ಟಾಟಾದಿಂದ ರೆವೋಟ್ರಾನ್ ಎಂಜಿನ್ ಪ್ರಚಾರ ಚುರುಕು

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಹೊಸದಾಗಿ ಅಭಿವೃದ್ಧಿಪಡಿಸಿದ "ರೆವೋಟ್ರನ್" ಎಂಜಿನ್ ಕುರಿತ ಪ್ರಚಾರ ಅಭಿಯಾನವನ್ನು ದೇಶದಾದ್ಯಂತ ವಿನೂತನ ಶೈಲಿಯಲ್ಲಿ ಆರಂಭಿಸಿದೆ. ನೂತನ ಕಾರುಗಳಾದ "ಜೆಸ್ಟ್" ಮತ್ತು "ಬೋಲ್ಟ್" ಮಾರುಕಟ್ಟೆ ಪ್ರವೇಶಕ್ಕೂ ಮುಂಚಿತವಾಗಿ ಅತ್ಯುತ್ಕೃಷ್ಟ ಶ್ರೇಣಿಯ 'ರೆವೋಟ್ರಾನ್' ಎಂಜಿನನ್ನು ವಾಹನ ಪ್ರಿಯರಿಗೆ ಪರಿಚಯಿಸುವುದೇ ಈ ಪ್ರಚಾರ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಭಾರತದ ಪ್ರಪ್ರಥಮ 1.2 ಲೀಟರ್ ಎಂಪಿಎಫ್‍ಐ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಇದಾಗಿದ್ದು, ಬಹು ಮಾದರಿ ಚಾಲನಾ ವೈಖರಿಯ ಎಂಜಿನ್ ನೇರ ಅನುಭವವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಮಾಡುವುದೂ ಸಹ ಈ ಪ್ರಚಾರ ಅಭಿಯಾನದ ಗುರಿಯಾಗಿದೆ. ಆ ಮೂಲಕ ಬ್ರಾಂಡ್ ಪ್ರಚಾರದ ಉದ್ದೇಶವನ್ನೂ ಹೊಂದಲಾಗಿದೆ.

ಬೆಂಗಳೂರು, ದೆಹಲಿ, ಮುಂಬೈ, ಲುದಿಯಾನ, ಹೈದರಾಬಾದ್‍ಗಳಲ್ಲಿಯೂ ವಿಶ್ವದರ್ಜೆಯ ರೆವೋಟ್ರಾನ್ ಪ್ರಯೋಗಾಲಯಗಳನ್ನು ಶುಕ್ರವಾರ ಉದ್ಘಾಟಿಸುವ ಮೂಲಕ ಟಾಟಾ ಮೋಟಾರ್ಸ್ ದೇಶಾದ್ಯಂತದ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದೆ. ಬೆಂಗಳೂರಿನಲ್ಲಿನ ರೇವೋಟ್ರನ್ ಪ್ರಯೋಗಾಲಯ ಕೋರಮಂಗಲದಲ್ಲಿನ ಫೋರಂ ಮಾಲ್‍ನಲ್ಲಿ ನೆಲೆಗೊಂಡಿದೆ. ಅಲ್ಲದೇ, 2014ರ ಜುಲೈ 11ರಿಂದ 13ರವರೆಗೆ ನಗರದ ಫೀನಿಕ್ಸ್ ಮಾಲ್‍ನಲ್ಲಿಯೂ ಈ ಪ್ರಯೋಗಾಲಯವನ್ನು ಪ್ರಸ್ತುತಪಡಿಸಲಾಗುತ್ತಿದೆ.

ವಿಶಿಷ್ಟತೆ

  • ಭಾರತದ ಪ್ರಪ್ರಥಮ 1.2 ಲೀಟರ್ ಎಂಪಿಎಫ್‍ಐ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್
  • 15 ದೇಶಗಳಲ್ಲಿ ವಿಶ್ವದರ್ಜೆಯ ರೆವೋಟ್ರಾನ್ ಪ್ರಯೋಗಾಲಯ
  • ಗ್ರಾಹಕರಿಗೆ 'ಭವಿಷ್ಯದ ಎಂಜಿನ್' ಅನುಭವ
  • 75 ವಿತರಕರ ಮೂಲಕ ವಿತರಣೆ
  • ಇದೆಲ್ಲದರ ಜತೆಗೆ, ವೈಶಿಷ್ಟ್ಯಪೂರ್ಣ ಆಟವಾದ "ರೆವೋಟ್ರಾನ್ ಚಾಲೆಂಜ್"ನಲ್ಲಿ (ಈ ಆಟದಲ್ಲಿ ಸ್ಪೋರ್ಟ್, ಇಕೊ ಮತ್ತು ಸಿಟಿ ಎಂಬ ಬಹು ಮಾದರಿ ಚಾಲನಾ ವೈಖರಿಯ ಎಂಜಿನ್ ನೇರ ಅನುಭವ ಪಡೆಯಲು ಸಾಧ್ಯ) ವಾಹನ ಪ್ರೇಮಿಗಳು ಒಳಗೊಳ್ಳುವಂತೆ ಮಾಡಲಾಗುವುದು
  • ಅಷ್ಟೇ ಅಲ್ಲದೆ, ರೆವೋಟ್ರನ್ ಮೈಕ್ರೊಸೈಟ್ ಮತ್ತು #ರೆವ್‍ಅಪ್ ದಿ ರೆವೋಟ್ರನ್ ಟ್ವಿಟ್ಟರ್ ಅಕ್ಟೀವೇಷನ್‍ನ ಡಿಜಿಟಲ್ ವೇದಿಕೆಯಲ್ಲಿ ಪ್ರಚಾರ ಅಭಿಯಾನದ ವಿಸ್ತರಣೆ

Revetron engine
ಫೋರಂ ಮಾಲ್‍ನಲ್ಲಿ ರೇವೋಟ್ರನ್ ಪ್ರಯೋಗಾಲಯದ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್‍ನ ದಕ್ಷಿಣ ವಲಯದ ಮಾರಾಟ ವ್ಯವಸ್ಥಾಪಕ ಪ್ರಶಾಂತ್ ಸಿಬಲ್ ಅವರು, 'ರೆವೋಟ್ರಾನ್ 1.2ಟಿ' ಎಂಜಿನನ್ನು ನಮ್ಮದೇ ತಂತ್ರಜ್ಞರು ಅಭಿವೃದ್ಧಿಪಡಿಸಿದ್ದಾರೆ. ಅದಕ್ಕಾಗಿ ಜಾಗತಿಕ ಮಟ್ಟದ ವಾಹನ ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳಾದ ಎವಿಎಲ್, ಬಾಷ್, ಹನಿವೆಲ್, ಮೆಹಲ್, ಐಎನ್‍ಎ ಕಂಪೆನಿಗಳಿಂದ ಕಂಬಷನ್, ಬೂಸ್ಟಿಂಗ್, ಫ್ರಿಕ್ಷನ್ ಮತ್ತು ಕ್ಯಾಲಿಬರೇಷನ್ ವಿಭಾಗಗಳಲ್ಲಿ ಪರಿಣತ ಹಾಗೂ ತಜ್ಞ ಅಂಶಗಳನ್ನು ಪಡೆದುಕೊಳ್ಳಲಾಗಿದೆ. ಆ ಮೂಲಕ ವಿಶ್ವಶ್ರೇಷ್ಠ ಗುಣಮಟ್ಟದ, ಅತ್ಯಂತ ಶಕ್ತಿಶಾಲಿಯಾದ ಎಂಜಿನ್ ಅಭಿವೃದ್ಧಿಪಡಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ರೆವೋಟ್ರಾನ್ 1.2 ಟಿ ಎಂಜಿನ್ ಮುಂದಿನ ದಿನಗಳಲ್ಲಿ ಟಾಟಾ ಮೋಟಾರ್ಸ್‍ನಿಂದ ರಸ್ತೆಗಿಳಿಯುವ ನೂತನ ಕಾರುಗಳಲ್ಲಿ ಸೇರ್ಪಡೆಯಾಗಲಿದೆ. ಸದ್ಯದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿರುವ "ಜೆಸ್ಟ್" ಮತ್ತು "ಬೋಲ್ಟ್" ಕಾರುಗಳಿಗೆ ರೆವೋಟ್ರಾನ್ 1.2 ಟಿ ಎಂಜಿನ್ ತನ್ನ ವಿಶೇಷ ಶಕ್ತಿ, ಸಾಮರ್ಥ್ಯವನ್ನು ತುಂಬಲಿದೆ ಎಂದು ವಿವರಿಸಿದರು.

ಈ ಯಶಸ್ಸಿನ, ಸಾಧನೆಯ ವಿಚಾರವನ್ನು ವಿಶೇಷ ರೀತಿಯಲ್ಲಿ ಪ್ರಸ್ತುತ ಪಡಿಸುವುದೂ ಅಷ್ಟೇ ಮುಖ್ಯವಾದುದು. ಈ ನಿಟ್ಟಿನಲ್ಲಿಯೇ ನಾವೀಗ ದೇಶದಾದ್ಯಂತ ಪ್ರಚಾರ ಅಭಿಯಾನ ಹಮ್ಮಿಕೊಂಡಿದ್ದು, ಗ್ರಾಹಕರನ್ನೂ ಈ ಪ್ರಯೋಗದಲ್ಲಿ ಒಳಪಡಿಸಿಕೊಳ್ಳುತ್ತಿದ್ದೇವೆ. ಆ ಮೂಲಕ ಬಹು ಮಾದರಿಯ, ಅತ್ಯಂತ ಶಕ್ತಿಶಾಲಿಯಾದ ಎಂಜಿನ್‍ನ ಅನುಭವವನ್ನು ಪಡೆದುಕೊಳ್ಳಲು ಗ್ರಾಹಕರಿಗೇ ನೇರ ಅವಕಾಶ ಮಾಡಿಕೊಡುತ್ತಿದ್ದೇವೆ. ಅದಕ್ಕಾಗಿ ಪ್ರಯೋಗಾಲಯ ಪ್ರದರ್ಶನ, ವಿಶೇಷ ಚಾಲನಾ ಗೇಮ್‍ಗಳಲ್ಲಿ ಪಾಲ್ಗೊಳ್ಳುವಿಕೆ, ಬಹಳ ವಿಶಿಷ್ಟವಾದ ಡಿಜಿಟಲ್ ಹೋಲೊಗ್ರಾಮ್ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Most Read Articles

Kannada
English summary
Tata starts campaign for its new 1.2 litre Revetron engine
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X