ಬೆಂಗಳೂರಿನಲ್ಲಿ ಮಾರುತಿ ಬಲೆನೊ ಭಿತ್ತಿಪತ್ರ; 'ಕಮ್ಮಿಂಗ್ ಸೂನ್'

By Nagaraja

ಬೆಂಗಳೂರಿನಲ್ಲಿ ಸ್ಥಿತಗೊಂಡಿರುವ ನೆಕ್ಸಾ ಶೋ ರೂಂನಲ್ಲಿ ಅತಿ ನೂತನ ಮಾರುತಿ ಬಲೆನೊ ಪ್ರೀಮಿಯಂ ಕಾರು ಅತಿ ಶೀಘ್ರದಲ್ಲೇ ಬಿಡುಗಡೆಯಾಗುವುದಾಗಿ ಭಿತ್ತಿಪತ್ರ ಹಾಕಲಾಗಿದೆ. ಈ ನಡುವೆ ಆಟೋ ನಿಕಟವರ್ತಿಗಳಿಂದ ಲಭಿಸಿರುವ ಮಾಹಿತಿಗಳ ಪ್ರಕಾರ ಮಾರುತಿ ಬಲೆಲೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮುಂಬರುವ 2015 ಅಕ್ಟೋಬರ್ 26ರಂದು ಬಿಡುಗಡೆಯಾಗಲಿದೆ.

ಇದು ಸಂಸ್ಥೆಯು ಹೊಸತಾಗಿ ಆರಂಭಿಸಿರುವ ಪ್ರೀಮಿಯಂ ನೆಕ್ಸಾ ಶೋ ರೂಂಗಳ ಮುಖಾಂತರ ಮಾರಾಟವಾಗಲಿರುವ ಎರಡನೇ ಮಾದರಿಯಾಗಿರಲಿದೆ. ಅಲ್ಲದೆ ಭಾರತೀಯ ಬಲೆನೊ ಮಾದರಿಯು 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಹಾಗೂ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಪಡೆಯಲಿದೆ. ಆದರೆ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊಚಾರ್ಜ್ಡ್ ಎಂಜಿನ್ ಲಭಿಸುವುದು ಕಠಿಣವೆನಿಸಿದೆ. ಪಟ್ರೋಲ್ ಮಾದರಿಯು ಸಿವಿಟಿ ಹಾಗೂ 5 ಸ್ಪೀಡ್ ಮ್ಯಾನುವಲ್ ಅಂತೆಯೇ ಡೀಸೆಲ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಮಾತ್ರ ಲಭ್ಯವಾಗಲಿದೆ.

ಅಕ್ಟೋಬರ್ 26ರಂದು ಮಾರುತಿ ಬಲೆನೊ ಬಿಡುಗಡೆ

ಹೆಚ್ಚಿನ ಇಂಧನ ಕ್ಷಮತೆಗಾಗಿ ಮಾರುತಿ ಸಿಯಾಝ್ ಹೈಬ್ರಿಡ್ ಕಾರಿನಲ್ಲಿ ಬಳಕೆಯಾಗಿರುವುದಕ್ಕೆ ಸಮಾನವಾದ ಎಸ್‌ಎಚ್‌ವಿಎಸ್ ತಂತ್ರಜ್ಞಾನವು ಬಲೆನೊದಲ್ಲೂ ಬಳಕೆಯಾಗುವ ಸಾಧ್ಯತೆಯಿದೆ. ಇದು ಮತ್ತಷ್ಟು ಮಾರಾಟ ಗಿಟ್ಟಿಸಿಕೊಳ್ಳಲು ಸಹಕಾರಿಯಾಗಲಿದೆ.

ಅಕ್ಟೋಬರ್ 26ರಂದು ಮಾರುತಿ ಬಲೆನೊ ಬಿಡುಗಡೆ

3995 ಎಂಎಂ ಉದ್ದ, 1745 ಎಂಎಂ ಅಗಲ, 1470 ಎಂಎಂ ಎತ್ತರ ಹೊಂದಿರುವ ನೂತನ ಬಲೆನೊ ಪ್ರಮುಖವಾಗಿಯೂ ಹ್ಯುಂಡೈ ಎಲೈಟ್ ಐ20, ಹೋಂಡಾ ಜಾಝ್ ಮತ್ತು ಫೋಕ್ಸ್ ವ್ಯಾಗನ್ ಪೊಲೊ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ಅಕ್ಟೋಬರ್ 26ರಂದು ಮಾರುತಿ ಬಲೆನೊ ಬಿಡುಗಡೆ

ವೈಶಿಷ್ಟ್ಯಗಳ ಬಗ್ಗೆ ಕಣ್ಣಾಯಿಸುವುದಾದ್ದಲ್ಲಿ ಎಂಜಿನ್ ಸ್ಟ್ಯಾರ್ಟರ್ ಬಟನ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಮಾರುತಿಯ ಸ್ಮಾರ್ಟ್ ಪ್ಲೇ ಮಾಹಿತಿ ಮನರಂಜನಾ ಸಿಸ್ಟಂ, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್, ಇಬಿಡಿ, ಪ್ರೊಜೆಕ್ಟರ್ ಹೆಡ್ ಲೈಟ್ಸ್, ಮತ್ತು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.

ಬೆಲೆ ಪರಿಧಿ

ಬೆಲೆ ಪರಿಧಿ

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ 7.5 ಲಕ್ಷ ರು.ಗಳಿಂದ 9.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ನೂತನ ಬಲೆನೊ ಬಿಡುಗಡೆಯಾಗುವ ಸಂಭವವಿದೆ. ಈ ಸಂಬಂಧ ಬಿಡುಗಡೆ ವೇಳೆಯಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.

ಅಕ್ಟೋಬರ್ 26ರಂದು ಮಾರುತಿ ಬಲೆನೊ ಬಿಡುಗಡೆ

ಇತ್ತೀಚೆಗಷ್ಟೇ ಜರ್ಮನಿಯಲ್ಲಿ ಆಯೋಜನೆಯಾಗಿದ್ದ ಜಗತ್ತಿನ ಅತಿ ದೊಡ್ಡ ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲೂ ತನ್ನ ಸಾನಿಧ್ಯ ವ್ಯಕ್ತಪಡಿಸಿರುವ ಹೊಚ್ಚ ಹೊಸ ಬಲೆನೊ ಭಾರತೀಯರ ಪ್ರೀತಿ ಪಾತ್ರವಾಗುವಲ್ಲಿ ಯಶ ಕಂಡಿತೇ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Maruti Suzuki Baleno Teased: Launching On 26th October!
Story first published: Wednesday, September 30, 2015, 9:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X