ಮಾರುತಿ ಸುಜುಕಿ ಎರ್ಟಿಗಾ ಸೀಮಿತ ಆವೃತ್ತಿ ಲಾಂಚ್
ಕಳೆದ ದಿನವಷ್ಟೇ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ರಿಟ್ಜ್ ಎಲೇಟ್ ಸೀಮಿತ ಆವೃತ್ತಿ ಲಾಂಚ್ ಮಾಡಿರುವುದರ ಬಗ್ಗೆ ಮಾಹಿತಿ ಕೊಟ್ಟಿರುತ್ತೇವೆ (ಇಲ್ಲಿದೆ ಓದಿ). ಇದರ ಬೆನ್ನಲ್ಲೇ ದೇಶದ ಜನಪ್ರಿಯ ಸಂಸ್ಥೆಯು ಗ್ರಾಹಕರಿಗಾಗಿ ಮಗದೊಂದು ಕೊಡುಗೆಯನ್ನು ನೀಡುತ್ತಿದೆ.
ಹೌದು, ಮಾರುತಿ ತನ್ನ ಬಹು ಬಳಕೆಯ ವಾಹನವಾಗಿರುವ ಎರ್ಟಿಗಾದ ಸೀಮಿತ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 8.05 ಲಕ್ಷ ರು.ಗಳಾಗಿದೆ.

ಭಾರತದಲ್ಲಿ ಒಂದು ವರೆ ಲಕ್ಷ ಯುನಿಟ್‌ಗಳ ಮಾರಾಟದ ಯಶಸ್ಸನ್ನು ಆಚರಿಸುವ ನಿಟ್ಟಿನಲ್ಲಿ ಎರ್ಟಿಗಾ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಪೆಟ್ರೋಲ್, ಸಿಎನ್‌ಜಿ ಮತ್ತು ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಎರ್ಟಿಗಾ ಪೆಟ್ರೋಲ್ ವೆರಿಯಂಟ್ ಬೆಲೆ 6.76 ಲಕ್ಷ ರು.ಗಳಿಷ್ಟಿದ್ದರೆ ಸಿಎನ್ಜಿ 7.34 ಲಕ್ಷ ರು. ಮತ್ತು ಡೀಸೆಲ್ 8.05 ಲಕ್ಷ ರು.ಗಳಿಷ್ಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿ ಇಂಡಿಯಾ ಉಪಾಧ್ಯಕ್ಷ (ಮಾರ್ಕೆಟಿಂಗ್) ಮನೋಹರ್ ಭಟ್, "ನೂತನ ಎರ್ಟಿಗಾ ಸೀಮಿತ ಆವೃತ್ತಿಯು ನಯವಾದ ಕ್ರೋಮ್ ಗ್ರಿಲ್, ಆಕರ್ಷಕ ಒಳಮೈ, ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಸ್ಪಾಯ್ಲರ್ ಮತ್ತು ಕ್ಲಾಸಿಕ್ ಬಾಡಿ ಗ್ರಾಫಿಕ್ಸ್ ಗ್ರಾಹಕರಿಗೆ ಸದಾಭಿರುಚಿಯನ್ನು ನೀಡಲಿದೆ" ಎಂದಿದ್ದಾರೆ.
ಒಟ್ಟಿನಲ್ಲಿ ಬಹುನಿರೀಕ್ಷಿತ ಹೋಂಡಾ ಮೊಬಿಲಿಯೊ ಜುಲೈ 24ರಂದು ಮಾರುಕಟ್ಟೆ ಎಂಟ್ರಿ ಕೊಡುತ್ತಿರುವಂತೆಯೇ ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ ಬಿಡುಗಡೆಗೊಂಡಿರುವುದು ಮಾರುಕಟ್ಟೆಯಲ್ಲಿ ಇನ್ನಷ್ಟು ಪೈಪೋಟಿ ಸೃಷ್ಟಿಮಾಡುವ ನಿರೀಕ್ಷೆಯಿದೆ.


Click it and Unblock the Notifications








