ಫಿಯೆಟ್ ಕಾಂಪಾಕ್ಟ್ ಸೆಡಾನ್ ಕಾರಿಗೆ ಮರು ನಾಮಕರಣ
ಇಟಲಿಯ ದೈತ್ಯ ಹಾಗೂ ಪುರಾತನ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್‌ನ ಅತಿ ನೂತನ ಎಗೆಯಾ ಕಾಂಪಾಕ್ಟ್ ಸೆಡಾನ್ ಕಾರು ಇತ್ತೀಚೆಗಷ್ಟೇ ಜಾಗತಿಕ ಪಾದಾರ್ಪಣೆಗೈದಿತ್ತು. ಐಕಾನಿಕ್ ಲನಿಯಾ ಉತ್ತರಾಧಿಕಾರಿಯಾಗಿ ಗುರುತಿಸಿಕೊಂಡಿರುವ ಫಿಯೆಟ್ ಎಗೆಯಾ, 2015 ಇಸ್ತಾಂಬುಲ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿತ್ತು.
ಪ್ರಸ್ತುತ ಮೋಟಾರು ಶೋದಲ್ಲಿ ಕಾನೆಪ್ಟ್ ರೂಪದಲ್ಲಿ ಫಿಯೆಟ್ ಪರಿಚಯಿಸಿತ್ತು. ಈಗ ನೂತನ ಮಾದರಿಯು ಮರು ನಾಮಕರಣಗೊಳ್ಳಲಿದೆ ಎಂಬುದರ ಬಗ್ಗೆ ಮಾಹಿತಿ ಲಭಿಸಿದೆ.

ಫಿಯೆಟ್ ನ ಮುಂದಿನ ಜನಾಂಗದ ಕಾಂಪಾಕ್ಟ್ ಸೆಡಾನ್ ಕಾರಿನ ಅಭಿವೃದ್ಧಿಗೆ ಎಗೆಯಾ ಪರಿಕಲ್ಪನೆಯನ್ನು ಬಳಕೆ ಮಾಡಲಾಗುವುದು. ಇದೇ ತಳಹದಿಯಲ್ಲಿ ಹ್ಯಾಚ್ ಬ್ಯಾಕ್ ಹಾಗೂ ಎಸ್ಟೇಟ್ ಕಾರು ಸಹ ನಿರ್ಮಾಣವಾಗಲಿದೆ.
ಈ ಎಲ್ಲ ಮಾದರಿಗಳು ಯುರೋಪ್ ಖಂಡವನ್ನು ಮೊದಲು ಪ್ರವೇಶಿಸಲಿದೆ. ಈ ಬಹುನಿರೀಕ್ಷಿತ ಮಾದರಿಯು ಮುಂದಿನ ದಿನಗಳಲ್ಲಿ ಭಾರತವನ್ನು ಪ್ರವೇಶಿಸಲಿದೆ.
ಯುವ ಗ್ರಾಹಕರನ್ನು ಮೆಚ್ಚಿಕೊಳ್ಳುವಂತಹ ವಿನ್ಯಾಸ ತಂತ್ರಗಾರಿಕೆಯನ್ನು ಇದರಲ್ಲಿ ಆಳವಡಿಸಲಾಗಿದೆ.


Click it and Unblock the Notifications








