ಕ್ರೆಟಾ ಸವಾಲು ಹಿಮ್ಮೆಟ್ಟಿಸಿದ ಬೊಲೆರೊ ನಂ.1 ಸ್ಥಾನಕ್ಕೆ ಜಿಗಿತ

By Nagaraja

ಜಿದ್ದಾಜಿದ್ದಿನ ಮಾರಾಟ ಹೋರಾಟದ ನಡುವೆಯೂ ಅತಿ ನೂತನ ಕ್ರೆಟಾ ಸವಾಲನ್ನು ಹಿಮ್ಮೆಟ್ಟಿಸಿರುವ ದೇಶದ ಅತ್ಯಂತ ಜನಪ್ರಿಯ ಮಹೀಂದ್ರ ಬೊಲೆರೊ ಕ್ರೀಡಾ ಬಳಕೆಯ ವಾಹನವು ಮಗದೊಮ್ಮೆ ಅಗ್ರಸ್ಥಾನಕ್ಕೇರಿದೆ.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ನಂ.2 ಸ್ಥಾನಕ್ಕೆ ಕುಸಿತ ಕಂಡಿರುವ ಬೊಲೆರೊ ಕೇವಲ ಒಂದು ತಿಂಗಳ ಅವಧಿಯಲ್ಲೇ ಮತ್ತೆ ನಂ.1 ಪಟ್ಟ ಆಲಂಕರಿಸಿದೆ. 2015 ಅಕ್ಟೋಬರ್ ತಿಂಗಳಲ್ಲಿ 7,754 ಯುನಿಟ್ ಗಳ ಮಾರಾಟ ದಾಖಲಿಸಿರುವ ಬೊಲೆರೊ ಕೆಲವೇ ಅಂಕಿಗಳ ಅಂತರದಲ್ಲಿ ಗೆಲುವು ದಾಖಲಿಸಿದೆ.

ಮಹೀಂದ್ರ ಬೊಲೆರೊ

ಇದೇ ಅವಧಿಯಲ್ಲಿ ನೂತನ ಕ್ರೆಟಾ 7,225 ಯುನಿಟ್ ಗಳ ಮಾರಾಟ ದಾಖಲಿಸಿತ್ತು. ಈ ಮೂಲಕ ಬೊಲೆರೊ 529 ಯುನಿಟ್ ಗಳ ಅಂತರದ ಗೆಲುವು ದಾಖಲಿಸಿತ್ತಲ್ಲದೆ ಮಗದೊಮ್ಮೆ ನಂ.1 ಪಟ್ಟಕ್ಕೆ ಜಿಗಿತ ಕಂಡಿದೆ.
ಹ್ಯುಂಡೈ ಕ್ರೆಟಾ

ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಹೆಚ್ಚಿನ ಜನಪ್ರಿಯತೆ ಕಾಪಾಡಿಕೊಂಡಿರುವುದೇ ಬೊಲೆರೊ ಯಶಸ್ಸಿಗೆ ಕಾರಣವಾಗಿದೆ. ಒಂದು ರಫ್ ಆಂಡ್ ಟಫ್ ಎಸ್ ಯುವಿ ಹುಡುಕುತ್ತಿರುವವರು ನೇರವಾಗಿ ಗರಿಷ್ಠ ನಿರ್ವಹಣೆ ಹಾಗೂ ಇಂಧನ ಕ್ಷಮತೆಯ ಬೊಲೆರೊ ಕಾರನ್ನೇ ಆಯ್ಕೆ ಮಾಡುತ್ತಿದ್ದಾರೆ. ಇದು ಬೊಲೊರೊ ಹೆಚ್ಚಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇನ್ನೊಂದೆಡೆ ತಾಜಾತನದ ಹವಾ ಮೂಡಿಸಿರುವ ಕ್ರೆಟಾ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ಒದಗಿಸುತ್ತಿದೆ.

More from DriveSpark

Article Published On: Friday, November 6, 2015, 14:37 [IST]
English summary
Mahindra Bolero Beats Hyundai Creta In Sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+