ಗ್ರಾಹಕರ ಇಷ್ಟಕ್ಕೆ ಒಗ್ಗಿದ ಕಾರು ಸಂಸ್ಥೆಗಳು

By Nagaraja

ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ಬೆಲೆಗಳ ನಡುವಣ ಅಂತರ ಕಡಿಮೆಯಾಗುತ್ತಲೇ ಬರುತ್ತದೆ. ಆದರೆ ಗ್ರಾಹಕರು ಮಾತ್ರ ಇನ್ನು ಪೆಟ್ರೋಲ್ ಕಾರುಗಳ ಮೇಲೆ ಹೆಚ್ಚು ನೆಚ್ಚಿಕೊಂಡಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ವಾಹನ ತಯಾರಿಕ ಸಂಸ್ಥೆಗಳು ಸಹ ಗ್ರಾಹಕರ ಬೇಡಿಕೆಗಳಿಗಾನುಸಾರವಾಗಿ ಪೆಟ್ರೋಲ್ ಕಾರುಗಳನ್ನೇ ಹೆಚ್ಚೆಚ್ಚು ನಿರ್ಮಿಸುವುದರಲ್ಲಿ ಕಾರ್ಯ ಮಗ್ನವಾಗಿದೆ.

ವರದಿಯೊಂದರ ಪ್ರಕಾರ ಡೀಸೆಲ್ ಮಾದರಿಗಳಿಗೆ ಹೋಲಿಸಿದರೆ ಮುಂಬರುವ 2015ರ ಸಾಲಿನಲ್ಲೂ ಪೆಟ್ರೋಲ್ ವಾಹನಗಳ ಉತ್ಪಾದನೆ ಹೆಚ್ಚೆಚ್ಚು ಕಂಡುಬರಲಿದೆ.

cars

ಕಳೆದ ಕೆಲವು ತಿಂಗಳುಗಳಲ್ಲಿ ಪೆಟ್ರೋಲ್ ವಾಹನಗಳ ಮಾರಾಟ ಹೆಚ್ಚಿದೆ. ಇದು ದೇಶೀಯ ಮಾರಾಟದ ಶೇ. 58ರಷ್ಟನ್ನು ಆಕ್ರಮಿಸಿಕೊಂಡಿದೆ. ಇದೇ ಪ್ರವೃತ್ತಿ ಮುಂದುವರಿದ್ದಲ್ಲಿ ಮುಂದಿನ ಸಾಲಿನಲ್ಲಿ ಪೆಟ್ರೋಲ್ ವಾಹನಗಳ ಮಾರಾಟ ಶೇ.60ಕ್ಕೆ ತಲುಪಲಿದೆ.

ಕಳೆದ ವರ್ಷದ ವರೆಗೂ ಡೀಸೆಲ್ ಕಾರುಗಳು ಬೇಡಿಕೆ ಕಾಯ್ದುಕೊಂಡಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸಬ್ಸಿಡಿ ನೀತಿ ಪರಿಣಾಮಕಾರಿಯೆನಿಸಿತ್ತು. ಆದರೆ ಮುಂದುವರಿದ ಬೆಳವಣಿಗೆಯಲ್ಲಿ ಡೀಸೆಲ್ ಬೆಲೆಯನ್ನು ಅನಿಯಂತ್ರಣಗೊಳಿಸಿತ್ತು.

ಮಹೀಂದ್ರದಂತಹ ಡೀಸೆಲ್ ಸ್ನೇಹಿ ಕಾರುಗಳ ಮಾರಾಟವೇ 2014 ಆರ್ಥಿಕ ಸಾಲಿನಲ್ಲಿ ಶೇಕಡಾ 20ರಷ್ಟು ಕುಸಿತ ಕಂಡಿರುವುದೇ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ.

ಇನ್ನೊಂದೆಡೆ ನೂತನ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಪರಿಚಯಿಸಿರುವ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.

More from DriveSpark

Article Published On: Tuesday, December 23, 2014, 11:43 [IST]
English summary
Car manufacturers are favouring production of petrol engined vehicles as customers are preferring them too, as fuel price difference is narrowing over time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+