ಮಹೀಂದ್ರದಿಂದ ಸಿಹಿ ಸುದ್ದಿ; ಬರುತ್ತಿದೆ ಸ್ಕಾರ್ಪಿಯೊ ಆಟೋಮ್ಯಾಟಿಕ್
ದೇಶದ ವಾಹನ ಪ್ರೇಮಿಗಳಿಗೆ ಸಿಹಿ ಸುದ್ದಿಯನ್ನು ಬಿತ್ತರಿಸಿರುವ ಎಸ್ ಯುವಿ ದೈತ್ಯ ವಾಹನ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ, ಅತಿ ಶೀಘ್ರದಲ್ಲೇ ಸ್ಕಾರ್ಪಿಯೊ ಆಟೋಮ್ಯಾಟಿಕ್ ಕಾರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ತನ್ನ ಜನಪ್ರಿಯ ಕ್ರೀಡಾ ಬಳಕೆಯ ವಾಹನಕ್ಕೆ ಹೊಸ ಸ್ವರೂಪ ನೀಡಿದ್ದ ಮಹೀಂದ್ರ ಸಂಸ್ಥೆಯು ಹೆಚ್ಚಿನ ಮಾರಾಟವನ್ನು ಗುರಿಯಾಗಿರಿಸಿಕೊಂಡಿತ್ತು.

ಬಿಡುಗಡೆ ವೇಳೆಯಲ್ಲೇ ದೇಶದ ನಂ.1 ಎಸ್‌ಯುವಿ ಕಾರಿನ ಆಟೋಮ್ಯಾಟಿಕ್ ಮಾದರಿ ಬಿಡುಗಡೆ ಮಾಡುವುದಾಗಿ ಸಂಸ್ಥೆ ಘೋಷಿಸಿತ್ತು. ಇದೀಗ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಸಂಸ್ಥೆಯು ಅತಿ ಶೀಘ್ರದಲ್ಲೇ ವಾಹನ ಪ್ರೇಮಿಗಳ ನಿರೀಕ್ಷೆಗಳನ್ನು ನನಸಾಗಿಸಲಿದೆ.
ನೂತನ ಸ್ಕಾರ್ಪಿಯೊ ಆಟೋಮ್ಯಾಟಿಕ್ ವೆರಿಯಂಟ್ ಟು ವೀಲ್ ಜೊತೆಗೆ ಫೋರ್ ವೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಇದರ ಹೊರತಾಗಿ ಹೊಸ ಕಾರಿನಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವ ಸಾಧ್ಯತೆ ಕಡಿಮೆಯಾಗಿದೆ.

ಸೆಲ್ಫ್ ಶಿಫ್ಟಿಂಗ್ ಹೈಡ್ರಾಲಿಕ್ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿ ಕಂಡುಬರಲಿದೆ. ಅಲ್ಲದೆ ಈಗಿನ ಮಾದರಿಗಿಂತಲೂ ಸರಿ ಸುಮಾರು ಒಂದು ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.


Click it and Unblock the Notifications








