ಬರುತ್ತಿದೆ ನೂತನ 'ಇಂಟೆಲ್ಲಿ-ಹೈಬ್ರಿಡ್' ತಂತ್ರಜ್ಞಾನದೊಂದಿಗೆ ಸ್ಕಾರ್ಪಿಯೊ

By Nagaraja

ಆಧುನಿಕ ವಾಹನ ಜಗತ್ತಿನಲ್ಲಿ ಪರಿಸರ ಸ್ನೇಹಿ ಹೈಬ್ರಿಡ್ ಕಾರುಗಳ ಅಭಿವೃದ್ಧಿಯತ್ತ ವಾಹನ ಸಂಸ್ಥೆಗಳು ಹೆಚ್ಚಿನ ಒಲವನ್ನು ತೋರುತ್ತಿದೆ. ಹೈಬ್ರಿಡ್ ಕಾರುಗಳ ಅಭಿವೃದ್ಧಿಯಲ್ಲಿ ದೇಶದ ಮುಂಚೂಣಿಯ ವಾಹನ ಸಂಸ್ಥೆಗಳ ನಡುವೆ ಪೈಪೋಟಿ ಏರ್ಪಟ್ಟಿರುವಂತೆಯೇ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ತನ್ನ ಜನಪ್ರಿಯ ಸ್ಕಾರ್ಪಿಯೊದಲ್ಲಿ ಅತಿ ನೂತನ 'ಇಂಟೆಲ್ಲಿ ಹೈಬ್ರಿಡ್' ತಂತ್ರಗಾರಿಕೆಯನ್ನು ಪರಿಚಯಿಸಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಈ ಹಿಂದೆಯೇ ಸ್ಕಾರ್ಪಿಯೊ ಮೈಕ್ರೊ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿತ್ತು. ಈಗ ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಸಂಸ್ಥೆಯು ಮತ್ತಷ್ಟು ವಿಶಿಷ್ಟತೆಗಳೊಂದಿಗೆ ಇಂಟೆಲ್ಲಿ ಹೈಬ್ರಿಡ್ ತಂತ್ರಗಾರಿಕೆಯನ್ನು ಬಿಡುಗಡೆ ಮಾಡಲಿದೆ.

ಬರುತ್ತಿದೆ ನೂತನ 'ಇಂಟೆಲ್ಲಿ-ಹೈಬ್ರಿಡ್' ತಂತ್ರಜ್ಞಾನದೊಂದಿಗೆ ಸ್ಕಾರ್ಪಿಯೊ

ಮೈಲ್ಡ್ ಹೈಬ್ರಿಡ್ ಸಿಸ್ಟಂ ಎಂಬುದಾಗಿಯೂ ಗುರುತಿಸಿಕೊಂಡಿರುವ ನೂತನ ಇಂಟೆಲ್ಲಿ ಹೈಬ್ರಿಡ್ ತಂತ್ರಜ್ಞಾನವು ಎಂಜಿನ್ ಗಳಿಗೆ ವಿದ್ಯುತ್ ಸಹಾಯ ಮಾಡಲು ನೆರವಾಗಲಿದೆ.

ಬರುತ್ತಿದೆ ನೂತನ 'ಇಂಟೆಲ್ಲಿ-ಹೈಬ್ರಿಡ್' ತಂತ್ರಜ್ಞಾನದೊಂದಿಗೆ ಸ್ಕಾರ್ಪಿಯೊ

ಈ ಮುನ್ನ ಪರಿಚಯಿಸಿರುವ ಮೈಕ್ರೊ ಹೈಬ್ರಿಡ್ ಸಿಸ್ಟಂ ಮೂಲತ: ಸ್ಟ್ಯಾರ್ಟ್-ಸ್ಟಾಪ್ ತಂತ್ರಗಾರಿಕೆಯನ್ನು ಮಾತ್ರ ಹೊಂದಿತ್ತು. ಇದನ್ನೀಗ ಇಂಟೆಲ್ಲಿ ಹೈಬ್ರಿಡ್ ತಂತ್ರಜ್ಞಾನವು ಬದಲಾಯಿಸಿಕೊಳ್ಳಲಿದೆ.

ಬರುತ್ತಿದೆ ನೂತನ 'ಇಂಟೆಲ್ಲಿ-ಹೈಬ್ರಿಡ್' ತಂತ್ರಜ್ಞಾನದೊಂದಿಗೆ ಸ್ಕಾರ್ಪಿಯೊ

ಸ್ಟ್ಯಾರ್ಟ್-ಸ್ಟಾಪ್ ತಂತ್ರಜ್ಞಾನದ ಹೊರತಾಗಿ ನೂತನ ಇಂಟೆಲ್ಲಿ ಹೈಬ್ರಿಡ್ ತಂತ್ರಗಾರಿಕೆಯು, ಬ್ರೇಕ್ ಎನರ್ಜಿ ಮರು ಉತ್ಪಾದನಾ ಶಕ್ತಿ, ಹೆಚ್ಚು ಸಾಮರ್ಥ್ಯದ ಬ್ಯಾಟರಿ ಮತ್ತು ಇಂಟೇಗ್ರೇಟಡ್ ಸ್ಟ್ಯಾರ್ಟರ್ ಮೋಟಾರುಗಳನ್ನು ಪಡೆಯಲಿದೆ.

ಬರುತ್ತಿದೆ ನೂತನ 'ಇಂಟೆಲ್ಲಿ-ಹೈಬ್ರಿಡ್' ತಂತ್ರಜ್ಞಾನದೊಂದಿಗೆ ಸ್ಕಾರ್ಪಿಯೊ

ಬ್ಯಾಟರಿಗಳನ್ನು ಚಾರ್ಜ್ ಮಾಡಲು ಬೇಕಾದ ಪವರ್ ಮತ್ತು ಮೋಟಾರ್ ಗೆ ಬೇಕಾದಷ್ಟು ವಿದ್ಯುತ್ ಶಕ್ತಿಯನ್ನು ಬ್ರೇಕ್ ಎರ್ನಜಿ ಮರು ಉತ್ಪಾದನಾ ಶಕ್ತಿಯೊಂದಿಗೆ ತುಂಬಲಾಗುವುದು.

ಬರುತ್ತಿದೆ ನೂತನ 'ಇಂಟೆಲ್ಲಿ-ಹೈಬ್ರಿಡ್' ತಂತ್ರಜ್ಞಾನದೊಂದಿಗೆ ಸ್ಕಾರ್ಪಿಯೊ

ಹಾಗಿದ್ದರೂ ಮಹೀಂದ್ರ ಸ್ಕಾರ್ಪಿಯೊ ಪೂರ್ಣ ಹೈಬ್ರಿಡ್ ವ್ಯವಸ್ಥೆಯನ್ನು ಹೊಂದಿರುವ ಕಾರಲ್ಲ. ಅಲ್ಲದೆ ಎಲೆಕ್ಟ್ರಿಕ್ ಬಲದಿಂದ ಸಂಚರಿಸುವ ಸಾಮರ್ಥ್ಯವೂ ಇದಕ್ಕಿರುವುದಿಲ್ಲ.

ಬರುತ್ತಿದೆ ನೂತನ 'ಇಂಟೆಲ್ಲಿ-ಹೈಬ್ರಿಡ್' ತಂತ್ರಜ್ಞಾನದೊಂದಿಗೆ ಸ್ಕಾರ್ಪಿಯೊ

ಮಹೀಂದ್ರ ನೂತನ ಇಂಟೆಲ್ಲಿ ಹೈಬ್ರಿಡ್ ತಂತ್ರಗಾರಿಕೆಯು 2.2 ಲೀಟರ್ ಡೀಸೆಲ್ ಆವೃತ್ತಿಯಲ್ಲಿ ಮಾತ್ರ ಪರಿಚಯಿಸಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಹೀಂದ್ರ ಕಾರುಗಳಿಗೆ ನೂತನ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಭರವಸೆಯಿದೆ.

Most Read Articles

Kannada
English summary
Mahindra Scorpio To Get New Mild Hybrid System
Story first published: Wednesday, July 20, 2016, 13:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X