2016ನೇ ಸಾಲಿನಲ್ಲಿ ಟೊಯೊಟಾ ಪ್ರಯಾಸ್ ಭಾರತಕ್ಕೆ
ಜಪಾನ್ ಮೂಲದ ಐಕಾನಿಕ್ ವಾಹನ ತಯಾರಿಕ ಸಂಸ್ಥೆ ಟೊಯೊಟಾ, ಮುಂದಿನ ಸಾಲಿನಲ್ಲಿ ಬಹುನಿರೀಕ್ಷಿತ ಪ್ರಯಾಸ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಟೊಯೊಟಾ ಪ್ರಯಾಸ್ ಪ್ರೀಮಿಯಂ ಸೆಡಾನ್ 2016ನೇ ವರ್ಷಾಂತ್ಯದೊಳಗೆ ದೇಶದ ಮಾರುಕಟ್ಟೆ ತಲುಪಲಿದೆ.
Also Read: ಭರ್ತಿ 999999 ಕೀ.ಮೀ.; ಇನ್ನೂ ಮುಂದಕ್ಕೆ..! ಮುಂದಕ್ಕೆ ಓದಿ
ಇದಕ್ಕೂ ಮೊದಲು ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲೂ ಟೊಯೊಟಾ ಪ್ರಯಾಸ್ ಭರ್ಜರಿ ಪ್ರದರ್ಶನ ಕಾಣಲಿದೆ. ನೂತನ ಪ್ರಯಾಸ್ ಒಂದು ಹೈಬ್ರಿಡ್ ಮಾದರಿಯಾಗಲಿದ್ದು, ಈಗ ಮಾರಾಟದಲ್ಲಿರುವ ಮಾದರಿಯ ಸ್ಥಾನ ತುಂಬಲಿದೆ.

1.8 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ 2016 ಟೊಯೊಟಾ ಪ್ರಯಾಸ್ 142 ಎನ್‌ಎಂ ತಿರುಗುಬಲದಲ್ಲಿ 97 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇದು ಹೈಬ್ರಿಡ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಪಡೆಯಲಿದ್ದು, ಹೆಚ್ಚುವರಿ 71 ಅಶ್ವಶಕ್ತಿ ಉತ್ಪಾದಿಸಲು ನೆರವಾಗಲಿದೆ. ಇದರ ಶಕ್ತಿಯು ನಿಕ್ಕೆಲ್-ಮೆಟಲ್ ಹೈಬ್ರಿಡ್ ಬ್ಯಾಟರಿಯಲ್ಲಿ ಶೇಖರಣೆಯಾಗಲಿದೆ.

ಹಿಂದಿನ ಮಾದರಿಗಿಂತಲೂ 2016 ಟೊಯೊಟಾ ಪ್ರಯಾಸ್ ಹೆಚ್ಚು ಶಕ್ತಿಶಾಲಿ ಪೆಟ್ರೋಲ್ ಎಂಜಿನ್ ಪಡೆಯಲಿದೆ. ಅಷ್ಟೇ ಯಾಕೆ ಶೇಕಡಾ 40ರಷ್ಟು ಹೆಚ್ಚು ಇಂಧನ ಕ್ಷಮತೆಯನ್ನು ನೀಡಲಿದೆ. ಹಾಗೆಯೇ ಕಡಿಮೆ ಪ್ರಮಾಣದ ಸಿಒ2 ಎಮಿಷನ್ ಹೊರ ಹಾಕಲಿದೆ.

ನೂತನ ಟಿಎನ್‌ಜಿಎ ತಳಹದಿಯಲ್ಲಿ ನಿರ್ಮಾಣವಾಗಲಿರುವ 2016 ಪ್ರಯಾಸ್, ದೊಡ್ಡದಾದ 506 ಲೀಟರ್ ಢಿಕ್ಕಿ ಜಾಗವನ್ನು ಪಡೆಯಲಿದೆ. ಇನ್ನುಳಿದಂತೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ದೇಶವನ್ನು ತಲುಪಲಿದೆ.

ಅಂತಿಮವಾಗಿ ನೂತನ ಪ್ರಯಾಸ್ ಭಾರತ ಮಾರುಕಟ್ಟೆಯಲ್ಲಿ 35ರಿಂದ 40 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ. ಪ್ರಸ್ತುತ ಭಾರತ ವಾಹನ ಮಾರುಕಟ್ಟೆಯಲ್ಲಿ ಪ್ರಯಾಸ್ ಹಾಗೂ ಕ್ಯಾಮ್ರಿ ಹೈಬ್ರಿಡ್ ಮಾದರಿಗಳು ಮಾರಾಟದಲ್ಲಿದೆ. ಈ ಸಾಲಿಗೆ ಹೊಸ ಮಾದರಿಯು ಸೇರ್ಪಡೆಯಾಗಲಿದೆ.

ಟೋಕಿಯೋದಲ್ಲಿ ರಂಗೇರಿದ 4ನೇ ತಲೆಮಾರಿನ ಟೊಯೊಟಾ ಪ್ರಯಾಸ್


Click it and Unblock the Notifications








