2017ರಲ್ಲಿ ಹೊಸ ಮಿಟ್ಸುಬಿಸಿ ಪಜೆರೊ ಭಾರತಕ್ಕೆ
ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ಮಿಟ್ಸುಬಿಸಿ ಜನಪ್ರಿಯ ಕ್ರೀಡಾ ಬಳಕೆಯ ವಾಹನಗಳಲ್ಲಿ ಒಂದಾಗಿರುವ ಪರಿಷ್ಕೃತ ಪಜೆರೊ ಸ್ಪೋರ್ಟ್ 2017ನೇ ಸಾಲಿನಲ್ಲಿ ಭಾರತವನ್ನು ತಲುಪಲಿದೆ.
ಇದರಂತೆ ಭಾರತದಲ್ಲೇ ಜೋಡಣೆ ಕಾರ್ಯ ಹಮ್ಮಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಬೆಲೆ ಕಾಯ್ದುಕೊಳ್ಳುವ ಇರಾದೆಯನ್ನು ಸಂಸ್ಥೆ ಹೊಂದಿದೆ. ವರದಿಗಳ ಪ್ರಕಾರ ಮಿಟ್ಸುಬಿಸಿ ಪಜೆರೊ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ಭಾರತವನ್ನು ತಲುಪಲಿದೆ.

ಎಂಜಿನ್ ತಾಂತ್ರಿಕತೆ
2.4 ಲೀಟರ್ ಎಂಐವಿಇಸಿ
178.45 ಅಶ್ವಶಕ್ತಿ
431 ಎನ್‌ಎಂ ತಿರುಗುಬಲ
8 ಸ್ಪೀಡ್ ಆಟೋಮ್ಯಾಟಿಕ್, ಸೂಪರ್ ಸೆಲೆಕ್ಟ್ 4 ವೀಲ್ ಡ್ರೈವ್ ಸೆಲೆಕ್ಟ್
ಚೆನ್ನೈನ ಹಿಂದೂಸ್ತಾನ್ ಘಟಕದಲ್ಲಿ ಪಜೆರೊ ಸ್ಥಳೀಯವಾಗಿ ಜೋಡಣೆಯಾಗಲಿದೆ. ಈ ಮೂಲಕ ಭಾರತದಲ್ಲಿ ತನ್ನ ಮಾರಾಟ ವಲಯವನ್ನು ವಿಸ್ತರಿಸುವ ಯೋಜನೆಯನ್ನು ಮಿಟ್ಸುಬಿಸಿ ಹೊಂದಿದೆ.


Click it and Unblock the Notifications








