರಿನ ಬಿಡುಗಡೆಯ ಬಗ್ಗೆ ಈಗಾಗಲೇ ಜೀಪ್ ಸಂಸ್ಥೆಯು ಸುಳಿವು ನೀಡಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆ ಇಂತದೊಂದು ಮಹತ್ವದ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಇದೀಗ ಮೊದಲ ಬಾರಿಗೆ ಜೀಪ್ ರೆನೆಗೆಡ್ ಸ್ಮಾಲ್ ಎಸ್‍‍ಯುವಿ ಕಾರನ್ನು ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರೆನೆಗೆಡ್ ಸ್ಮಾಲ್ ಎಸ್‍‍‍ಯುವಿ..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಸಣ್ಣ ಗಾತ್ರದ ಜೀಪ್ ಕಂಪಾಸ್ ಕಾರುಗಳು ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಮರುವಿನ್ಯಾಸಗೊಳಿಸಲಾದ ಟೈಲ್ ಲ್ಯಾಂಪ್ಸ್, ಮಾಡಿಫೈ ಮಾಡಲಾದ ಬಂಪರ್ ವಿನ್ಯಾಸ ಮತ್ತು 17 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಪದೆದುಕೊಂಡಿರಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರೆನೆಗೆಡ್ ಸ್ಮಾಲ್ ಎಸ್‍‍‍ಯುವಿ..

ಇದಲ್ಲದೆ ಈ ಕಾರು ಸ್ಲೇಟೆಡ್ ಗ್ರಿಲ್,ಟಫ್ ಸ್ಕಿಡ್ ಪ್ಲೇಟ್, ವಿಭಜಿತ ಫಾಗ್ ಲ್ಯಾಂಪ್ಸ್ ಮತ್ತು ಸ್ಕ್ವೇರ್ಡ್ ವ್ಹೀಲ್ ಆರ್ಚ್‍‍ಗಳನ್ನು ಪಡೆದಿದೆ. ಇನ್ನು ಕಾರಿನ ಒಳಭಾಗದಲ್ಲಿ ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುವ ದೊಡ್ಡ ಗಾತ್ರ ಇನ್ಫೋಟೈನ್ಮೆಂಟ್ ಸಿಸ್ಟಮ್, ನ್ಯಾವಿಗೇಶನ್ ಮತ್ತು ಆಯ್ಕೆಯಾಗಿ ಸ್ಯಾಟೆಲೈಟ್ ರೇಡಿಯೊವನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರೆನೆಗೆಡ್ ಸ್ಮಾಲ್ ಎಸ್‍‍‍ಯುವಿ..

ಹೊಸ ಜೀಪ್ ರೆನೆಗೆಡ್ ಎಸ್‍‍ಯುವಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಪಡೆದಿರಲಿದ್ದು, ಅದು 1.4 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬರಲಿದೆ. ಮತ್ತು ಎಂಜಿನ್‍‍ಗಳನ್ನು 6 ಸ್ಪೀಡ್ ಮ್ಯಾನುವಲ್ ಅಥವ 9 ಸ್ಪೀಡ್ ಆಟೋಮ್ಯಾತಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿರಲಿದೆ ಎಂದು ಊಹಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರೆನೆಗೆಡ್ ಸ್ಮಾಲ್ ಎಸ್‍‍‍ಯುವಿ..

ಕಾರಿನ ಬೆಲೆಗಳು(ಅಂದಾಜು)

ಎಕ್ಸ್‌ಶೋರಂ ಪ್ರಕಾರ ಹೊಸ ಕಾರಿನ ಬೆಲೆಗಳು ರೂ. 11 ಲಕ್ಷದಿಂದ ರೂ.14 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರೆನೆಗೆಡ್ ಸ್ಮಾಲ್ ಎಸ್‍‍‍ಯುವಿ..

ಇದರಿಂದಾಗಿ ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ, ಫೋರ್ಡ್ ಇಕೋಸ್ಪೋರ್ಟ್ ಮತ್ತು ನೆಕ್ಸಾನ್ ಕಾರುಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗಲಿದ್ದು, ಹೊಸ ಕಾರುಗಳ ಮೇಲೆ ವಿಧಿಸಲಾಗುವ ಬೆಲೆಗಳ ಆಧಾರದ ಮೇಲೆ ಹೊಸ ಕಾರುಗಳ ಭವಿಷ್ಯವು ನಿರ್ಧಾರವಾಗಲಿದೆ ಎನ್ನಬಹುದು.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜೀಪ್ ರೆನೆಗೆಡ್ ಸ್ಮಾಲ್ ಎಸ್‍‍‍ಯುವಿ..

ಇನ್ನು ಜೀಪ್ ಸಂಸ್ಥೆಯು ಭಾರತದಲ್ಲಿ ಫಿಯೆಟ್ ಕ್ಲೈಸರ್ ಆಟೋ ಮೊಬೈಲ್ ಸಂಸ್ಥೆಯ ಜೊತೆಗೂಡಿ ಸ್ಥಳೀಯ ಮಟ್ಟದ ಬೀಡಿಭಾಗಗಳನ್ನು ಬಳಸಿಕೊಂಡು ಅಗ್ಗದ ಬೆಲೆಯಲ್ಲಿ ಕಾರು ನಿರ್ಮಾಣ ಮಾಡುವ ಯೋಜನೆಗೆ ಚಾಲನೆ ನೀಡಿದ್ದು, 2019ರ ವೇಳೆಗೆ 2.40 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುವ ಗುರಿಹೊಂದಿದೆ.

Source : Rushlane

Most Read Articles

Kannada
Read more on jeep suv small car
English summary
2019 Jeep Renegade based small SUV spied in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X