ಮಹೀಂದ್ರ ಹೊಸ ಸಣ್ಣ ಟ್ರಕ್ 'ಜೀತೋ'
ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಸ್ಪಷ್ಟ ಯೋಜನೆಯನ್ನು ಹೊಂದಿರುವ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು ಅತಿ ಶೀಘ್ರದಲ್ಲೇ ವಾಣಿಜ್ಯ ವಾಹನವೊಂದನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಇದರಂತೆ ತನ್ನ ನೂತನ ವಾಣಿಜ್ಯ ವಾಹನವನ್ನು ಹೆಸರಿಸಿದೆ. ಅದುವೇ 'ಜೀತೋ'. ಇದು ಸಣ್ಣ ವಾಣಿಜ್ಯ ವಿಭಾಗದಲ್ಲಿ ಗುರುತಿಸಿಕೊಳ್ಳಲಿದ್ದು, ಟಾಟಾ ಸಣ್ಣ ಟ್ರಕ್ ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಪ್ರಯಾಣಿಕ ಜೊತೆಗೆ ವಾಣಿಜ್ಯ ವಾಹನಗಳ ಮಿಶ್ರಣವು ಸಂಸ್ಥೆಯ ಯೋಜನೆಯಾಗಿದೆ. ಈ ಸಂಬಂಧ ಹೇಳಿಕೆ ಕೊಟ್ಟಿರುವ ಮಹೀಂದ್ರ ಅಧ್ಯಕ್ಷ ಹಾಗೂ ಆಯೋಮೋಟಿವ್ ಕಾರ್ಯನಿರ್ವಹಕ ಅಧಿಕಾರಿಯಾಗಿರುವ ಪ್ರವೀಣ್ ಷಾ, ಸಣ್ಣ ವ್ಯಾಪಾರ ವಿಭಾಗದಲ್ಲೂ ಹೆಚ್ಚು ಗುರುತಿಸಿಕೊಳ್ಳಲು ನೆರವಾಗಲಿದೆ.
ಜೀತೋ ಸಣ್ಣ ವಾಣಿಜ್ಯ ವಾಹನದಲ್ಲಿ ಎಂ-ಡ್ಯುರಾ ಎಂಜಿನ್ ಕಾಣಿಸಿಕೊಳ್ಳಲಿದೆ. ಇದು ಸಂಸ್ಥೆಯ ಮೊದಲ ಡೈರಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್ ಆಗಿರಲಿದೆ. ಇದರಿಂದ ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲು ನೆರವಾಗಲಿದೆ.
ಈ ನಡುವೆ ನಿಕಟ ಭವಿಷ್ಯದಲ್ಲೇ ಎಲ್ಲ ಹೊಸತನದ ಕಾಂಪಾಕ್ಟ್ ಎಸ್ ಯುವಿ ಹಾಗೂ ಕ್ವಾಂಟೊ ಫೇಸ್ ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಮಹೀಂದ್ರ ಹೊಂದಿದೆ.


Click it and Unblock the Notifications








