ಬೇಡಿಕೆಗೆ ಅನುಸಾರವಾಗಿ ಸ್ಕಾರ್ಪಿಯೊ ಆಟೋಮ್ಯಾಟಿಕ್ ಲಭ್ಯ

Written By:

ದೇಶದ ಅತ್ಯಂತ ಜನಪ್ರಿಯ ಎಸ್‌ಯುವಿ ಮಾದರಿಯಾಗಿರುವ ಮಹೀಂದ್ರ ಸ್ಕಾರ್ಪಿಯೊ, ಆಟೋಮ್ಯಾಟಿಕ್ ಇನ್ನು ಮುಂದೆ ವೆರಿಯಂಟ್ ಬೇಡಿಕೆಗೆ ಅನುಸಾರವಾಗಿ ಲಭ್ಯವಾಗಲಿದೆ.

ಮಹೀಂದ್ರಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿದಿದ್ದ ಇಕೊಸ್ಪೋರ್ಟ್, ಡಸ್ಟರ್ ಹಾಗೂ ಟೆರನೊಗಳಂತಹ ಆವೃತ್ತಿಗಳು ದೇಶದ ಎಸ್‌ಯುವಿ ವಿಭಾಗದಲ್ಲಿ ತನ್ನದೇ ಆದ ಸ್ಥಾನ ಗಟ್ಟಿಪಡಿಸುವ ಇರಾದೆಯಲ್ಲಿದೆ. ಇನ್ನೊಂದೆಡೆ ದಶಕದ ಹಿಂದೆಯೇ ಅಂದರೆ 2002ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಸ್ಕಾರ್ಟಿಯೊ 7.82 ಲಕ್ಷ ರು.ಗಳಿಂದ 12.75 ಲಕ್ಷ ರು.ಗಳಲ್ಲಿ ಲಭ್ಯವಿರುತ್ತದೆ.

Mahindra Scorpio

ಮೇಲೆ ತಿಳಿಸಿದ ಮಾದರಿಗಳನ್ನು ತಿಳಿಸಿದಾಗ ಮಹೀಂದ್ರ ಸ್ಕಾರ್ಪಿಯೊ ಸ್ವಲ್ಪ ದುಬಾರಿಯಾಗಿದೆ. ಅಲ್ಲದೆ ಇದರ ಟಾಪ್ ಎಂಡ್ ಆಟೋಮ್ಯಾಟಿಕ್ ವೆರಿಯಂಟ್‌ಗಳಾದ ವಿಎಲ್‌ಎಕ್ಸ್ 2 ವೀಲ್ ಡ್ರೈವ್ ಹಾಗೂ ವಿಎಲ್‌ಎಕ್ಸ್ 4 ವೀಲ್ ಡ್ರೈವ್ ಅನುಕ್ರಮವಾಗಿ 11.72 ಹಾಗೂ 12.75 ಲಕ್ಷ ರು.ಗಳಷ್ಟು ದುಬಾರಿಯಾಗಿದೆ.

ಇದು ಒಂದು ಹಂತದಲ್ಲಿ ಮಹೀಂದ್ರ ಎಕ್ಸ್‌ಯುವಿ500 ಮಾದಿರಯನ್ನು ಮೀರಿಸುವಂತಿದೆ. ಯಾಕೆಂದರೆ ಮಹೀಂದ್ರ ಎಕ್ಸ್‌ಯುವಿ500 ವಿ4 ಹಾಗೂ ವಿ6 ಟು ವೀಲ್ ಡ್ರೈವ್‌ಗಿಂತಲೂ (10.69 ಹಾಗೂ 11.91 ಲಕ್ಷ ರು.) ಸ್ಕಾರ್ಪಿಯೊ ದುಬಾರಿಯೆನಿಸಿದೆ.

ಇವೆಲ್ಲದರಿಂದ ಸ್ಕಾರ್ಪಿಯೊ ಆಟೋಮ್ಯಾಟಿಕ್ ವೆರಿಯಂಟ್ ಬೇಡಿಕೆ ಕುಸಿತಗೊಳ್ಳಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಬೇಡಿಕೆಗಾನುಸಾರವಾಗಿ ಆಟೋಮ್ಯಾಟಿಕ್ ವೆರಿಯಂಟ್ ವಿತರಿಸಲು ನಿರ್ಧರಿಸಿದೆ. ಅಂದ ಹಾಗೆ ಮಹೀಂದ್ರ ಸ್ಕಾರ್ಪಿಯೊ ಆಟೋಮ್ಯಾಟಿಕ್ ವೆರಿಯಂಟ್ 2197 ಸಿಸಿ, 4 ಸಿಲಿಂಡರ್, ಎಂಹಾಕ್‌ಸಿಆರ್‌ಡಿಇ, ಟರ್ಬೊಚಾರ್ಜ್ಡ್, ಕಾಮನ್ ರೈಲ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 120 ಅಶ್ವಶಕ್ತಿ (290 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

English summary
Mahindra Scorpio, the SUV maker's most popular model, is outdated in a world of new SUVs and compact SUVs like the EcoSport, Duster and Terrano. Nevertheless, it continues to be the best selling SUV in India.
Story first published: Tuesday, May 13, 2014, 13:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark