ರಸ್ತೆ ಮಾರ್ಗವಾಗಿ ಬೆಂಗ್ಳೂರಿಂದ ಪ್ಯಾರಿಸ್ ಗೆ 99 ದಿನಗಳ ಸಾಹಸ ಯಾತ್ರೆ

By Nagaraja

ಒಂದೆರಡು ತಾಸಿನ ರಸ್ತೆ ಪಯಣದಿಂದಲೇ ನಾವು ಸುಸ್ತಾಗಿ ಹೋಗಿ ಬಿಡುತ್ತೇವೆ. ಹಾಗಿರುವಾಗ 99 ದಿನಗಳ ನಿರಂತರ ಪ್ರಯಾಣವನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಹೌದು, ಇಂತಹದೊಂದು ಸಾಹಸ ಯಾತ್ರೆಗೆ ಬೆಂಗಳೂರಿನ ಕುಟುಂಬವೊಂದು ಸಜ್ಜಾಗಿದೆ.

13 ದೇಶಗಳನ್ನು ದಾಟಲಿರುವ ಈ ಸಾಹಸ ಯಾತ್ರೆಯು ಒಟ್ಟು 15,000 ಕೀ.ಮೀ. ದೂರವನ್ನು ಕ್ರಮಿಸಲಿದೆ. ಚಲನಚಿತ್ರ ನಿರ್ಮಾಪಕ ಹಾಗೂ ಶಿಕ್ಷಕ ಆನಂದ್ ಬೈದ್ ಎಂಬವರೇ ಇಂತಹದೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಅವರು ಸಾರಥಿಯೊಂದನ್ನು ಆರಿಸಿದ್ದಾರೆ.

fiat linea road trip

ಅದುವೇ ಫಿಯೆಟ್ ಲಿನಿಯಾ ಟಿ-ಜೆಟ್ ಪೆಟ್ರೋಲ್ ಸೆಡಾನ್ ಕಾರು. ಇವರಿಗೆ ಧರ್ಮಪತ್ನಿ ಪುನಿತಾ ಬೈದ್ ಹಾಗೂ ಪುತ್ರ ಯಶ್ ಬೈದ್ ಮತ್ತು ಪುತ್ರಿ ದೃತಿ ಬೈದ್ ಸಹ ಸಾಥ್ ನೀಡುತ್ತಿದ್ದಾರೆ.

ಬೆಂಗಳೂರಿನಿಂದ ಆರಂಭಿಸಲಿರುವ ಪಯಣವು ನೇಪಾಳ, ಚೀನಾ, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ತುರ್ಕಮೆನಿಸ್ತಾನ್, ಇರಾನ್, ಟರ್ಕಿ, ಗ್ರೀಸ್, ಇಟಲಿ, ಸ್ವಿಜರ್ಲೆಂಡ್, ಸ್ಪೇನ್ ದೇಶವನ್ನು ಸುತ್ತಾಡಿ ಬಳಿಕ ಅಂತಿಮವಾಗಿ ಫ್ರಾನ್ಸ್ ನ ಪ್ಯಾರಿಸ್ ನಗರವನ್ನು ತಲುಪಲಿದೆ.

ಆನಂದ್ ಅವರು ತಮ್ಮ ಕುಟುಂಬದ ಯಾತ್ರೆಯನ್ನು 'LIFE' (Little Indian Family of Explorers, ಭಾರತದ ಚಿಕ್ಕ ಕುಟುಂಬದ ಅನ್ವೇಷಣೆ) ಎಂದು ಸಂಭೋಧಿಸುತ್ತಾರೆ. ಅಂದ ಹಾಗೆ ಮೊದಲ ಬಾರಿಯೇನಲ್ಲ ಆನಂದ್ ಕುಟುಂಬ ಇಂತಹದೊಂದು ಸಾಹಸ ರಸ್ತೆ ಯಾತ್ರೆ ಕೈಗೊಳ್ಳುತ್ತಿರುವುದು. ಕಳೆದ ವರ್ಷವಷ್ಟೇ ಇದೇ ಕಾರಿನಲ್ಲಿ 21 ದಿನಗಳಲ್ಲಿ ರಾಜಸ್ತಾನ, ಮಹಾರಾಷ್ಟ್ರ, ಗುಜರಾತ್, ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಕರ್ನಾಟಕಗಳಲ್ಲಾಗಿ 6,100 ಕೀ.ಮೀ. ಹಾದಿಯನ್ನು ಕ್ರಮಿಸಿದ್ದರು.

ಆದರೆ ಈ ಬಾರಿ ಹಿಂದೆಂದಿಗಿಂತಲೂ ಅತ್ಯಂತ ಕಠಿಣ ಸವಾಲನ್ನೇ ಸ್ವೀಕರಿಸಲು ನಿರ್ಧರಿಸಿದ್ದಾರೆ. ಯಾಕೆಂದರೆ ಆಹಾರದಿಂದ ಹಿಡಿದು, ಹವಾಮಾನ, ಭದ್ರತೆ ಎಲ್ಲವೂ ವಿಭಿನ್ನವಾಗಿರಲಿದೆ. ಅಲ್ಲದೆ ಸ್ವತ: ನಿರ್ಮಾಪಕ ಆಗಿರುವ ಅವರು ತಮ್ಮದೇ ಜೀವಾನುಭವದ ಸಾಕ್ಷ್ಯಚಿತ್ರ ರಚಿಸಲು ಬಯಸಿದ್ದಾರೆ. ಅಂತಿಮವಾಗಿ ಆನಂದ್ ಕುಟುಂಬದ ಈ ಯಾತ್ರೆಯು ಯಶಸ್ಸಿನಿಂದ ಕೂಡಿರಲಿ ಎಂದು ನಾವು ಆಶಿಸೋಣವೇ...

More from DriveSpark

Article Published On: Tuesday, April 7, 2015, 8:16 [IST]
English summary
Fiat offers its Linea sedan in India and the Italian manufacturer encourages its customers to enjoy their lives to the fullest. Team L.I.F.E. will cover a distance of 15,000 kilometres in a matter of 99 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+