ಆಕರ್ಷಕ ಕಾರು 2015 ಮಿನಿ ಒನ್ ಫಸ್ಟ್ ಫೈವ್ ಡೋರ್
ಜರ್ಮನಿಯ ಬಿಎಂಡಬ್ಲ್ಯು ಅಧೀನತೆಯಲ್ಲಿರುವ ಮಿನಿಯಿಂದ ಮಗದೊಂದು ಆಕರ್ಷಕ ಕಾರು ಸಿದ್ಧವಾಗುತ್ತಿದೆ. ಅದುವೇ ಮಿನಿ ಒನ್ ಫಸ್ಟ್ 5 ಡೋರ್.
ಐಕಾನಿಕ್ ಮಿನಿ ಮಾದರಿಗಳು ವಿದೇಶದಲ್ಲಿ ಜೀವನ ಶೈಲಿಯ ಭಾಗವಾಗಿದೆ. ಈ ಅಂದವಾದ ಕಾರನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಪ್ರತಿಷ್ಠೆಯಾಗಿ ಪರಿಗಣಿಸುತ್ತಾರೆ. ಅಂದ ಹಾಗೆ ಏಳು ಎಂಜಿನ್ ಆಯ್ಕೆಗಳಲ್ಲಿ ಮನಿಲಿ ಒನ್ ಫನ್ 5 ಡೋರ್ ಕಾರು ಲಭ್ಯವಾಗಲಿದೆ. ಹಾಗೆಯೇ ಹೆಸರಲ್ಲೇ ಸೂಚಿಸಿರುವಂತೆಯೇ ಐದು ಬಾಗಿಲುಗಳ ವಿನ್ಯಾಸದಲ್ಲಿ ಆಗಮನವಾಗಲಿದೆ.

ಮಿನಿ ಒನ್ ಫಸ್ಟ್ 5 ಡೋರ್ ತಾಂತ್ರಿಕತೆ
ನಾಲ್ಕು ಪೆಟ್ರೋಲ್ ಹಾಗೂ ಮೂರು ಡೀಸೆಲ್ ಎಂಜಿನ್ ಆಯ್ಕೆ,
ಅಶ್ವಶಕ್ತಿ - 75ರಿಂದ 192 ವರೆಗೆ
ಹೊಸ ಎಂಜಿನ್,
ಮಿನಿ ಟ್ವಿನ್ ಪವರ್ ಟರ್ಬೊ ಟೆಕ್ನಾಲಜಿ,
1.2 3 ಸಿಲಿಂಡರ್ ಸ್ಪಾರ್ಕ್ ಇಗ್ನಿಷನ್,
ಪೆಟ್ರೋಲ್ ಡೈರಕ್ಟ್ ಇಂಜೆಕ್ಷನ್,
ವೆರಿಯಬಲ್ ಕ್ಯಾಮ್‌ಶಾಫ್ಟ್ ಕಂಟ್ರೋಲ್,
6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್

ವೈಶಿಷ್ಟ್ಯಗಳು
ಇಂಟೇಗ್ರೇಟಡ್ ಗೇರ್ ಸೆನ್ಸಾರ್,
ಸರಾಸರಿ ಇಂಧನ ಬಳಕೆ 100 ಕೀ.ಮೀ.ಗೆ 5.2 ಲೀಟರ್,
ಎಮಿಷನ್ ಮಟ್ಟ (ಸಿಒ2) - ಪ್ರತಿ ಕೀ.ಮೀ.ಗೆ 121 ಗ್ರಾಂ,
ವೀಲ್ ಬೇಸ್ 72 ಮಿಲ್ಲಿಮೀಟರ್ ವರ್ಧನೆ,
ಲಗ್ಗೇಜ್ ಜಾಗ 278ರಿಂದ 941 ಲೀಟರ್ ವರೆಗೂ ವರ್ಧನೆ


Click it and Unblock the Notifications








