1.4 ಕೋಟಿ ಬೆಲೆಬಾಳುವ ಆಡಿ ಆರ್‌ಎಸ್7 ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ ಇಂಡಿಯಾವು ಭಾರತದಲ್ಲಿ ಅತಿ ದುಬಾರಿ ಆರ್ ಎಸ್7 ಫೇಸ್ ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 1.4 ಕೋಟಿ ರು. (ಮುಂಬೈ, ದೆಹಲಿ ಎಕ್ಸ್ ಶೋ ರೂಂ)

ಆಡಿ ಎ7 ಸ್ಪೋರ್ಟ್ಸ್ ಬ್ಯಾಕ್ ಕಾರಿನ ಅತ್ಯಂತ ಶಕ್ತಿಶಾಲಿ ಆವೃತ್ತಿಯಾಗಿರುವ ಆಡಿ ಆರ್ ಎಸ್7 ಮೊದಲ ಬಾರಿಗೆ 2013 ಡೆಟ್ರಾಯ್ಟ್ ಮೋಟಾರು ಶೋದಲ್ಲಿ ಪಾದಾರ್ಪಣೆಗೈದಿತ್ತು. ತದಾ ಬಳಿಕ 2014 ವರ್ಷಾರಂಭದಲ್ಲಿ ಭಾರತ ವಾಹನ ಮಾರುಕಟ್ಟೆ ಪ್ರವೇಶ ಪಡೆದಿತ್ತು.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ನೂತನ ಆಡಿ ಆರ್ ಎಸ್7 ಮಾದರಿಯ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 4.0 ಲೀಟರ್ ವಿ8 ಬೈ ಟರ್ಬೊ ಟಿಎಫ್ ಎಸ್ ಐ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 560 ಅಶ್ವಶಕ್ತಿ (700 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ ಆಡಿ ಕ್ವಾಟ್ರೊ ಆಲ್ ವೀಲ್ ಡ್ರೈವ್ ಜೊತೆಗೆ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದರಲ್ಲಿರಲಿದೆ.

1.4 ಕೋಟಿ ಬೆಲೆಬಾಳುವ ಆಡಿ ಆರ್‌ಎಸ್7 ಬಿಡುಗಡೆ

ಮ್ಯಾಟ್ರಿಕ್ ಎಲ್ ಇಡಿ ಲೈಟಿಂಗ್ ವ್ಯವಸ್ಥೆಯು ಹೊಸ ಕಾರಿನ ವಿಶಿಷ್ಟತೆಗೆ ಕಾರಣವಾಗಲಿದೆ. ಇನ್ನು ಹೊರಮೈಯಲ್ಲಿ ಸಿಂಗಲ್ ಫ್ರೇಮ್ ಗ್ರಿಲ್ ಜೊತೆಗೆ ಹನಿಕಾಂಬ್ ವಿನ್ಯಾಸ, ಪರಿಷ್ಕೃತ ಏರ್ ಡ್ಯಾಮ್, ಎಲ್ ಇಡಿ ಬ್ರೇಕ್ ಲೈಟ್, ಹೊಸ ಬಣ್ಣಗಳು ಪ್ರಮುಖವಾಗಿರಲಿದೆ.

1.4 ಕೋಟಿ ಬೆಲೆಬಾಳುವ ಆಡಿ ಆರ್‌ಎಸ್7 ಬಿಡುಗಡೆ

ಕಾರಿನೊಳಗೆ ಪರಿಷ್ಕೃತ ಎಎಂಐ ವ್ಯವಸ್ಥೆ, ಎಲೆಕ್ಟ್ರಾನಿಕ್ ಸ್ಟೆಬಿಲೈಜೇಷನ್ ಕಂಟ್ರೋಲ್ ಜೊತೆ ಸ್ಪೋರ್ಟ್ ಮೋಡ್, ಕಾರ್ಬನ್ ಸ್ಪರ್ಶ, ಅಲ್ಯೂಮಿನಿಯಂ ಫಿನಿಶ್ ಮುಂತಾದವುಗಳು ಕಂಡುಬರಲಿದೆ.

1.4 ಕೋಟಿ ಬೆಲೆಬಾಳುವ ಆಡಿ ಆರ್‌ಎಸ್7 ಬಿಡುಗಡೆ

ಇನ್ನು ವೇಗದ ವಿಚಾರಕ್ಕೆ ಬಂದಾಗ ಹೊಸ ಕಾರು 3.9 ನಿಮಿಷಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ ಹಾಗೂ ಗಂಟೆಗೆ ಗರಿಷ್ಠ 250ರಿಂದ 305 ಕೀ.ಮೀ.ಗಳ ವರೆಗೆ ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

ವಿಶೇಷತೆ

ವಿಶೇಷತೆ

ಆರ್ ಎಸ್ ಸ್ಪೋರ್ಟ್ ಸೀಟು,

ಆರ್ ಎಸ್ ಅಡಾಪ್ಟಿವ್ ಏರ್ ಸಸ್ಪೆನ್ಷನ್,

ಇಸಿಎಸ್ ಜೊತೆ ಸ್ಪೋರ್ಟ್ ಮೋಡ್

ಮ್ಯಾಟ್ರಿಕ್ಸ್ ಎಲ್ ಇಡಿ ಹೆಡ್ ಲೈಟ್,

ವಿಶೇಷತೆ

ವಿಶೇಷತೆ

ಎಲ್ ಇಡಿ ರಿಯರ್ ಲೈಟ್ಸ್,

ಡೈನಾಮಿಕ್ ಟರ್ನ್ ಇಂಡಿಕೇಟರ್,

ಬೋಸ್ ಸೌರಂಡ್ ಸೌಂಡ್ ಸಿಸ್ಟಂ,

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ

1.4 ಕೋಟಿ ಬೆಲೆಬಾಳುವ ಆಡಿ ಆರ್‌ಎಸ್7 ಬಿಡುಗಡೆ

ಅಂದ ಹಾಗೆ ನೂತನ ಆಡಿ ಕಾರು ಮರ್ಸಿಡಿಸ್ ಬೆಂಝ್ ಇ63 ಹಾಗೂ ಬಿಎಂಡಬ್ಲ್ಯು 6 ಸಿರೀಸ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

Most Read Articles

Kannada
Read more on ಆಡಿ audi
English summary
Audi India recently launched their most iconic supercar the TT Coupe. Now the German luxury car maker has launched a facelifted version of their RS7 supercar.
Story first published: Monday, May 11, 2015, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X