ಫಿಯೆಟ್ ಪುಂಟೊ ಸ್ಪೋರ್ಟಿವೊ ಸೀಮಿತ ಆವೃತ್ತಿ ಬಿಡುಗಡೆ; ವಿಶಿಷ್ಟತೆಗಳೇನು?

By Nagaraja

ಇಟಲಿ ಮೂಲದ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್ ಅತಿ ನೂತನ ಪುಂಟೊ ಸ್ಪೋರ್ಟಿವೊ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಬೆಲೆ ಮಾಹಿತಿ: 7.10 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಫಿಯೆಟ್ ಪುಂಟೊ ಸೀಮಿತ ಆವೃತ್ತಿಯು 1.2 ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ. ಅಲ್ಲದೆ 197 ಎನ್‌ಎಂ ತಿರುಗುಬಲದಲ್ಲಿ 75 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಫಿಯೆಟ್ ಪುಂಟೊ ಸ್ಪೋರ್ಟಿವೊ ಸೀಮಿತ ಆವೃತ್ತಿ ಬಿಡುಗಡೆ

ಭಾರತೀಯ ವಾಹನ ತಯಾರಕ ಒಕ್ಕೂಟದ ಮಾನ್ಯತೆಯ ಪ್ರಕಾರ ನೂತನ ಫಿಯೆಟ್ ಪುಂಟೊ ಸ್ಪೋರ್ಟಿವೊ ಸೀಮಿತ ಆವೃತ್ತಿಯು ಪ್ರತಿ ಲೀಟರ್ ಗೆ 21.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಫಿಯೆಟ್ ಪುಂಟೊ ಸ್ಪೋರ್ಟಿವೊ ಸೀಮಿತ ಆವೃತ್ತಿ ಬಿಡುಗಡೆ

ನೂತನ ಪಂಟೊ ಸ್ಪೋರ್ಟಿವೊ ಎಕ್ಸ್ ಕ್ಲೂಸಿವ್ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯಲ್ಲೂ ಆಗಮನವಾಗಲಿದೆ. ಸಂಪೂರ್ಣ ದೇಹವು ಕೆಂಪು ವರ್ಣದಿಂದ ಕಂಗೊಳಿಸಲಿದ್ದು, ಮೇಲ್ಚಾವಣಿ ಶ್ವೇತ ವರ್ಣಮಯವಾಗಲಿದೆ.

ಫಿಯೆಟ್ ಪುಂಟೊ ಸ್ಪೋರ್ಟಿವೊ ಸೀಮಿತ ಆವೃತ್ತಿ ಬಿಡುಗಡೆ

ಹೆಸರಲ್ಲೇ ಸೂಚಿಸಿರುವಂತೆಯೇ ಇದು ಸ್ಟ್ಯಾಂಡರ್ಡ್ ಪುಂಟೊ ಮಾದರಿಯ ಕ್ರೀಡಾ ಮಾದರಿಯಾಗಲಿದೆ. ಹೊಸ ರಿಯರ್ ಸ್ಪಾಯ್ಲರ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, 15 ಇಂಚುಗಳ ಅಲಾಯ್ ವೀಲ್, ಹೊರಗಿನ ರಿಯರ್ ವ್ಯೂ ಕ್ಯಾಮೆರಾದಲ್ಲಿ ಕ್ರೋಮ್ ಸ್ಪರ್ಶತೆ ಮುಂತಾದ ವೈಶಿಷ್ಟ್ಯಗಳನ್ನು ಹೊರಮೈಯಲ್ಲಿ ಪಡೆಯಲಿದೆ.

ಫಿಯೆಟ್ ಪುಂಟೊ ಸ್ಪೋರ್ಟಿವೊ ಸೀಮಿತ ಆವೃತ್ತಿ ಬಿಡುಗಡೆ

ಇನ್ನು ಕಾರಿನೊಳಗೆ 6.5 ಇಂಚುಗಳ ಟಚ್ ಸ್ಕ್ರೀನ್ ಇನ್ಮೋಟೈನ್ಮೆಂಟ್ ಸಿಸ್ಟಂ, ಹೊಸ ಸೀಟು ಕವರ್, ವಿಶೇಷ ಕಾರ್ಪೆಟ್, ಫಿಯೆಟ್ ಬ್ರಾಂಡಿಂಗ್, ವಿಶೇಷ ಫ್ಲ್ಯಾಟ್ ಡೋರ್ ಸಿಲ್ ಲಭ್ಯವಾಗಲಿದೆ.

ಫಿಯೆಟ್ ಪುಂಟೊ ಸ್ಪೋರ್ಟಿವೊ ಸೀಮಿತ ಆವೃತ್ತಿ ಬಿಡುಗಡೆ

ಒಟ್ಟಿನಲ್ಲಿ ನೂತರ ಪಂಟೊ ಸ್ಪೋರ್ಟಿವೊ ವೆರಿಯಂಟ್ ನೊಂದಿಗೆ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರುಗಳ ವಿಭಾಗದಲ್ಲಿ ಮತ್ತಷ್ಟು ಶಕ್ತಿಶಾಲಿ ಚಾಲನೆಯ ಅನುಭವ ಪಡೆಯಬಹುದಾಗಿದೆ.

ಇವನ್ನೂ ಓದಿ

ದೇಶದ ರಸ್ತೆಗಿಳಿದ ಶಕ್ತಿಶಾಲಿ ಅಬಾರ್ತ್ ಪುಂಟೊ, ಅವೆಂಚ್ಯುರಾ ಮುಂದಕ್ಕೆ ಓದಿ

More from DriveSpark

Article Published On: Friday, October 30, 2015, 11:54 [IST]
English summary
Limited Edition Fiat Punto Launched In India; Price, Specs & More
Read more on ಫಿಯೆಟ್ fiat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+