ಟೊಯೊಟಾ ಲ್ಯಾಂಡ್ ಕ್ರೂಸರ್ ಬಿಡುಗಡೆ; ಬೆಲೆ 1.29 ಕೋಟಿ ರು.

By Nagaraja

ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಲ್ಯಾಂಡ್ ಕ್ರೂಸರ್ ಅತಿ ನೂತನ ಲ್ಯಾಂಡ್ ಕ್ರೂಸರ್ ಬಿಡುಗಡೆ ಮಾಡಿದೆ. ಇದು ಕೋಟ್ಯಧಿಪತಿ ಉದ್ಯಮಿಗಳಿಗೆ ಪರಿಪೂರ್ಣ ಆಯ್ಕೆಯಾಗಿರಲಿದೆ.

ಬೆಲೆ ಮಾಹಿತಿ: 1.29 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)

ಕಾರಿನ ಹೊರಗಡೆ ಹೊಸತಾದ ಹೆಕ್ಸಗನಲ್ ಗ್ರಿಲ್, ಎಲ್ ಇಡಿ ಹೆಡ್ ಲ್ಯಾಂಪ್, ಹೊಸ ಅಲಾಯ್ ವೀಲ್, ಪರಿಷ್ಕೃತ ರಿಯರ್ ಲ್ಯಾಂಪ್ ಮುಂತಾದ ವ್ಯವಸ್ಥೆಗಳನ್ನು ಕಾಣಬಹುದಾಗಿದೆ.

ಟೊಯೊಟಾ ಲ್ಯಾಂಡ್ ಕ್ರೂಸರ್

ಎಂಜಿನ್ ತಾಂತ್ರಿಕತೆ
ನೂತನ ಟೊಯೊಟಾ ಲ್ಯಾಂಡ್ ಕ್ರೂಸರ್ 4.5 ಲೀಟರ್ ವಿ8 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 647 ಎನ್‌ಎಂ ತಿರುಗುಬಲದಲ್ಲಿ 281 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

ವೈಶಿಷ್ಟ್ಯಗಳು
ಚಕ್ರದೊತ್ತಡ ಮಾನಿಟರಿಂಗ್ ವ್ಯವಸ್ಥೆ, ವಿವಿಧ ಭೂಪ್ರದೇಶ ಪರೀಶೀಲಿಸುವ ಕ್ಯಾಮೆರಾ, ಎಲ್ ಇಡಿ ಬೆಳಕಿನ ಸೇವೆ, ಸ್ಟೀರಿಂಗ್ ವೀಲ್ ನಲ್ಲೇ ಆಡಿಯೋ ನಿಯಂತ್ರಣ, ಬಹು ಕ್ರಿಯಾತ್ಮಕ 4.2 ಇಂಚು ಟಿಎಫ್‌ಟಿ ಮನರಂಜನಾ ಮಾಹಿತಿ ಪರದೆ, ಸಿಲ್ವರ್ ಫಿನಿಸ್ ಸೆಂಟ್ರಲ್ ಕನ್ಸಾಲ್ ಮತ್ತು ಹೊಸ ಒಳಮೈ ಬಣ್ಣಗಳು ಲಭ್ಯವಾಗಲಿದೆ.

ಬಣ್ಣಗಳು
ಎರಡು ಹೊಸ ಎಕ್ಸ್ ಟೀರಿಯರ್ ಬಣ್ಣಗಳಲ್ಲಿ ಹೊಸ ಲ್ಯಾಂಡ್ ಕ್ರೂಸರ್ ಲಭ್ಯವಾಗಲಿದೆ. ಅವುಗಳೆಂದರೆ ಕಾಪರ್ ಬ್ರೌನ್ ಮತ್ತು ಡಾರ್ಕ್ ಬ್ಲೂ ಮೈಕಾ. ಇವುಗಳ ಜೊತೆಗೆ ಸೂಪರ್ ವೈಟ್, ವೈಟ್ ಪಿಯರ್ಲ್ ಕ್ರೈಸ್ಟಲ್ ಶೈನ್, ಸಿಲ್ವರ್ ಮೆಟ್ಯಾಲಿಕ್, ಗ್ರೇ ಮೆಟ್ಯಾಲಿಕ್, ಬ್ಲ್ಯಾಕ್, ಆಟಿಡ್ಯುಡ್ ಬ್ಲ್ಯಾಕ್, ಡಾರ್ಕ್ ರೆಡ್ ಮೈಕಾ ಮೆಟ್ಯಾಲಿಕ್, ಬೀಜ್ ಮೈಕಾ ಮೆಟ್ಯಾಲಿಕ್ ಲಭ್ಯವಿರಲಿದೆ. ಇನ್ನುಳಿದಂತೆ ಕಾರಿನೊಳಗೂ ಬ್ರೌನ್ ಹಾಗೂ ಫ್ಲೇಕ್ಸೆನ್ ಅಪಾರ್ಟ್ ಗಳೆಂಬ ಎರಡು ಹೊಸ ಬಣ್ಣಗಳನ್ನು ಕೊಡಲಾಗುತ್ತದೆ.

More from DriveSpark

Article Published On: Saturday, October 31, 2015, 10:35 [IST]
English summary
Toyota Launches New Land Cruiser In India; Priced At Rs. 1.29 Crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+