ಟಾಟಾ ಬೋಲ್ಟ್ ಬೆನ್ನಲ್ಲೇ ತೆರೆಮರೆಯಲ್ಲಿ ಮಗದೊಂದು ಬೋಲ್ಟ್?

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, 2015 ವರ್ಷಾರಂಭದಲ್ಲಿ ಹೊಸ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರನ್ನು ಪರಿಚಯಿಸಿತ್ತು. ತರುವಾಯ ತೆರೆಮರೆಯಲ್ಲಿ ಮಗದೊಂದು ಬೋಲ್ಟ್ ಕಾರು ಸಿದ್ದಗೊಳ್ಳುತ್ತಿದೆ.

ಹೌದು, ಈ ಬಾರಿ ಜನರಲ್ ಮೋಟಾರ್ಸ್ ತೆಕ್ಕೆಯಲ್ಲಿರುವ ಷೆವರ್ಲೆ ಸಂಸ್ಥೆಯು ಹೊಸ ಬೋಲ್ಟ್ ಕಾರಿನ ಅಭಿವೃದ್ಧಿಯಲ್ಲಿ ತೊಡಗಿದೆ. ಆದರೆ ಸದ್ಯಕ್ಕಂತೂ ಈ ಬಹುನಿರೀಕ್ಷಿತ ಮಾದರಿ ಮಾರುಕಟ್ಟೆ ತಲುಪುವುದಿಲ್ಲ. ಬದಲಾಗಿ 2016ರ ವೇಳೆಯಲ್ಲಷ್ಟೇ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ.

chevrolet bolt

ವಿಶೇಷವೆಂದರೆ ಷೆವರ್ಲೆ ಬೋಲ್ಟ್ ಎಂಬ ವಿದ್ಯುತ್ ಚಾಲಿತ ಕಾರಿನ ಅಭಿವೃದ್ದಿಯಲ್ಲಿ ತೊಡಗಿದೆ. ಹಾಗಾಗಿ ಇದು ಟಾಟಾ ಬೋಲ್ಟ್‌ಗೆ ಹೆಸರಿನಲ್ಲಷ್ಟೇ ಸಾಮತ್ಯೆಯನ್ನು ಪಡೆದುಕೊಂಡಿರುತ್ತದೆ. ಅಲ್ಲದೆ ಭಾರತ ಮಾರುಕಟ್ಟೆ ಯಾವಾಗ ತಲುಪಲಿದೆ ಎಂಬುದು ಇನ್ನೂ ಅಸ್ಪಷ್ಟ.

ಸದ್ಯ ಕಾನ್ಸೆಪ್ಟ್ ಹಂತದಲ್ಲಿರುವ ಷೆವರ್ಲೆ ಬೋಲ್ಟ್ ಎಲೆಕ್ಟ್ರಿಕ್ ಕಾರಿನ ನಿರ್ಮಾಣವು 2016ರಲ್ಲಿ ಮಿಚಿಗನ್‌ನಲ್ಲಿ ಆರಂಭವಾಗಲಿದೆ. ಅಷ್ಟೇ ಯಾಕೆ ಷೆವರ್ಲೆ ಸಂಸ್ಥೆಯು 'ವೋಲ್ಟ್' ಎಂಬ ಹೈಬ್ರಿಡ್ ಕಾರಿನ ಅಭಿವೃದ್ಧಿಯಲ್ಲೂ ತೊಡಗಿಸಿಕೊಂಡಿದೆ. ಇದರಲ್ಲಿ ಎಲೆಕ್ಟ್ರಿಕ್ ಮೋಟಾರು ಜೊತೆಗೆ ಪೆಟ್ರೋಲ್ ಎಂಜಿನ್ ಜೋಡಣೆಯಾಗಲಿದೆ.

chevrolet bolt

ಅಂದ ಹಾಗೆ ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆ ನಿಸ್ಸಾನ್‌ನ ಲೀಫ್‌ಗಳಂತಹ ಎಲೆಕ್ಟ್ರಿಕ್ ಕಾರುಗಳಿಗೆ ಹೊಸ ಬೋಲ್ಟ್ ವಿದ್ಯುತ್ ಚಾಲಿತ ಕಾರು ಪ್ರತಿಸ್ಪರ್ಧಿಯಾಗಲಿದೆ. ಅಲ್ಲದೆ ಬೆಳೆದು ಬರುತ್ತಿರುವ ರಾಷ್ಟ್ರಗಳಿಗೂ ಈ ಬಹುನಿರೀಕ್ಷಿತ ಮಾದರಿಯನ್ನು ಪರಿಚಯಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

More from DriveSpark

Article Published On: Friday, February 6, 2015, 16:55 [IST]
English summary
Chevrolet is under the leadership of General Motors, they had recently showcased its new electric vehicle at the Detroit Motor Show. They christened this vehicle as the ‘Bolt' EV, which will be launched soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+