ಐಷಾರಾಮಿ ಕಾರುಗಳ ಬೆಲೆಗಳಲ್ಲಿ ಭಾರಿ ಇಳಿಕೆ

By Nagaraja

ದೇಶದಲ್ಲಿ ಐಷಾರಾಮಿ ಕಾರುಗಳ ಬೆಲೆಗಳಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಐಷಾರಾಮಿ ಸಂಸ್ಥೆಗಳು ದೇಶದಲ್ಲೇ ಸ್ಥಳೀಯವಾಗಿ ಜೋಡಣೆ ಪ್ರಕ್ರಿಯೆ ಆರಂಭಿಸಿರುವುದು ದರಗಳಲ್ಲಿ ಗಣನೀಯ ಇಳಿಕೆ ಕಂಡುಬರಲು ನೆರವಾಗಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಕಳೆದ ಒಂದೆರಡು ತಿಂಗಳುಗಳಲ್ಲಿ ಐಷಾರಾಮಿ ಕಾರುಗಳ ಬೆಲೆಗಳಲ್ಲಿ, ರು. 10 ಲಕ್ಷದಿಂದ 30 ಲಕ್ಷ ರು.ಗಳಷ್ಟು ಇಳಿಕೆ ಕಂಡುಬಂದಿದೆ.

Jaguar XJ

ಇದರಲ್ಲಿ ಪ್ರಮುಖವಾಗಿಯೂ 3.0 ಲೀಟರ್ ಜಾಗ್ವಾರ್ ಎಕ್ಸ್‌ಜೆ ಸೆಡಾನ್ ಕಾರಿಗೆ 25 ಲಕ್ಷ ರು.ಗಳಷ್ಟು ಇಳಿಕೆ ಕಂಡುಬಂದಿದ್ದು, ಇದೀಗ 91 ಲಕ್ಷ ರು.ಗಳಿಗೆ ತಲುಪಿದೆ. ಅದೇ ರೀತಿ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ 500 ಮಾದರಿಯಲ್ಲಿ 30 ಲಕ್ಷ ರು.ಗಳಷ್ಟು ಇಳಿಕೆ ಕಂಡಿದ್ದು, 1.36 ಕೋಟಿ ರು.ಗಳಿಗೆ (ಪುಣೆ ಎಕ್ಸ್ ಶೋ ರೂಂ) ತಲುಪಿದೆ. ಅದೇ ರೀತಿ ಬಿಎಂಡಬ್ಲ್ಯು ಎಕ್ಸ್5 ಆವೃತ್ತಿಯು 10 ಲಕ್ಷ ರು.ಗಳಷ್ಟು ಅಗ್ಗವಾಗಿ 70.9 ಲಕ್ಷ ರು.ಗಳಿಗೆ ತಲುಪಿದೆ.

2013ನೇ ಆರ್ಥಿಕ ಸಾಲಿನಿಂದ 2014ನೇ ಆರ್ಥಿಕ ಸಾಲಿನ ವರೆಗಿನ ಅವಧಿಯಲ್ಲಿ ಲಗ್ಷುರಿ ಕಾರುಗಳ ಸಂಖ್ಯೆ 28,000 ಯುನಿಟ್‌ಗಳಿಂದ 35,000 ಯುನಿಟ್‌ಗಳಿಗೆ ಏರಿಕೆಯಾಗಿದೆ. ಇದರಿಂದಾಗಿ ಐಷಾರಾಮಿ ಸಂಸ್ಥೆಗಳು ದೇಶದಲ್ಲೇ ಸ್ಥಳೀಯವಾಗಿ ಜೋಡಣೆ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಂತೆ ಜಾಗ್ವಾರ್ ಸಂಸ್ಥೆಯು ಪುಣೆಯಲ್ಲಿ ಜೋಡಣೆ ಕಾರ್ಯ ಆರಂಭಿಸಿದೆ. ಈ ಮೂಲಕ ಭಾರಿ ಪ್ರಮಾಣದ ಆಮದು ತೆರಿಗೆ ಹೊರೆಯನ್ನು ತಪ್ಪಿಸಲು ನೆರವಾಗಿದೆ.

More from DriveSpark

Article Published On: Tuesday, June 10, 2014, 12:42 [IST]
English summary
The prices of luxury cars have dropped in the country as carmakers have begun to assemble cars and source engines and parts locally, reports ET.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+