ಈ ಕೂಡಲೇ ಬಲೆನೊ ಖರೀದಿಸಿ; ಇಲ್ಲವಾದ್ದಲ್ಲಿ ಬೆಲೆ ಜಾಸ್ತಿಯಾದಿತು!

Written By:

ಈ ಹಬ್ಬದ ಆವೃತ್ತಿಯಲ್ಲಿ ಅತಿ ನೂತನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕೊಳ್ಳುವ ಇರಾದೆಯಲ್ಲಿದ್ದೀರಾ ? ಹಾಗಿದ್ದರೆ ಈ ಸದಾವಕಾಶದ ಗರಿಷ್ಠ ಪ್ರಯೋಜನ ಪಡೆಯಿರಿ. ಈಗಷ್ಟೇ ಮಾರುಕಟ್ಟೆಗೆ ಎಂಟ್ರಿ ಮಾರುತಿ ಬಲೆನೊ ಹ್ಯಾಚ್ ಬ್ಯಾಕ್ ಕಾರು ಅತಿ ಹೆಚ್ಚಿನ ಬೇಡಿಕೆಗೆ ಪಾತ್ರವಾಗಿದೆ.

Also Read: ಬಲೆನೊ ಭಲ್ಲೇ..ಭಲ್ಲೇ; 2 ದಿನಗಳಲ್ಲಿ 4500 ಬುಕ್ಕಿಂಗ್ಸ್ ಮುಂದಕ್ಕೆ ಓದಿ

ಅಕ್ಟೋಬರ್ 26ರಂದು ಮಾರುಕಟ್ಟೆ ಪ್ರವೇಶಿಸಿರುವ ಬಲೆನೊ, ಪ್ರಸಕ್ತ ಸಾಲಿನ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮತ್ತಷ್ಟು ಮಾರಾಟ ಗುರಿಯಿರಿಸಿಕೊಂಡಿದೆ. ಅಂದರೆ ಹೊಸ ಕಾರು ಕೊಳ್ಳುವ ಸುಸಂದರ್ಭ ಇದಾಗಿದೆ.

To Follow DriveSpark On Facebook, Click The Like Button
ಮಾರುತಿ ಬಲೆನೊ

ಮಾರುಕಟ್ಟೆ ನಿಕಟ ವರ್ತಿಗಳಿಂದ ಲಭ್ಯವಿರುವ ಮಾಹಿತಿಗಳ ಪ್ರಕಾರ ಈ ಕೂಡಲೇ ಬಲೆನೊ ಕಾರಿಗಾಗಿ ಬುಕ್ಕಿಂಗ್ ಮಾಡಿಕೊಳ್ಳಿರಿ. ಇಲ್ಲವಾದ್ದಲ್ಲಿ ಸದ್ಯದಲ್ಲೇ (ದೀಪಾವಳಿ ಬಳಿಕ) ಬೆಲೆ ಏರಿಕೆಯಾಗಲಿದೆ ಎಂದು ತಿಳಿಸಿದೆ.

Also Read: ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಭರ್ಜರಿ ಬಿಡುಗಡೆ ಇಲ್ಲಿ ಕ್ಲಿಕ್ಕಿಸಿ

ನಿಮ್ಮ ಮಾಹಿತಿಗಾಗಿ ಅತಿ ನೂತನ ಬಲೆನೊ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳು ಅನುಕ್ರಮವಾಗಿ 4.99 ಹಾಗೂ 6.16 ಲಕ್ಷ ರು.ಗಳ ಪ್ರಾರಂಭಿಕ ಬೆಲೆಗಳಲ್ಲಿ (ಎಕ್ಸ್ ಶೋ ರೂಂ ದೆಹಲಿ) ಬಿಡುಗಡೆಯಾಗಿತ್ತು.

ಇನ್ನು ಸಂಸ್ಥೆಯಿಂದ ದೊರಕಿರುವ ಮಾಹಿತಿಯ ಪ್ರಕಾರ ಬಲೆನೊ ಬಗ್ಗೆ 12,000 ಮಂದಿ ವಿಚಾರಿಸಿದ್ದಾರೆ. ಈ ಪೈಕಿ ಎರಡು ದಿನಗಳಲ್ಲೇ 4,500ರಷ್ಟು ಮುಂಗಡ ಬುಕ್ಕಿಂಗ್ ದಾಖಲಾಗಿದೆ ಎಂಬುದು ತಿಳಿದು ಬಂದಿದೆ. ಸಂಸ್ಥೆಯು ಹೊಸತಾಗಿ ಆರಂಭಿಸಿರುವ ಪ್ರೀಮಿಯಂ ನೆಕ್ಸಾ ಶೋ ರೂಂ ಮುಖಾಂತರ ಬಲೆನೊ ಮಾರಾಟವಾಗುತ್ತಿದೆ. ಇದಕ್ಕೂ ಮೊದಲು ಇದೇ ವೇದಿಕೆ ಮುಖಾಂತರ ಎಸ್ ಕ್ರಾಸ್ ಮಾರಾಟವನ್ನು ನಡೆಸಲಾಗಿತ್ತು.

English summary
Why Pay More? Book The All-New Maruti Baleno (Hatchback) Now!
Story first published: Friday, October 30, 2015, 16:08 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark