ಟೋಕಿಯೋದಲ್ಲಿ ಮಿಟ್ಸುಬಿಸಿ ಮಿನಿ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ
ಬಹುನಿರೀಕ್ಷಿತ 44ನೇ ಟೋಕಿಯೋ ಮೋಟಾರು ಶೋ ಆರಂಭವಾಗಿರುವಂತೆಯೇ ತವರೂರಾಗಿರುವ ಜಪಾನ್ ಮೂಲದ ಸಂಸ್ಥೆಯೇ ಆಗಿರುವ ಮಿಟ್ಸುಬಿಸಿ, ಅತಿ ನೂತನ ಇಎಕ್ಸ್ (eX) ಎಲೆಕ್ಟ್ರಿಕ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ಪರಿಕಲ್ಪನೆಯನ್ನು ಪ್ರದರ್ಶಿಸಿದೆ.
Also Read: ಮಂಗಳೂರು ವಿದ್ಯಾರ್ಥಿಗಳಿಂದ ಹೈಬ್ರಿಡ್ ಬೈಕ್ ತಯಾರಿ
ನೂತನ ಎಲೆಕ್ಟ್ರಿಕ್ ಕಾರು ಮಿಟ್ಸುಬಿಸಿ ಭವಿಷ್ಯದ ವಾಹನಗಳಿಗೆ ಕೈಗನ್ನಡಿಯಾಗಿರಲಿದ್ದು, ಜಗತ್ತಿನಲ್ಲಿ ಪರಿಸರ ಸ್ನೇಹಿ ವಾಹನಗಳ ನಿರ್ಮಾಣದಲ್ಲಿ ತನ್ನ ಕೊಡುಗೆಯನ್ನು ಸಲ್ಲಿಸಲಿದೆ.

ಮಿಟ್ಸುಬಿಸಿ ಸಂಸ್ಥೆಯೇ ವಿವರಿಸುವಂತೆಯೇ ಇಲ್ಲಿ ಇಎಕ್ಸ್ ಎಂಬುದು ಎಲೆಕ್ಟ್ರಿಕ್ ಎಕ್ಸ್ ಅಥವಾ ಕ್ರಾಸೋವರ್ ಎಂಬುದನ್ನು ಸೂಚಿಸುತ್ತದೆ. ಇದು ಸಂಸ್ಥೆಯ ಜನಪ್ರಿಯ ಔಟ್ಲೆಂಡರ್ ಕೆಳಗಡೆ ಗುರುತಿಸಿಕೊಳ್ಳಲಿದೆ.

ಮಿಟ್ಸುಬಿಸಿ ಭವಿಷ್ಯದ ವಾಹನ ವಿನ್ಯಾಸಕ್ಕೆ ಇಎಕ್ಸ್ ಹೊಸ ಆಯಾಮ ಕಲ್ಪಿಸಲಿದೆ. ಇದರ ಮುಂದುಗಡೆ ಮಿಟ್ಸುಬಿಸಿ ಮೋಟಾರ್ಸ್ ಕಾರ್ಪೋರೇಷನ್‌ನ ಡೈನಾಮಿಕ್ ಶಿಲ್ಡ್ ಫ್ರಂಟ್ ವಿನ್ಯಾಸ ತಂತ್ರಗಾರಿಕೆ ಅನುಸರಿಸಲಾಗಿದೆ.

ಸಂಪೂರ್ಣ ವಿದ್ಯುತ್ ಚಾಲಿತ ಜೊತೆಗೆ ಆಲ್ ವೀಲ್ ಡ್ರೈವ್, ಆಕ್ಟಿವ್ ಸೇಫ್ಟಿ, ಆಟೋಮ್ಯಾಟಿಕ್ ಚಾಲನೆ ಮತ್ತು ಕನೆಕ್ಟಡ್ ಕಾರು ವ್ಯವಸ್ಥೆಗಳನ್ನು ಇದು ಹೊಂದಿರಲಿದೆ.

ಕೆಲವು ಸಮಯಗಳ ಹಿಂದೆಯಷ್ಟೇ ಜಿನೆವಾದಲ್ಲಿ ಪ್ರದರ್ಶನ ಕಂಡಿರುವ ಎಕ್ಸ್‌ಆರ್-ಪಿಎಚ್‌ಇವಿ ಕಾನ್ಸೆಪ್ಟ್ ನಿಂದ ಸ್ಪೂರ್ತಿ ಪಡೆದುಕೊಂಡು ಇದನ್ನು ರಚಿಸಲಾಗಿದೆ.

ನಿಮ್ಮ ಮಾಹಿತಿಗಾಗಿ 2015 ಟೋಕಿಯೋ ಮೋಟಾರು ಶೋ ಸಾರ್ವಜನಿಕರಿಗಾಗಿ ಅಕ್ಟೋಬರ್ 30ರಿಂದ ನವೆಂಬರ್ 08ರ ವರೆಗೆ ತೆರೆದುಕೊಳ್ಳಲಿದೆ.

ಬರುತ್ತಿದೆ ಮಹೀಂದ್ರದಿಂದಲೂ ಚಾಲಕ ರಹಿತ ಕಾರು ಮುಂದಕ್ಕೆ ಓದಿ


Click it and Unblock the Notifications








