ವಿಶ್ವಾಸನೀಯ ಕಾರುಗಳ ಪಟ್ಟಿಯಲ್ಲಿ ಜಪಾನ್ ನಂ.1
ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಮೂಲದ ಕಾರುಗಳು ತನ್ನದೇ ಆದ ಸ್ಥಾನಮಾನ ಗಿಟ್ಟಿಸಿಕೊಂಡಿದೆ. ಭಾರತದಲ್ಲಿ ಮಾರುತಿ ಸುಜುಕಿ ಹೆಚ್ಚು ಜನಪ್ರಿಯ ಎನಿಸಿಕೊಂಡರೂ ಜಪಾನ್ ಮಾದರಿಗಳು ಸಹ ತನ್ನ ಛಾಪು ಮೂಡಿಸಿದೆ.
ಬ್ರಿಟನ್‌ನಲ್ಲಿ ನಡೆಸಿರುವ ಪರೀಕ್ಷೆಯೊಂದರಲ್ಲಿ ಜಪಾನ್ ಕಾರುಗಳು ಅತ್ಯಂತ ವಿಶ್ವಾಸನೀಯ ಎಂಬ ವಿಚಾರ ಬೆಳಕಿಗೆ ಬಂದಿದೆ. ಹಾಗಿದ್ದರೂ ಈ ಪಟ್ಟಿಯಲ್ಲಿ ಬ್ರಿಟನ್‌ನ ಯಾವುದೇ ಕಾರುಗಳು ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.

ನಿಮ್ಮ ಬಳಿಯೂ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಗಳ ಕಾರುಗಳಿದ್ದರೆ ನೀವೂ ಹೆಮ್ಮೆಪಟ್ಟುಕೊಳ್ಳಬಹುದು. ಯಾಕೆಂದರೆ ಐದು ವರ್ಷಗಿಂತ ಅಥವಾ ಅದಕ್ಕಿಂತಲೂ ಹಳೆಯದಾಗಿರುವ ಕಾರುಗಳ ಮಾನದಂಡಗಳನ್ನು ಅನುಸರಿಸಿ ನಡೆಸಿರುವ ಪರೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ.
ಈ ಪೈಕಿ ಅಗ್ರಸ್ಥಾನ ಗಿಟ್ಟಿಸಿಕೊಂಡಿರುವ ಜಪಾನ್ ತಯಾರಕರು ಅತ್ಯಂತ ಕಡಿಮೆ 80 ಅಂಕಗಳನ್ನು ಗಿಟ್ಟಿಸಿಕೊಂಡಿದೆ. ಎರಡು ಹಾಗೂ ಮೂರನೇ ಸ್ಥಾನಗಳನ್ನು ಹಂಚಿಕೊಂಡಿರುವ ಫ್ರಾನ್ಸ್ ಮತ್ತು ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕರು ಅನುಕ್ರಮವಾಗಿ 113 ಹಾಗೂ 123 ಅಂಕಗಳನ್ನು ಗಿಟ್ಟಿಸಿಕೊಂಡಿದೆ. ಈ ಪಟ್ಟಿಯಲ್ಲಿ ಜರ್ಮನಿ (168 ಅಂಕ), ಬ್ರಿಟನ್ (209) ಅಮೆರಿಕ (158) ಮತ್ತು ಇಟಲಿ (170.5) ಹಿಂದೆ ಬಿದ್ದಿರುವುದು ಅಚ್ಚರಿಗೆ ಮೂಡಿಸಿದೆ.


Click it and Unblock the Notifications








