ಬೆಲೆ ಯುದ್ಧ; ಆಲ್ಟೊ, ಕ್ವಿಡ್, ಇಯಾನ್: ಯಾವುದು ಅಗ್ಗ?

By Nagaraja

ಆಕ್ರಮಣಕಾರಿ ನೀತಿ ಅನುಸರಿಸಿರುವ ರೆನೊ ಕ್ವಿಡ್ ಎಲ್ಲ ಹಂತದಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸುವ ರೀತಿಯಲ್ಲಿ ಭಾರತೀಯ ವಾಹನ ಮಾರುಕಟ್ಟೆಗೆ ಕಾಲಿರಿಸಿದೆ. ಬೆಸ್ಟ್ ಇನ್ ಕ್ಲಾಸ್ ಮೈಲೇಜ್ ( 25 kmpl), ಗ್ರೌಂಡ್ ಕ್ಲಿಯರನ್ಸ್ (180 ಎಂಎಂ), ಢಿಕ್ಕಿ ಜಾಗ (300 ಲೀಟರ್) ಜೊತೆಗೆ ವಿಭಾಗದಲ್ಲೇ ಪ್ರಥಮ ಬಾರಿಗೆ ಅನೇಕ ವೈಶಿಷ್ಟ್ಯಗಳೊಂದಿಗೆ ಎಂಟ್ರಿ ಕೊಟ್ಟಿರುವ ರೆನೊ ಕ್ವಿಡ್ ಬೆಲೆಯ ವಿಚಾರದಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿ ನಿಂತಿದೆ.

ಇದರೊಂದಿಗೆ ರೆನೊ ಕ್ವಿಡ್ ಮಾರುಕಟ್ಟೆಯಲ್ಲಿ ಹೆಚ್ಚು ಪರಿಣಾಮಕಾರಿಯೆನಿಸುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಆಲ್ಟೊದಂತಹ ಜನಪ್ರಿಯ ಮಾದರಿಯ ಮಾರಾಟವನ್ನೇ ಹಿಂದಿಕ್ಕುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದೆ. ಪ್ರಸ್ತುತ ಲೇಖನದಲ್ಲಿ ರೆನೊ ಕ್ವಿಡ್ ಜೊತೆ ಜನಪ್ರಿಯ ಆಲ್ಟೊ, ಕೆ10, ಇಯಾನ್, ಟಾಟಾ ನ್ಯಾನೋ ಹಾಗೂ ವ್ಯಾಗನಾರ್ ಬೆಲೆ ಹೋಲಿಕೆ ಮಾಡುವ ಪ್ರಯತ್ನ ಮಾಡಲಾಗುವುದು.

ಬೆಲೆ ಯುದ್ಧ; ಆಲ್ಟೊ, ಕ್ವಿಡ್, ಇಯಾನ್: ಯಾವುದು ಅಗ್ಗ?

ಯಾವುದಕ್ಕೂ ಹೊಸ ಕಾರು ಖರೀದಿಗೂ ಮುನ್ನ ಈ ಲೇಖನದಿಂದ ಸ್ವಲ್ಪ ಮಾಹಿತಿಯನ್ನು ಗಿಟ್ಟಿಸಿಕೊಂಡರೆ ಒಳಿತು. ಯಾಕೆಂದರೆ ಎಸ್‌ಯುವಿ ಶೈಲಿಯ ಕ್ವಿಡ್ ಹ್ಯಾಚ್ ಬ್ಯಾಕ್ ಪ್ರಾರಂಭಿಕ ಬೆಲೆ 2.56 ಲಕ್ಷ ರು.ಗಳಾಗಿದ್ದು (ಪರಿಚಯಾತ್ಮಕ ಬೆಲೆ ಮುಂದೆ ಬದಲಾಗಬಹುದು), ನಿಜಕ್ಕೂ ಅವಿಶ್ವಸನೀಯ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಬೆಲೆ ಯುದ್ಧ; ಆಲ್ಟೊ, ಕ್ವಿಡ್, ಇಯಾನ್: ಯಾವುದು ಅಗ್ಗ?

ಇದು ಎಂಟ್ರಿ ಲೆವೆಲ್ ಸೆಗ್ಮೆಂಟ್ ಲೀಡರ್ ಆಲ್ಟೊ (2.89 ಲಕ್ಷ ರು.) ಬೇಸ್ ವೆರಿಯಂಟ್ ಗಿಂತಲೂ 30,000 ರು. ಅಂತೆಯೇ ದಕ್ಷಿಣ ಕೊರಿಯಾದ ಹ್ಯುಂಡೈ ಇಯಾನ್ ಗಿಂತಲೂ 54,000 ರು.ಗಳಷ್ಟು ಕಡಿಮೆಯಾಗಿದೆ.

ವಿಭಾಗದಲ್ಲೇ ಪ್ರಥಮ

ವಿಭಾಗದಲ್ಲೇ ಪ್ರಥಮ

ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಏಳು ಇಂಚುಗಳ ಟಚ್ ಸ್ಕ್ರೀನ್, ಮೀಡಿಯಾ ನೇವ್ ಸಿಸ್ಟಂ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಒನ್ ಟಚ್ ಲೇನ್ ಚಾರ್ಜ್ ಇಂಡಿಕೇಟರ್ ಮುಂತಾದ ಸೌಲಭ್ಯಗಳನ್ನು 3.53 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ನೀಡುತ್ತಿದೆಯೆಂದರೆ ಬೇರೆ ಯಾವ ತಯಾರಕರಿಂದಲೂ ಇದು ಸಾಧ್ಯವಾಗದ ವಿಚಾರ ಎಂಬುದನ್ನು ಒತ್ತಿ ಹೇಳಬೇಕಾಗುತ್ತದೆ.

ಬೆಲೆ ಹೋಲಿಕೆ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಹೋಲಿಕೆ (ಎಕ್ಸ್ ಶೋ ರೂಂ ದೆಹಲಿ)

  • ಟಾಟಾ ನ್ಯಾನೋ ಜೆನ್ ಎಕ್ಸ್(ಎಂಜಿನ್ 624 ಸಿಸಿ): 1.99 ಲಕ್ಷ ರು.ಗಳಿಂದ 2.91 ಲಕ್ಷ ರು.
  • ರೆನೊ ಕ್ವಿಡ್ (800 ಸಿಸಿ): 2.56 ಲಕ್ಷ ರು.ಗಳಿಂದ 3.53 ಲಕ್ಷ ರು.
  • ಮಾರುತಿ ಆಲ್ಟೊ800 (800 ಸಿಸಿ): 2.89 ಲಕ್ಷ ರು.ಗಳಿಂದ 3.47 ಲಕ್ಷ ರು.
  • ಮಾರುತಿ ಕೆ10 (998 ಸಿಸಿ): 3.19 ಲಕ್ಷ ರು.ಗಳಿಂದ 4.05 ಲಕ್ಷ ರು.
  • ಹ್ಯುಂಡೈ ಇಯಾನ್ (800/1000 ಸಿಸಿ): 3.10 ಲಕ್ಷ ರು.ಗಳಿಂದ 4.27 ಲಕ್ಷ ರು.
  • ವ್ಯಾಗನಾರ್ (998 ಸಿಸಿ): 4.68 ಲಕ್ಷ ರು.ಗಳಿಂದ 4.63 ಲಕ್ಷ ರು.
  • ಬೆಲೆ ಯುದ್ಧ; ಆಲ್ಟೊ, ಕ್ವಿಡ್, ಇಯಾನ್: ಯಾವುದು ಅಗ್ಗ?

    ಎಲ್ಲ ಹೊಸತನದ ಸಿಎಂಎಫ್‌-ಎ (ಕಾಮನ್ ಮೊಡ್ಯುಲ್ ಫ್ಯಾಮಿಲಿ) ತಳಹದಿಯಲ್ಲಿ ನಿರ್ಮಾಣವಾಗಿರುವ ಕ್ವಿಡ್ ಹ್ಯಾಚ್ ಬ್ಯಾಕ್ ಕಾರನ್ನು ವಿಶೇಷವಾಗಿ ಭಾರತೀಯ ಮಾರುಕಟ್ಟೆಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ರೆನೊ-ನಿಸ್ಸಾನ್ ಜಂಟಿಯಾಗಿ ಹೊರತರಲಿರುವ 5ರಿಂದ 7 ಕಾರುಗಳ ಯೋಜನೆಯ ಭಾಗವಾಗಿರಲಿದೆ.

    ಬೆಲೆ ಯುದ್ಧ; ಆಲ್ಟೊ, ಕ್ವಿಡ್, ಇಯಾನ್: ಯಾವುದು ಅಗ್ಗ?

    ಸದ್ಯದ ಪರಿಸ್ಥಿತಿ ನೋಡಿದಾಗ ಕ್ವಿಡ್ ಆಗಮನದೊಂದಿಗೆ ರೆನೊ ಮಾರುಕಟ್ಟೆ ಶೇರು ಸಹ ಇಮ್ಮಡಿಯಾಗುವ ನಿರೀಕ್ಷೆಯಿದೆ. ದಶಕಗಳಷ್ಟು ಕಾಲ ದೇಶದಲ್ಲಿ ನೆಲೆಯೂರಿ ನಿಂತಿರುವ ಮಾರುತಿಯನ್ನೇ ಮೀರಿಸುವ ರೀತಿಯಲ್ಲಿ ಶೇಕಡಾ 98ರಷ್ಟು ಕ್ವಿಡ್ ನಿರ್ಮಾಣವನ್ನು ಸ್ಥಳೀಯವಾಗಿಸಿರುವುದು ರೆನೊ ಪರಿಣಾಮಕಾರಿ ಬೆಲೆ ಪರಿಧಿಯಲ್ಲಿ ಬಿಡುಗಡೆ ಮಾಡಲು ಸಹಕಾರಿಯಾಗಿದೆ.

    ಬೆಲೆ ಯುದ್ಧ; ಆಲ್ಟೊ, ಕ್ವಿಡ್, ಇಯಾನ್: ಯಾವುದು ಅಗ್ಗ?

    800 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೆನೊ ಕ್ವಿಡ್ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ನಿಕಟ ಭವಿಷ್ಯದಲ್ಲೇ ಒಂದು ಲೀಟರ್ ಕ್ವಿಡ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

    ಬೆಲೆ ಯುದ್ಧ; ಆಲ್ಟೊ, ಕ್ವಿಡ್, ಇಯಾನ್: ಯಾವುದು ಅಗ್ಗ?

    ಇಷ್ಟೆಲ್ಲ ಆದರೂ ವಿಶ್ಲೇಷಕರ ಪ್ರಕಾರ ದೇಶದಲ್ಲಿ ಸೀಮಿತ ಸಂಖ್ಯೆ 200ರಷ್ಟು ಮಾತ್ರ ಡೀಲರ್ ಶಿಪ್ ಗಳನ್ನು ಹೊಂದಿರುವುದು ರೆನೊಗೆ ಹಿನ್ನೆಡೆಯಾಗಲಿದೆ. ಆದರೆ ಸಂಸ್ಥೆಯು ಇದಕ್ಕೂ ಪರಿಹಾರವನ್ನು ಕಂಡು ಹುಡುಕಿದ್ದು, ಈ ಡಿಜಿಟಲ್ ಯುಗದಲ್ಲಿ ರೆನೊ ಕ್ವಿಡ್ ವಿಶಿಷ್ಟ ಮೊಬೈಲ್ ಆಪ್ ಮತ್ತು ವರ್ಚುವಲ್ ಶೋ ರೂಂ ವೆಬ್ ಸೈಟ್ ಸಹ ಕ್ವಿಡ್ ಹೆಸರಲ್ಲಿ ಬಿಡುಗಡೆ ಮಾಡಿದ್ದು, ಆಸಕ್ತರು ಕಾರಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ ಬುಕ್ಕಿಂಗ್ ವ್ಯವಸ್ಥೆಯನ್ನು ಇದರಲ್ಲಿ ಕಲ್ಪಿಸಿಕೊಡಲಾಗಿದೆ.

More from DriveSpark

Article Published On: Tuesday, September 29, 2015, 9:50 [IST]
English summary
Entry level hatchback segment price war
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+