ಮಹೀಂದ್ರ ತೆಕ್ಕೆಗೆ ಪಿನಿನ್ ಫರಿನಾ ?
ದೇಶದ ಎಸ್ ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಟೆಗೆ ಸಜ್ಜಾಗಿದ್ದು, ಇಟಲಿಯ ಐಕಾನಿಕ್ ಡಿಸೈನ್ ಬ್ರಾಂಡ್ ಪಿನಿನ್ ಫರಿನಾ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಇರಾದೆಯಲ್ಲಿದೆ.
ಜಾಗತಿಕವಾಗಿ ಸ್ಯಾಂಗೊಂಗ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಮಹೀಂದ್ರ ಈಗ ಪಿನಿನ್ ಫರಿನಾ ಮೇಲೆ ಕಣ್ಣಾಯಿಸಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದ್ದಲ್ಲಿ ಪಿನಿನ್ ಫರಿನಾ ಮಹೀಂದ್ರ ಪಾಲಾಗಲಿದೆ.

ಅನೇಕ ವಾಹನ ತಯಾರಿಕ ಸಂಸ್ಥೆಗಳಿಗೆ ವಿನ್ಯಾಸ ರಚನೆಯಲ್ಲಿ ನೆರವಾಗಿರುವ ಈ ಇಟಲಿ ಮೂಲದ ಸಂಸ್ಥೆಯು ಜಾಗತಿಕ ಮಟ್ಟದಲ್ಲೇ ಅತ್ಯುತ್ತಮ ಡಿಸೈನ್ ತಂತ್ರಗಾರಿಕೆಯನ್ನು ಹೊಂದಿದೆ.
ಆಲ್ಫಾ ರೊಮಿಯೋ, ಫೆರಾರಿ ಹಾಗೂ ಹೋಂಡಾ ಮುಂತಾದ ಸಂಸ್ಥೆಗಳಿಗಾಗಿ ಈ ಆಟೋಮೊಬೈಲ್ ಡಿಸೈನ್ ಸಂಸ್ಥೆಯು ಈಗಾಗಲೇ ನೆರವಾಗಿದೆ. ಅಂತೆಯೇ ಮುಂಬರುವ ವರ್ಷಗಳಿಗೆ ಸಂಬಂಧಪಟ್ಟಂತೆ ಅನೇಕ ಕಾನ್ಸೆಪ್ಟ್ ಮಾದರಿಗಳನ್ನು ತಯಾರಿಸಿದೆ.
ಇತ್ತೇಚೆಗಷ್ಟೇ ಮಹೀಂದ್ರ ಸಂಸ್ಥೆಯು ದ್ವಿಚಕ್ರ ಬ್ರಾಂಡ್ ಪ್ಯೂಜೊ ಸಹ ಖರೀದಿಸಿಕೊಂಡಿತ್ತು. ಈಗ ಇನ್ನಷ್ಟು ಮಾರಾಟ ಕುದುರಿಸಿಕೊಳ್ಳುವ ಯೋಚನೆಯಲ್ಲಿದೆ.


Click it and Unblock the Notifications








