ಆಡಿ ಲೇಸರ್ ಹೆಡ್‌ಲೈಟ್ ಕಾರು; 99 ಮಂದಿಗೆ ಮಾತ್ರ ಈ ಅದೃಷ್ಟ!
ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ ಇಂಡಿಯಾ, ದೇಶದಲ್ಲಿ ಅತ್ಯಂತ ಶಕ್ತಿಶಾಲಿ ಆರ್8 ಎಲ್‌ಎಂಎಕ್ಸ್ ಕಾರನ್ನು ಬಿಡುಗಡೆ ಮಾಡಿದೆ. ಲೇಸರ್ ಹೆಡ್ ಲೈಟ್ ತಂತ್ರಗಾರಿಕೆಯನ್ನು ಹೊಂದಿರುವ ಈ ದುಬಾರಿ ಕಾರಿನ ದೆಹಲಿ ಹಾಗೂ ಮುಂಬೈ ಎಕ್ಸ್ ಶೋ ರೂಂ ಬೆಲೆ 2.97 ಕೋಟಿ ರು.ಗಳಾಗಿದೆ.
ವಿಶೇಷವೆಂದರೆ ಇದು ಭಾರತದಲ್ಲಿ ನಿರ್ಮಾಣ ಹಂತ ತಲುಪಿರುವ ಮೊದಲ ಲೇಸರ್ ಹೈ ಬೀಮ್ ಲೈಟಿಂಗ್ ಕಾರಾಗಿದೆ. ಇದು ಸೀಮಿತ 99 ಯುನಿಟ್‌ಗಳಷ್ಟು ಉತ್ಪಾದನೆಯಾಗಲಿದೆ. 2015ನೇ ಸಾಲಿನಲ್ಲೇ ಆಗಮನವಾಗಲಿರುವ ಬಿಎಂಡಬ್ಲ್ಯು ಐ8 ಕಾರಿನಲ್ಲೂ ಇದೇ ತಂತ್ರಗಾರಿಕೆ ಆಳವಡಿಕೆಯಾಗುವ ನಿರೀಕ್ಷೆಯಿದೆ.

5.2 ಲೀಟರ್ ವಿ10 ಎಂಜಿನ್‌ನಿಂದ ನಿಯಂತ್ರಿಸ್ಪಡುವ ಆಡಿ ಎಲ್‌ಎಂಎಕ್ಸ್ ಕಾರು ಸೆವೆನ್ ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದ್ದು, 570 ಅಶ್ವಶಕ್ತಿ (540 ಎನ್‌ಎಂ) ಉತ್ಪಾದಿಸಲಿದೆ. ಇದು 3.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಅಂತೆಯೇ ಗಂಟೆಗೆ ಗರಿಷ್ಠ 320 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇನ್ನು ಕಾರಿನ ಭಾರ ಕಡಿಮೆ ಮಾಡುವಲ್ಲಿ ಆಡಿ ಎಂಜಿನಿಯರ್‌ಗಳು ನಿಪುಣತನ ತೋರಿದ್ದಾರೆ.

ವಿಶಿಷ್ಟತೆ
ವಿಶ್ವ ದರ್ಜೆಯ ಲೇಸರ್ ಲೈಟಿಂಗ್ ತಂತ್ರಜ್ಞಾನ ಹೈ ಬೀಮ್
ನಪ್ಪಾ ಲೆಥರ್ ಹೋದಿಕೆ,
ಸೆಪಂಗ್ ಬ್ಲೂ ವಿಭಿನ್ನತೆ
ಕಾರ್ಬನ್ ಫೈಬರ್ ರೈನ್‌ಫೋರ್ಸ್ಡ್ ಪೊಲಿಮರ್ (ಸಿಎಫ್‌ಆರ್‌ಪಿ) ಡಿಟೈಲಿಂಗ್



Click it and Unblock the Notifications








