ಸದ್ದಿಲ್ಲದೆ ಮಹೀಂದ್ರ ಸ್ಕಾರ್ಪಿಯೊ ಆಟೋಮ್ಯಾಟಿಕ್ ಕಾರು ಬಿಡುಗಡೆ

ದೇಶದ ಕ್ರೀಡಾ ಬಳಕೆಯ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು, ಸದ್ದಿಲ್ಲದೆ ಸ್ಕಾರ್ಪಿಯೊ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಈ ಸಂಬಂಧ ಡೀಲರುಗಳಿಂದ ಸ್ಪಷ್ಟ ಮಾಹಿತಿ ದೊರಕಿದ್ದು, ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಮುಂದಿನ 45 ದಿನಗಳೊಳಗೆ ಕಾರು ಹಸ್ತಾಂತರವಾಗಲಿದೆ. ಮಹೀಂದ್ರ ಸ್ಕಾರ್ಪಿಯೊ ಆಟೋಮ್ಯಾಟಿಕ್ ಮಾದರಿಯು ಟಾಪ್ ಎಂಡ್ ಎಸ್10 ವೆರಿಯಂಟ್ ನಲ್ಲಿ ಮಾತ್ರ ಲಭ್ಯವಾಗಲಿದೆ. ಹಾಗೆಯೇ ಟು ವೀಲ್ ಮತ್ತು ಫೋರ್ ವೀಲ್ ಡ್ರೈವ್ ಆಯ್ಕೆಯಿರಲಿದೆ.

ಆನ್ ರೋಡ್ ಬೆಲೆ (ಮುಂಬೈ)

ಆನ್ ರೋಡ್ ಬೆಲೆ (ಮುಂಬೈ)

  • ಎಸ್10 ಟು ವೀಲ್ ಡ್ರೈವ್ ಆಟೋಮ್ಯಾಟಿಕ್ - 15.49 ಲಕ್ಷ ರು.
  • ಎಸ್10 ಫೋರ್ ವೀಲ್ ಡ್ರೈವ್ ಆಟೋಮ್ಯಾಟಿಕ್ - 16.92 ಲಕ್ಷ ರು.
  • ಸದ್ದಿಲ್ಲದೆ ಮಹೀಂದ್ರ ಸ್ಕಾರ್ಪಿಯೊ ಆಟೋಮ್ಯಾಟಿಕ್ ಕಾರು ಬಿಡುಗಡೆ

    ಆಸಕ್ತ ಗ್ರಾಹಕರು ಮಹೀಂದ್ರ ಅಧಿಕೃತ ಡೀಲರುಗಳ ಬಳಿ ಐದು ಲಕ್ಷ ರು.ಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ. ಅಲ್ಲದೆ ಹೊಸತಾದ ಆಟೋಮ್ಯಾಟಿಕ್ ವೆರಿಯಂಟ್ ಮ್ಯಾನುವಲ್ ಟಾಪ್ ಎಂಡ್ ವೆರಿಯಂಟ್ ಗಿಂತಲೂ ಅಂದಾಜು ಒಂದು ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

    ಸದ್ದಿಲ್ಲದೆ ಮಹೀಂದ್ರ ಸ್ಕಾರ್ಪಿಯೊ ಆಟೋಮ್ಯಾಟಿಕ್ ಕಾರು ಬಿಡುಗಡೆ

    ಮಹೀಂದ್ರ ಆಟೋಮ್ಯಾಟಿಕ್ ವೆರಿಯಂಟ್ ಸಹ 2.2 ಲೀಟರ್ ಎಂಹಾಕ್ (mHawk) ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 120 ಅಶ್ವಶಕ್ತಿ (280 ಎನ್ ಎಂ ತಿರುಗುಬಲ) ಉತ್ಪಾದಿಸಲಿದೆ.

    ಸದ್ದಿಲ್ಲದೆ ಮಹೀಂದ್ರ ಸ್ಕಾರ್ಪಿಯೊ ಆಟೋಮ್ಯಾಟಿಕ್ ಕಾರು ಬಿಡುಗಡೆ

    ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಎರ್ ಬ್ಯಾಗ್, ಎಬಿಎಸ್, ಇಬಿಡಿ, ಆ್ಯಂಟಿ ಥೆಫ್ಟ್ ಸಿಸ್ಟಂ ಮತ್ತು ಇಂಜಿನ್ ಇಂಮೊಬಿಲೈಜರ್ ಮುಂತಾದ ಸೇವೆಗಳಿರಲಿದೆ.

    ಸದ್ದಿಲ್ಲದೆ ಮಹೀಂದ್ರ ಸ್ಕಾರ್ಪಿಯೊ ಆಟೋಮ್ಯಾಟಿಕ್ ಕಾರು ಬಿಡುಗಡೆ

    ಸದ್ಯಕ್ಕೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪೂರೈಕೆ ಮಾಡುವ ಸಂಸ್ಥೆಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಈ ಸಂಬಂಧ ಸಂಸ್ಥೆಯ ಅಧಿಕೃತ ಪ್ರಕಣೆಗಾಗಿ ಕಾಯುತ್ತಿದ್ದೇವೆ.

More from DriveSpark

Article Published On: Wednesday, July 15, 2015, 16:35 [IST]
English summary
Mahindra Scorpio Automatic Variant launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+