ಡಸ್ಟರ್‌ಗೆ 2 ವರ್ಷಗಳ ಸಂಭ್ರಮ; ವಿಶೇಷ ವಾರ್ಷಿಕ ಆವೃತ್ತಿ ಲಾಂಚ್
ದೇಶದ ಜನಪ್ರಿಯ ಕ್ರೀಡಾ ಬಳಕೆಯ ವಾಹನಗಳಲ್ಲಿ (ಎಸ್‌ಯುವಿ) ಒಂದಾಗಿರುವ ರೆನೊ ಡಸ್ಟರ್, ಎರಡು ಯಶಸ್ವಿ ವರ್ಷಗಳನ್ನು ಪೂರ್ಣಗೊಳಿಸಿದೆ. ಇದರಂಗವಾಗಿ ಫ್ರಾನ್ಸ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ವಿಶೇಷ ವಾರ್ಷಿಕ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಕಳೆದೆರಡು ವರ್ಷಗಳಲ್ಲಿ ಒಂದು ಲಕ್ಷ ಯುನಿಟ್‌ಗಳ ಮಾರಾಟ ಸಂಖ್ಯೆಯನ್ನು ತಲುಪಿರುವ ಡಸ್ಟರ್, 2014 ಜೂನ್ ತಿಂಗಳಿನಲ್ಲಷ್ಟೇ ಡಸ್ಟರ್ ಒಂದು ಲಕ್ಷದ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಇದಾದ ಬೆನ್ನಲ್ಲೇ ಎರಡು ವರ್ಷಗಳ ಸಂಭ್ರಮದ ಹಿನ್ನಲೆಯಲ್ಲಿ ದೇಶದ ಗ್ರಾಹಕರಿಗೆ ಮಗದೊಂದು ಆಕರ್ಷಕ ವಾರ್ಷಿಕ ಆವೃತ್ತಿಯನ್ನು ಪರಿಚಯಿಸುತ್ತಿದೆ.

ರೆನೊ ಡಸ್ಟರ್ ಅಡ್ವೆಂಚರ್ ಆವೃತ್ತಿಗೆ ಸಮಾನವಾಗಿರುವ ನೂತನ ವಾರ್ಷಿಕ ಎಡಿಷನ್, ಹೊಸತಾದ ಅಮಜೋನ್ ಗ್ರೀನ್ ಎಕ್ಸ್‌ಟೀರಿಯರ್ ಬಣ್ಣ, ನಿಯೋನ್ ಒಳಮೈ ಹಾಗೂ ದಿಟ್ಟವಾದ ಆರ್ಮರ್ ಜತೆ ಲ್ಯಾಂಪ್ ಪಡೆದುಕೊಳ್ಳಲಿದೆ. ಅಷ್ಟೇ ಅಲ್ಲದೆ ಸ್ಪೋಕ್ಡ್ ಹೆಡ್‌ಲ್ಯಾಂಪ್ ಮತ್ತು ಸುತ್ತಲೂ ಬಾಡಿ ಕ್ಲಾಡಿಂಗ್ ಕೂಡಾ ಇರಲಿದೆ.
ಕಾರಿನಡಿಯಲ್ಲಿ ಹೊಸ ಎಸ್‌ಯುವಿ ಕಾರು 1.5 ಲೀಟರ್ ಡಿಸಿಐ ಎಂಜಿನ್ (dCi) ಪಡೆದುಕೊಳ್ಳಲಿದ್ದು, 85 ಅಶ್ವಶಕ್ತಿ (200 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಫೈವ್ ಸ್ಪೇಡ್ ಟ್ರಾನ್ಸ್‌ಮಿಷನ್ ಸಹ ಇರಲಿದೆ. ಇದರ ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ 20.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ದೆಹಲಿ ಎಕ್ಸ್ ಶೋ ರೂಂ 8.8 ಲಕ್ಷ ರು.ಗಳಿಗೆ ಬಿಡುಗಡೆಯಾಗಿರುವ ಹೊಸ ಡಸ್ಟರ್ 2ನೇ ವಾರ್ಷಿಕ ಆವೃತ್ತಿಯು ಎರಡು ವರ್ಷಗಳ ಹೆಚ್ಚುವರಿ ವಾರಂಟಿ ಸಹ ಪಡೆಯಲಿದೆ. ಇದರ ಜೊತೆಗೆ ನಾಲ್ಕು ವರ್ಷಗಳ ರೋಡ್ ಸೈಡ್ ಅಸಿಸ್ಟನ್ಸ್ ಮತ್ತು ಗ್ಯಾಂಗ್ ಆಫ್ ಡಸ್ಟರ್ ಸದಸ್ಯತನ ಸಹ ಸಿಗಲಿದೆ.
ನಿಮ್ಮ ಗಮನಕ್ಕೆ: ಅಂದ ಹಾಗೆ ಡಸ್ಟರ್ ಎರಡನೇ ವರ್ಷದ ವಾರ್ಷಿಕ ವಿಶೇಷ ಆವೃತ್ತಿಯು 2014 ಜುಲೈ 20ರ ವರೆಗೆ ಮಾತ್ರ ಲಭ್ಯವಾಗಲಿದೆ.


Click it and Unblock the Notifications








