ಏಷ್ಯಾ ಢಿಕ್ಕಿ ಪರೀಕ್ಷೆಯಲ್ಲಿ ದಟ್ಸನ್ ಗೊ ಕಾರಿಗೆ ಎರಡು ನಕ್ಷತ್ರ
ಜಾಗತಿಕ ಎನ್‌ಸಿಎಪಿ ಢಿಕ್ಕಿ ಪರೀಕ್ಷೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ದಟ್ಸನ್ ಗೊ ಕೊನೆಗೂ ಸ್ವಲ್ಪ ನಿರಾಳತೆ ಪಡೆದುಕೊಂಡಿದ್ದು, ಏಷ್ಯಾ ಎನ್‌ಸಿಎಪಿ ಅಪಘಾತ ಪರೀಕ್ಷೆಯಲ್ಲಿ ಎರಡು ನಕ್ಷತ್ರಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ ವೈಫಲ್ಯದ ಬಳಿಕ ನಿಸ್ಸಾನ್ ಬಜೆಟ್ ಕಾರು ಬ್ರಾಂಡ್ ದಟ್ಸನ್ ಮೇಲೆ ಭಾರಿ ಟೀಕೆಗಳು ಎದ್ದಿದ್ದವು. ಆದರೆ 1.2 ಲೀಟರ್ ಎಂಜಿನ್ ಸಾಮರ್ಥ್ಯದ ದಟ್ಸನ್ ಗೊ ಕಾರು ಏಷ್ಯಾ ಎನ್‌ಸಿಎಪಿ ಢಿಕ್ಕಿ ಪರೀಕ್ಷೆಯಲ್ಲಿ ಎರಡು ನಕ್ಷತ್ರಗಳನ್ನು ಗೆಲ್ಲುವಲ್ಲಿ ಯಶ ಕಂಡಿದೆ.

ಇಂಡೋನೇಷ್ಯಾ ಮೂಲದ ದಟ್ಸನ್ ಗೊ ಢಿಕ್ಕಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ್ರಸ್ತುತ ಸ್ಟ್ಯಾಂಡರ್ಡ್ ವೆರಿಯಂಟ್ ನಲ್ಲಿ ಏರ್ ಬ್ಯಾಗ್ ನೀಡಲಾಗುತ್ತಿದೆ. ಇದು ವಯಸ್ಕರ ಪ್ರಯಾಣಿಕರ ಭದ್ರತೆಯಲ್ಲಿ ಗರಿಷ್ಠ 16ರಲ್ಲಿ 6.82 ಪಾಯಿಂಟ್ ಮತ್ತು ಮಕ್ಕಳ ಪ್ರಯಾಣಿಕ ಭದ್ರತೆಯಲ್ಲಿ ಶೇಕಡಾ 46ರಷ್ಟನ್ನು ಗಿಟ್ಟಿಸಿಕೊಂಡಿದೆ.
ನಿಮ್ಮ ಮಾಹಿತಿಗಾಗಿ ಭಾರತದಲ್ಲಿ ದಟ್ಸನ್ ಗೊ ಹಾಗೂ ದಟ್ಸನ್ ಗೊ ಪ್ಲಸ್ ಮಾದರಿಯ ಟಿ (ಐಚ್ಛಿಕ) ವೆರಿಯಂಟ್ ಗಳಲ್ಲಿ ಚಾಲಕ ಬದಿಯ ಏರ್ ಬ್ಯಾಗ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ.


Click it and Unblock the Notifications








