ಲಂಡನ್‌ನಲ್ಲಿ ಪಿನಿನ್‌ಫರಿನಾ ಸೆರ್ಗಿಯೊ ಕಾನ್ಸೆಪ್ಟ್ ಅನಾವರಣ
ಇಟಲಿಯ ಪ್ರಖ್ಯಾತ ಫೆರಾರಿಗಳಂತಹ ಸೂಪರ್ ಕಾರುಗಳಿಗೆ ವಿನ್ಯಾಸ ರಚಿಸಿರುವ ಐಕಾನಿಕ್ ಡಿಸೈನ್ ಸಂಸ್ಥೆಯಾಗಿರುವ ಪಿನಿನ್‌ಫರಿನಾ ಲಂಡನ್‌ನಲ್ಲಿ ತನ್ನ ನೂತನ ಪಿನಿನ್‌ಫರಿನಾ ಸೆರ್ಗಿಯೊ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸಿದೆ.
ಪಿನಿನ್‌ಫರಿನಾ ಸಂಸ್ಥೆಯ ಸ್ಥಾಪಕ ಬತ್ತಿಸ್ಟಾ ಫರಿನಾ ಗೌರವಾರ್ಥವಾಗಿ ಇದನ್ನು ಪ್ರದರ್ಶನಗೊಳಿಸಲಾಗಿದೆ. ಕಳೆದ ವರ್ಷ ನಡೆದ ಜಿನೆವಾ ಮೋಟಾರು ಶೋದಲ್ಲಿ ಇದನ್ನು ಪ್ರದರ್ಶಿಸಲಾಗಿತ್ತು.

ಆದರೆ ಸರಿಯಾದ ಸುರಕ್ಷತಾ ಮಾನದಂಡ ಅನುಸರಿಸಲು ವಿಫಲವಾಗಿದ್ದರಿಂದ ನಿರ್ಮಾಣ ಆವೃತ್ತಿಗೆ ತೊಡಕು ಎದುರಾಗಿತ್ತು. ಇದರಿಂದ ಪಿನಿನ್‌ಫರಿನಾ ಮುಖ್ಯ ವಿನ್ಯಾಸಗಾರ ಫ್ಯಾಬಿಯೊ ಫಿಲಿಪ್ಪಿನಿ ಜವಾಬ್ದಾರಿ ವಹಿಸಿಕೊಂಡಿದ್ದರು.

ಈ ವಿಶಿಷ್ಟ ರೀತಿಯ ಕಾರನ್ನು ಫೆರಾರಿ 458 ಇಟಲಿಯಾ ತಲಹದಿಯಲ್ಲಿ ರೂಪಿಸಲಾಗಿದೆ. ಇದರ 4.5 ಲೀಟರ್ ವಿ8 ಎಂಜಿನ್ 570 ಅಶ್ವಶಕ್ತಿ ಉತ್ಪಾದಿಸುತ್ತದೆ.

ಅಲ್ಲದೆ 3.2 ಸೆಕಂಡುಗಳಲ್ಲಿ ಗಂಟೆಗೆ 100 ಕೀ.ಮೀ. ಅದೇ ರೀತಿ ಗರಿಷ್ಠ 320 ಕೀ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಬರ್ಶೆಟ್ಟಾ (Barchetta) ದೇಹ ಶೈಲಿಯನ್ನು ಇದು ಪಡೆದುಕೊಂಡಿದೆ. ಇದರ ಓಪನ್ ಟಾಪ್ ವಿನ್ಯಾಸ ಹೆಚ್ಚು ಗಮನಸೆಳೆದಿದೆ.

ಇಲ್ಲಿ 458 ಇಟಲಿಯಾದ ಸಾಂಪ್ರದಾಯಿಕ ವಿನ್ಯಾಸದ ಬದಲು ಕ್ವಾರ್ಟರ್ ಸೀಸರ್ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ.

ಸಂಪೂರ್ಣವಾಗಿ ಕಸ್ಟಮೈಸ್ಡ್ ಮಾಡಲಾಗಿರುವ ಈ ಕಾರು ಬರೋಬ್ಬರಿ ಎರಡು ದಶಲಕ್ಷ ಅಮೆರಿಕನ್ ಡಾಲರುಗಳಷ್ಟು ಬೆಲೆ ಬಾಳುತ್ತದೆ. ಅಲ್ಲದೆ ಮುಂದಿನ ನಾಲ್ಕು ತಿಂಗಳಲ್ಲಿ ಗ್ರಾಹಕರ ಕೈ ಸಿಗಲಿದೆ.


Click it and Unblock the Notifications








