ಫಿಯೆಟ್ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆಗೆ ರೆಡಿ
ಇಟಲಿಯ ಐಕಾನಿಕ್ ಕಾರು ಸಂಸ್ಥೆಯಾಗಿರುವ ಫಿಯೆಟ್ ಸದ್ಯದಲ್ಲೇ ನೂತನ ಕಾಂಪಾಕ್ಟ್ ಸೆಡಾನ್ ಕಾರೊಂದನ್ನು ಪರಿಚಯಿಸಲಿದೆ. ಈ ಸಂಬಂಧ ಸಂಸ್ಥೆಯು ಆಕರ್ಷಕ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದೆ.
ಬಲ್ಲ ಮೂಲಗಳ ಪ್ರಕಾರ ಫಿಯೆಟ್ ನೂತನ ಕಾಂಪಾಕ್ಟ್ ಸೆಡಾನ್ ಕಾರು ಇಸ್ತಾಂಬುಲ್ ಮೋಟಾರು ಶೋದಲ್ಲಿ ಬಿಡುಗಡೆಯಾಗಲಿದೆ. ಈ ಬಹುನಿರೀಕ್ಷಿತ ವಾಹನ ಪ್ರದರ್ಶನ ಮೇಳ ಮೇ 22ರಿಂದ 31ರ ವರೆಗೆ ನಡೆಯಲಿದೆ.

ಈ ವಿಭಾಗದಲ್ಲಿ ಫಿಯೆಟ್ ಸಂಸ್ಥೆಗೆ ಮಾರುತಿ ಜನಪ್ರಿಯ ಸ್ವಿಫ್ಟ್ ಡಿಜೈರ್, ಹೋಂಡಾ ಅಮೇಜ್, ಹ್ಯುಂಡೈ ಎಕ್ಸ್ ಸೆಂಟ್, ಫೋರ್ಡ್ ಫಿಗೊ ಆಸ್ಪೈರ್ ಹಾಗೂ ಟಾಟಾ ಜೆಸ್ಟ್ ಮುಂತಾದ ಸಾಲು ಸಾಲು ಕಾರುಗಳ ಸವಾಲು ಎದುರಾಗಲಿದೆ. ಇವೆಲ್ಲವನ್ನು ಮೀರಿಸುವ ಸಲುವ ಫಿಯೆಟ್ ನೀಡುವ ಹೊಸ ವೈಶಿಷ್ಟ್ಯಗಳೇನು ಎಂಬುದು ಕುತೂಹಲವೆನಿಸಿದೆ.
ಅಂದ ಹಾಗೆ ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ಸ್ ಸ್ಟೈಲ್ ಸೆಂಡರ್ ಹಾಗೂ ಟೊಫಾಸ್ ಆರ್ ಆಂಡ್ ಡಿ ಸೆಂಟರ್ ನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಅಂತೆಯೇ ಹೊಸ ಎಂಜಿನ್ ಆಯ್ಕೆಗಳು ಹೊಸತನವನ್ನು ನೀಡಲಿದೆ. ಒಟ್ಟಿನಲ್ಲಿ ಅತಿ ಶೀಘ್ರದಲ್ಲೇ ಭಾರತಕ್ಕೂ ಪರಿಚಯವಾಗಲಿ ಎಂಬುದು ನಮ್ಮ ಆಶಯವಾಗಿದೆ.


Click it and Unblock the Notifications








