ನಿಸ್ಸಾನ್‌ನಿಂದ ಭಾರತದಲ್ಲಿ 9,000 ಕಾರುಗಳಿಗೆ ವಾಪಾಸ್ ಕರೆ

Written By:

ಇದೀಗಷ್ಟೇ ಜಾಗತಿಕವಾಗಿ ಎರಡು ಪ್ರಖ್ಯಾತ ವಾಹನ ತಯಾರಕ ಸಂಸ್ಥೆಗಳು ಭಾರಿ ಸಂಖ್ಯೆ ಕಾರುಗಳನ್ನು ವಾಪಾಸ್ ಕರೆಯಿಸಿಕೊಂಡಿತ್ತು. ಇದಾದ ಬೆನ್ನಲ್ಲೇ ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್ ಇಂಡಿಯಾ, ಭಾರತದಲ್ಲಿ 9,000ದಷ್ಟು ಮೈಕ್ರಾ ಹ್ಯಾಚ್‌ಬ್ಯಾಕ್ ಮತ್ತು ಸನ್ನಿ ಸೆಡಾನ್ ಕಾರುಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿದೆ.

ಏರ್‌ಬ್ಯಾಗ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ನಿಸ್ಸಾನ್‌ನಿಂದ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ. ವರದಿಗಳ ಪ್ರಕಾರ ಬಾಹ್ಯ ಮಾರಾಟಗಾರ ತಕಟ (Takata)ಆಳವಡಿಸಿರುವ ಏರ್‌ಬ್ಯಾಗ್‌ನಲ್ಲಿ ಸಮಸ್ಯೆ ತಲೆದೋರಿದೆ.

ಕಳೆದ ದಿನವಷ್ಟೇ ಜರ್ಮನಿಯ ಪ್ರತಿಷ್ಠಿತ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ಏರ್ ಬ್ಯಾಗ್ ಸಮಸ್ಯೆಯ ಹಿನ್ನಲೆಯಲ್ಲಿ 8.5 ಲಕ್ಷ ಕಾರುಗಳನ್ನು ಹಿಂದಕ್ಕೆ ಕರೆಯಿಸಿಕೊಂಡಿತ್ತು. ಆದರೆ ಈ ಪ್ರಕರಣದಲ್ಲಿ ಆಡಿಯ ತನ್ನದೇ ಸಾಫ್ಟ್‌ವೇರ್‌ನಲ್ಲಿ ತೊಂದರೆ ಕಾಣಿಸಿಕೊಂಡಿತ್ತು.

ಇದಕ್ಕೂ ಮೊದಲು ಫೋಕ್ಸ್‌ವ್ಯಾಗನ್ ಸಂಸ್ಥೆಯು ಹಿಂದುಗಡೆಯ ಸಸ್ಪಷನ್‌ನಲ್ಲಿ ತೊಂದರೆ ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ಜಾಗತಿಕವಾಗಿ 1.1 ಮಿಲಿಯನ್ ಕಾರುಗಳನ್ನು ವಾಪಾಸ್ ಕರೆಯಿಸಿಕೊಂಡಿತ್ತು.

nissan micra

2008ನೇ ಇಸವಿಯಿಂದ 2012ರ ವರೆಗೆ ನಿರ್ಮಾಣವಾದ ನಿಸ್ಸಾನ್ ಮೈಕ್ರಾ ಹಾಗೂ ಸನ್ನಿ ಸೆಡಾನ್ ಕಾರುಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ. ಈ ಸಂಬಂಧ ಗ್ರಾಹಕರಿಗೆ ಶೀಘ್ರದಲ್ಲೇ ಸೂಚಿಲಾಗುವುದು. ಅಲ್ಲದೆ ತೊಂದರೆ ಕಂಡುಬಂದ್ದಲ್ಲಿ ಸಂಪೂರ್ಣವಾಗಿ ಉಚಿತವಾಗಿ ಸರಿಪಡಿಸಿಕೊಡಲಾಗುವುದು ಎಂದು ನಿಸ್ಸಾನ್ ವಕ್ತಾರ ತಿಳಿಸಿದ್ದಾರೆ.

ಇನ್ನೊಂದೆಡೆ ತಕಟ ಏರ್ ಬ್ಯಾಗ್‌ನಿಂದಾಗಿ ಸಮಸ್ಯೆ ಅನುಭವಿಸಿರುವ ಟೊಯೊಟಾ ಸಹ ಜಾಗತಿಕವಾಗಿ 3.6 ಮಿಲಿಯನ್ ಹಾಗೂ ಹೋಂಡಾ 2 ಮಿಲಿಯನ್ ಕಾರುಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿದೆ.

English summary
Nissan is to recall around 9,000 cars of the Micra and Sunny sedan due to defective airbag issue. The airbags are from an external vendor, Takata.
Story first published: Saturday, October 25, 2014, 14:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark