ಅಧ್ಯಯನ, ಅಭಿವೃದ್ಧಿಗಾಗಿ ಭಾರತ ತಲುಪಿದ ಫಿಯೆಟ್ ಜೀಪ್

By Nagaraja

ಭಾರತದಲ್ಲಿ ಬಿಡುಗಡೆಗಾಗಿ ಮೀನಾಮೇಷ ಎದುರಿಸುತ್ತಿರುವ ಐಕಾನಿಕ್ ಜೀಪ್ ಬ್ರ್ಯಾಂಡ್ ಅಧ್ಯಯನ ಹಾಗೂ ಅಭಿವೃದ್ಧಿ ಕಾರ್ಯಕ್ಕಾಗಿ ದೇಶವನ್ನು ತಲುಪಿದೆ. ಇಟಲಿಯ ದೈತ್ಯ ಫಿಯೆಟ್ ಅಧೀನತೆಯಲ್ಲಿರುವ ಜೀಪ್‌ನ ಗ್ರ್ಯಾಂಡ್ ಕೆರೊಕೆ ಎಸ್‌ಆರ್‌ಟಿ ಮಾದರಿಯನ್ನು ದೇಶಕ್ಕೆ ಆಮದು ಮಾಡಲಾಗಿದೆ.

ಮುಂದಿನ ವರ್ಷ ಐಕಾನಿಕ್ ಜೀಪ್ ಬ್ರ್ಯಾಂಡ್ ಭಾರತ ಪ್ರವೇಶ ಪಡೆಯಲಿದೆ. ಮುಂಬರುವ 2016 ಆಟೋ ಎಕ್ಸ್ ಪೋದಲ್ಲಿ ಇವೆಲ್ಲದಕ್ಕೂ ಸ್ಪಷ್ಟ ಉತ್ತರ ದೊರಕಲಿದೆ.

ಜೀಪ್

ಭಾರತದಲ್ಲಿ ಜೀಪ್ ವ್ರ್ಯಾಂಗ್ಲರ್, ಗ್ರ್ಯಾಂಡ್ ಕೆರೊಕೆ ಮತ್ತು ರೆನೆಗಡೆ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಫಿಯೆಟ್ ಹೊಂದಿದೆ. ಈ ಪೈಕಿ ವ್ರ್ಯಾಂಗ್ಲರ್ ಮತ್ತು ವ್ರ್ಯಾಂಗ್ಲರ್ ಮಾದರಿಗಳು ಮುಂದಿನ ಸಾಲಿನಲ್ಲಿ ಹಾಗೂ ರೆನೆಗಡೆ ಕಾಂಪಾಕ್ಟ್ ಎಸ್‌ಯುವಿ 2017ರ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಜಾಗತಿಕವಾಗಿ ಗ್ರ್ಯಾಂಡ್ ಕೆರೊಕೆ ಅನೇಕ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಈ ಪೈಕಿ 3.0 ಲೀಟರ್ ವಿ6 ಇಕೊಡೀಸೆಲ್, 3.6 ಲೀಟರ್ ಪೆಂಟಾಸ್ಟಾರ್ ವಿ6, 5.7 ಲೀಟರ್ ಎಚ್‌ಇಎಂಐ ವಿ8, ಎಸ್‌ಆರ್‌ಟಿ 6.4 ಲೀಟರ್ ಎಚ್‌ಇಎಂಐ ವಿ8 ಎಂಜಿನ್ ಆಯ್ಕೆಗಳಿವೆ. ಆದರೆ ಒಂದರೆಡು ಮಾತ್ರ ಭಾರತದಲ್ಲಿ ಲಭ್ಯವಾಗಲಿದೆ.

ಜೀಪ್

ಐಷಾರಾಮಿ ಕ್ರೀಡಾ ಬಳಕೆಯ ವಾಹನಕ್ಕೆ ಸಮಾನವಾಗಿ ಅನೇಕ ಸುರಕ್ಷಾ ವೈಶಿಷ್ಟ್ಯಗಳನ್ನು ಪಡೆಯಲಿದೆ. ಇದು ಢಿಕ್ಕಿ ಗ್ರಹಣ ಹಾಗೂ ಎಚ್ಚರಿಕಾ ಶಕ್ತಿ, ಆಕ್ಸಿಡಂಟ್ ರೆಸ್ಪಾನ್ಸ್ ಸಿಸ್ಟಂ, ಪಾರ್ಕ್ ಅಸಿಸ್ಟ್ ಸಿಸ್ಟಂ, ರೈನ್ ಬ್ರೇಕ್ ಸರ್ಪೋಟ್, ರೆಡಿ ಅಲರ್ಟ್ ಬ್ರೇಕಿಂಗ್, ಏರ್ ಬ್ಯಾಗ್ ಮತ್ತು ಇನ್ನಿತರ ಅನೇಕ ಭದ್ರತಾ ವ್ಯವಸ್ಥೆಗಳನ್ನು ಪಡೆಯಲಿದೆ.

ಭಾರತವನ್ನು ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ತಲುಪಲಿರುವ ಗ್ರ್ಯಾಂಡ್ ಕೆರೊಕೆ ಇಲ್ಲಿ ದೊರಕುವ ಬೇಡಿಕೆಗೆ ಅನುಗುಣವಾಗಿ ಭವಿಷ್ಯದಲ್ಲಿ ಸ್ಥಳೀಯವಾಗಿ ಜೋಡಣೆ ಮಾಡಲಾಗುವುದು.

ಭಾರತದಲ್ಲಿ ಜೀಪ್ ಗ್ರ್ಯಾಂಡ್ ಕೆರೊಕೆ ಪ್ರಮುಖವಾಗಿಯೂ ಲ್ಯಾಂಡ್ ಕ್ರೂಸರ್ ಡಿಸ್ಕವರಿ ಸ್ಪೋರ್ಟ್, ಮರ್ಸಿಡಿಸ್ ಬೆಂಝ್ ಜಿಎಲ್ಇ, ಆಡಿ ಕ್ಯೂ5 ಮತ್ತು ಎಕ್ಸ್3 ಪ್ರತಿಸ್ಪರ್ಧಿಯಾಗಲಿದ್ದು, 35ರಿಂದ 45 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

More from DriveSpark

Article Published On: Saturday, October 31, 2015, 15:22 [IST]
English summary
Jeep Grand Cherokee SRT Comes To India For R&D Purpose
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+