ಸ್ಯಾಂಗ್ಯೊಂಗ್ ಹೊಸ ಪಟ್ಟಣ ಎಸ್‌ಯುವಿ ಹೆಸರು ಏನು ಗೊತ್ತೇ?
ದೇಶದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಜೊತೆಗೆ ಪಾಲುದಾರಿಕೆ ಹೊಂದಿರುವ ಸ್ಯಾಂಗ್ಯೊಂಗ್ ಹೊಸ ಅರ್ಬನ್ ಕ್ರೀಡಾ ಬಳಕೆಯ ವಾಹನದ ಅಭಿವೃದ್ಧಿಯಲ್ಲಿ ತೊಡಗಿದೆ.
ಭಾರತದಲ್ಲಿ ಮಹೀಂದ್ರ ಸಂಸ್ಥೆಯ ನೆರವಿನೊಂದಿಗೆ ಸ್ಯಾಂಗ್ಯೊಂಗ್ ವಾಹನಗಳು ಮಾರಾಟವಾಗುತ್ತಿದೆ. ಇದೇ ಕಾರಣಕ್ಕಾಗಿ ಎಕ್ಸ್100 ಎಸ್‌ಯುವಿ ಯೋಜನೆಯು ಅತಿ ಹೆಚ್ಚಿನ ಗಮನಕ್ಕೆ ಪಾತ್ರವಾಗಿದೆ.

ಅಂದ ಹಾಗೆ ಹೊಸ ಸ್ಯಾಂಗ್ಯೊಂಗ್ ವಾಹನ ಟಿವೊಲಿ (Tivoli) ಎಂದು ಹೆಸರಿಸಲ್ಪಡಲಿದೆ. ಇದು 2015 ವರ್ಷಾರಂಭದಲ್ಲೇ ಭಾರತ ಮಾರುಕಟ್ಟೆ ತಲುಪಲಿದೆ ಎಂಬುದನ್ನು ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಾ. ಪವನ್ ಗೋನ್ಖಾ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿಪಡಿಸುತ್ತಿರುವ ಈ ಎಸ್‌ಯುವಿ ಮೊದಲು ತವರೂರದ ಕೊರಿಯದಲ್ಲಿ ಬಿಡುಗಡೆಯಾಗಲಿದೆ. ಇಲ್ಲಿ ಟಿವೊಲಿ ಎಂಬುದು ಶೈಲಿಯನ್ನು ಪ್ರತಿಪಾದಿಸಲಿದೆ.

ಹಾಗಿದ್ದರೂ ಟಿವೊಲಿ ಕಾಂಪಾಕ್ಟ್ ಎಸ್‌ಯುವಿ ಎಂಜಿನ್ ಬಗೆಗಿನ ಮಾಹಿತಿಗಳು ಹೊರಬಂದಿಲ್ಲ. ಇದು ಬಿಡುಗಡೆ ವೇಳೆಯಷ್ಟೇ ಲಭ್ಯವಾಗುವ ನಿರೀಕ್ಷೆಯಿದೆ.

ಮೆಟ್ಜೆಲೆರ್ ರೋಡ್ ಟೆಕ್ ಝಡ್6 ಟ್ಯೂಬ್‌ಲೆಸ್ - ಶೇ.10ರಷ್ಟು ರಿಯಾಯಿತಿ ತ್ವರೆ ಮಾಡಿ


Click it and Unblock the Notifications








