ಕ್ಯಾಮೆರಾ ರಹಸ್ಯ ಕಣ್ಣಿಗೆ ಬಿದ್ದ ದಟ್ಸನ್ ರೆಡಿ ಗೊ ಸಣ್ಣ ಕಾರು
ಇತ್ತೀಚೆಗಷ್ಟೇ ಭಾರತದಲ್ಲಿ ಬಿಡುಗಡೆಗೊಂಡಿರುವ ರೆನೊ ಕ್ವಿಡ್ ದೇಶದ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸಿನತ್ತ ದಾಪುಗಾಲನ್ನಿಡುತ್ತಿದೆ. ಅದೇ ಹೊತ್ತಿಗೆ ಕ್ವಿಡ್ ತಳಹದಿಯಲ್ಲೇ ಮಗದೊಂದು ಮಗದೊಂದು ಆಕರ್ಷಕ ಕಾರು ಸಿದ್ಧವಾಗುತ್ತಿದೆ.
ಅದುವೇ ನಿಸ್ಸಾನ್ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್‌ನ ಅತ್ಯಾಕರ್ಷಕ ರೆಡಿ ಗೊ. ಇದು ದಟ್ಸನ್ ದೇಶದಲ್ಲಿ ಬಿಡುಗಡೆ ಮಾಡಲಿರುವ ಮೂರನೇ ಮಾದರಿಯಾಗಿರಲಿದೆ. ಇದಕ್ಕೂ ಮೊದಲು ಗೊ ಹಾಗೂ ಗೊ ಪ್ಲಸ್ ಮಾದರಿಗಳನ್ನು ಪರಿಚಯಿಸಿತ್ತು.

ದಟ್ಸನ್ ಮೂರನೇ ಮಾದರಿಗೂ ಗೊ ನಾಮಕರಣವನ್ನು ಉಳಿಸಿಕೊಂಡಿರುವುದು ಮಗದೊಂದು ವಿಶೇಷವಾಗಿದೆ. ಪ್ರಸ್ತುತ ಪರೀಕ್ಷಾರ್ಥ ಹಂತದಲ್ಲಿರುವ ದಟ್ಸನ್ ರೆಡಿ ಗೊ ಯಾವುದೇ ಸಮಯ ಬೇಕಾದರೂ ದೇಶದ ರಸ್ತೆ ಪ್ರವೇಶಿಸಲಿದೆ.
ಚಿತ್ರ ಕೃಪೆ: ಐಎಬಿ
ನಿಮ್ಮಗೆಲ್ಲರಿಗೂ ತಿಳಿದಿರುವಂತೆಯೇ ರೆನೊ ಜೊತೆ ಸಿಎಎಂಎಫ್-ಎ ತಳಹದಿ ಹಂಚಿಕೊಂಡಿರುವ ನಿಸ್ಸಾನ್, ದಟ್ಸನ್ ಬ್ರಾಂಡ್ ಅಡಿಯಲ್ಲಿ ರೆಡಿ ಗೊ ಕಾರು ಸಿದ್ಧಗೊಳಿಸಿದೆ. ಇದು ದಟ್ಸನ್ I2 ಎಂಬ ಕೋಡ್ ಸಹ ಪಡೆದುಕೊಂಡಿದೆ.
ಚಿತ್ರ ಕೃಪೆ: ಐಎಬಿ
ರೆನೊ ಕ್ವಿಡ್ ಕಾರಿನಲ್ಲಿರುವುದಕ್ಕೆ ಸಮಾನವಾದ 0.8 ಲೀಟರ್ ಎಸ್‌ಸಿಇ ಮೋಟಾರು ಸಹ ಇದರಲ್ಲಿ ಬಳಕೆಯಾಗಲಿದೆ. ಅಲ್ಲದೆ ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಚಿತ್ರ ಕೃಪೆ: ಐಎಬಿ
ನೂತನ ರೆಡಿ ಗೊ ಫೈವ್ ಸ್ಪೀಡ್ ಮ್ಯಾನುವಲ್ ಜೊತೆಗೆ ಫೈವ್ ಸ್ಪೀಡ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ದೇಶದ ಎಂಟ್ರಿ ಲೆವೆಲ್ ಕಾರು ಮಾರುಕಟ್ಟೆಯಲ್ಲಿ ಟಾಟಾ ನ್ಯಾನೋ, ಮಾರುತಿ ಆಲ್ಟೊ 800, ಹ್ಯುಂಡೈ ಇಯಾನ್ ಜೊತೆಗೆ ನೂತನ ರೆನೊ ಕ್ವಿಡ್ ಮಾದರಿಗಳಿಗೆ ರೆಡಿ ಗೊ ಪ್ರತಿಸ್ಪರ್ಧಿಯಾಗಲಿದೆ.

ಈ ಹಿಂದೆ ಮೊದಲ ಬಾರಿಗೆ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ದಟ್ಸನ್ ರೆಡಿ ಗೊ ಕಾನ್ಸೆಪ್ಟ್ ಮೊದಲ ಬಾರಿಗೆ ಪ್ರದರ್ಶನಗೊಂಡಿತ್ತು. 2016ನೇ ಆಟೋ ಎಕ್ಸ್ ಪೋದಲ್ಲಿ ಮಗದೊಮ್ಮೆ ಪ್ರದರ್ಶನವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಅಂತಿಮವಾಗಿ ನೂತನ ರೆಡಿ ಗೊ ಮೂರು ಲಕ್ಷ ರು.ಗಳ ಬೆಲೆ ಪರಿಧಿಯೊಳಗೆ ಬಿಡುಗಡೆಯಾಗುವ ನಿರೀಕ್ಷೆ ಹೊಂದಲಾಗಿದೆ.


Click it and Unblock the Notifications








