ಆಸ್ಪೈರ್ ಆಯ್ತು; ಬೆನ್ನಲ್ಲೇ ಹೊಸ ಫಿಗೊ, ಎಂಡೀವರ್ ಬಿಡುಗಡೆಗೆ ಸಿದ್ಧ
ಇದೀಗಷ್ಟೇ ಫಿಗೊ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆ ಮಾಡುವ ಮೂಲಕ ಹೆಚ್ಚು ಸುದ್ದಿ ಮಾಡಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ಇದಾದ ಬೆನ್ನಲ್ಲೇ ಮತ್ತೆರಡು ಜನಪ್ರಿಯ ಬಿಡುಗಡೆಗಾಗಿ ಸಿದ್ಧತೆ ನಡೆಸುತ್ತಿದೆ. ಅವುಗಳೆಂದರೆ,
- ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಮತ್ತು
- ಫೋರ್ಡ್ ಎಂಡೀವರ್ ಎಸ್‌ಯುವಿ
ಈ ಪೈಕಿ ಈಗಾಗಲೇ ಮಾರುಕಟ್ಟೆಯಲ್ಲಿರುವ ಫಿಗೊ ಸ್ಥಾನವನ್ನು ಹೊಸ ತಲೆಮಾರಿನ ಫಿಗೊ ಹ್ಯಾಚ್ ಬ್ಯಾಕ್ ಪಡೆದುಕೊಳ್ಳಲಿದೆ. ಅಂತೆಯೇ 2015 ಫೋರ್ಡ್ ಎಂಡೀವರ್ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವು ಬಿಡುಗಡೆಗೆ ಸಜ್ಜಾಗುತ್ತಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಫಿಗೊ ಹ್ಯಾಚ್ ಬ್ಯಾಕ್ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯು ಮುಂಚಿತವಾಗಿ ಬಿಡುಗಡೆಯಾಗಲಿದೆ. ಹಾಗೆಯೇ ಎಂಡೀವರ್ 2016 ವರ್ಷಾರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ನಿರಂತರ ಅಂತರಾಳದಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುವುದರೊಂದಿಗೆ ತಾಜಾತನವನ್ನು ಕಾಪಾಡಿಕೊಳ್ಳುವ ಇರಾದೆ ಹೊಂದಿರುವ ಫೋರ್ಡ್, ಗರಿಷ್ಠ ಮಾರಾಟವನ್ನು ನಿರೀಕ್ಷೆ ಮಾಡುತ್ತಿದೆ.

ಫೋರ್ಡ್ ಆಸ್ಪೈರ್ ಸೋದರ ಕಾ (Ka) ಹ್ಯಾಚ್ ಬ್ಯಾಕ್ ಕಾರು ಈಗಾಗಲೇ ಅನೇಕ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದ್ದು, ಇದೇ ಕಾರು ಭಾರತಕ್ಕೂ ಪ್ರವೇಶವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಸಂಬಂಧ ತಾಜಾ ಮಾಹಿತಿಗಾಗಿ ಸದಾ ನಮ್ಮ ಡ್ರೈವ್ ಸ್ಪಾರ್ಕ್ ಓದುತ್ತಿರಿ.


Click it and Unblock the Notifications