ಬ್ರೇಕಿಂಗ್: ಪೆಟ್ರೋಲ್ ಬೆಲೆ 50 ಪೈಸೆ ಕಡಿತ; ಡೀಸೆಲ್ ಸ್ಥಿರ
ವಾಹನ ಸವಾರರಿಗೆ ಖುಷಿ ತರುವ ಸುದ್ದಿಯಲ್ಲಿ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲೂ ಪೆಟ್ರೋಲ್ ಬೆಲೆಯಲ್ಲಿ 50 ಪೈಸೆಗಳಷ್ಟು ಇಳಿಕೆಯಾಗಿದೆ.
ದೇಶದ ತೈಲ ಉತ್ಪನ್ನ ಸಂಸ್ಥೆಗಳು ಪ್ರತಿ 15 ದಿನಗಳಿಗೊಮ್ಮೆ ಇಂಧನ ಬೆಲೆಯನ್ನು ಪರಿಷ್ಕೃತಗೊಳಿಸುತ್ತಿವೆ. ಇದರಂತೆ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಬೆಲೆ ಪರಿಷ್ಕೃತಗೊಂಡಿದ್ದು, ನೂತನ ಬೆಲೆ ಇಂದು ಮಧ್ಯರಾತ್ರಿಯಿಂದಲೇ (ನವೆಂಬರ್ 01) ಜಾರಿಗೆ ಬರಲಿದೆ.

ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 60.70 ರು. ಆಗಿರಲಿದೆ. ಇನ್ನೊಂದೆಡೆ ಕಳೆದೆರಡು ತಿಂಗಳಲ್ಲಿ 1.45 ರು.ಗಳಷ್ಟು ಏರಿಕೆಗೊಂಡಿದ್ದ ಡೀಸೆಲ್ ಬೆಲೆ ಈಗ ಸ್ಥಿರವಾಗಿದ್ದು, ಸ್ವಲ್ಪ ನಿರಾಳವಾಗುಂತಾಗಿದೆ.


Click it and Unblock the Notifications








