ಬರುತ್ತಿದೆ ಪ್ಲಾಸ್ಟಿಕ್ ಕಾರು ಎಂಜಿನ್: ಏನಿದರ ಮಹತ್ವ?

By Nagaraja

ಇಡೀ ವಾಹನ ಜಗತ್ತಿನಲ್ಲಿ ಕ್ರಾಂತಿಕಾರಿ ಬದಲಾವಣೆಯೆಂದೇ ವಿಶ್ಲೇಷಿಸಬಹುದಾದ ಬೆಳವಣಿಗೆಯೊಂದರಲ್ಲಿ ಆಟೋ ಉತ್ಸಾಹಿ ಸಂಸ್ಥೆಯೊಂದು ಪ್ಲಾಸ್ಟಿಕ್ ಕಾರು ಎಂಜಿನ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ಬಲ್ಲ ಮೂಲಗಳ ಪ್ರಕಾರ ಅಮೆರಿಕ ತಳಹದಿಯ ಎಂಜಿನಿಯರ್ ಮ್ಯಾಟಿ ಹಾಲ್ಟ್ಜ್‌ಬರ್ಗ್ (Matty Holtzberg) ಜೊತೆ ಸೇರಿಕೊಂಡು ಸಾಲ್ವೆ ಕೆಮಿಕಲ್ಸ್ (Solvay Chemicals) ಪ್ಲಾಸ್ಟಿಕ್ ಕಾರು ಎಂಜಿನ್ ತಯಾರಿಸಲಿದೆ. ಇವರ ಕನಸು ನನಸಾದ್ದಲ್ಲಿ ವಾಹನ ಜಗತ್ತಿನಲ್ಲಿದ್ದು ಅನೇಕ ಪರಿಣಾಮಗಳನ್ನುಂಟು ಮಾಡಲಿದೆ. ಇವೆಲ್ಲದಕ್ಕೂ ಸಮಗ್ರ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಪೊಲಿಮೋಟಾರ್ 2

ಪೊಲಿಮೋಟಾರ್ 2

ಹೊಸತಾಗಿ ನಿರ್ಮಿಸಲಿರುವ ಫೋರ್ ಸಿಲಿಂಡರ್ ಪ್ಲಾಸ್ಟಿಕ್ ಕಾರು ಎಂಜಿನ್ ಪೊಲಿಮೋಟಾರ್ 2 ಎಂದು ಗುರುತಿಸ್ಪಡಲಿದೆ.

ಭಾರ ಕಡಿತ

ಭಾರ ಕಡಿತ

ಪ್ರಮುಖವಾಗಿ ಪ್ಲಾಸ್ಟಿಕ್ ಎಂಜಿನ್ ನಿರ್ಮಿಸುವುದರ ಉದ್ದೇಶ ಇದು ಒಟ್ಟಾರೆ ಭಾರವನ್ನು ಕಡಿತಗೊಳಸಲಿದೆ. ಇದು 63ರಿಂದ 67 ಕೆ.ಜಿಗಳಷ್ಟು ತೂಕವಿರಲಿದ್ದು, ಸಾಮಾನ್ಯ ಫೋರ್ ಸಿಲಿಂಡರ್ ಎಂಜಿನ್ ಗಿಂತಲೂ 40 ಕೆ.ಜಿಗಳಷ್ಟು ಹಗುರ ಭಾರವನ್ನು ಹೊಂದಿರಲಿದೆ.

ಪ್ಲಾಸ್ಟಿಕ್ ಎಂಜಿನ್

ಪ್ಲಾಸ್ಟಿಕ್ ಎಂಜಿನ್

ಈ ಡ್ಯುಯಲ್ ಓವರ್ ಹೆಡ್ ಕ್ಯಾಮ್ ಶಾಫ್ಟ್ ಎಂಜಿನ್ ನಲ್ಲಿ ಪ್ಲಾಸ್ಟಿಕ್ ಒಯಿಲ್ ಪಂಪ್, ವಾಟರ್ ಪಂಪ್, ವಾಟರ್ ಔಟ್ಲೆಟ್, ಥ್ರಾಟಲ್ ಬಾಡಿ, ಫ್ಲೂಯಲ್ ರೈಲ್ ಮತ್ತು ಕ್ಯಾಮ್ ಸ್ರೊಕೆಟ್ ಬಳಕೆಯಾಗಲಿದೆ. ಹಾಗೆಯೇ ಕಾರ್ಬನ್ ಫೈಬರ್ ಬಳಕೆಯು ಕಂಡುಬರಲಿದೆ.

ಎಂ-20 ಸಿ ಕೂಪೆ ಕಾನ್ಸೆಪ್ಟ್ ಕಾರು

ಎಂ-20 ಸಿ ಕೂಪೆ ಕಾನ್ಸೆಪ್ಟ್ ಕಾರು

ಈ ನೂತನ ಪ್ಲಾಸ್ಟಿಕ್ ಪೊಲಿಮೋಟಾರು 2 ಎಂಜಿನ್, ಫ್ರಾನ್ಸ್‌ನ ರೇಸ್ ಕಾರು ವಿನ್ಯಾಸ ಸಂಸ್ಥೆ ನೋರ್ಮಾ ಆಟೋ ಕಾನ್ಸೆಪ್ಟ್ ನಿರ್ಮಿಸಿರುವ ಎಂ-20 ಸಿ ಕೂಪೆ ಕಾನ್ಸೆಪ್ಟ್ ಕಾರಿನಲ್ಲಿ ಆಳವಡಿಕೆಯಾಗಲಿದ್ದು, ಮುಂದಿನ ವರ್ಷ ಪ್ರಾಯೋಗಿಕ ಸಂಚಾರ ಪರೀಕ್ಷೆ ನಡೆಯಲಿದೆ.

ಪವರ್

ಪವರ್

8000 ಆವರ್ತಕದಲ್ಲಿ 450ರಷ್ಟು ಅಶ್ವಶಕ್ತಿ ಉತ್ಪಾದಿಸುವ ನಿರೀಕ್ಷೆಯಿದೆ. ಅಲ್ಲದೆ ಪ್ಲಾಸ್ಟಿಕ್ ಟರ್ಬೊಚಾರ್ಜರ್ ಹಾಗೂ ಸುಧಾರಿತ ಫ್ಲೂಯಲ್ ಇಂಜೆಕ್ಷನ್ ವ್ಯವಸ್ಥೆಯು ಇದರಲ್ಲಿರಲಿದೆ.

ಕಾಸ್ ವರ್ತ್ ಎಂಜಿನ್

ಕಾಸ್ ವರ್ತ್ ಎಂಜಿನ್

ನಿಮ್ಮ ಮಾಹಿತಿಗಾಗಿ, ಹಿಂದಿನ ಪ್ಲಾಸ್ಟಿಕ್ ಮಾದರಿಯ ಎಂಜಿನ್ ಅನ್ನು 1982ರಲ್ಲಿ ಅಭಿವೃದ್ಧಿಗೊಳಿಸಲಾಗಿತ್ತು. ಇದು ಪೊಲಿಮೋಟಾರು ಎಂದು ಗುರುತಿಸಿಲ್ಪಟ್ಟಿತ್ತು. 2.0 ಲೀಟರ್ ಕಾಸ್ ವರ್ತ್ ಬಿಡಿಎ ತಳಹದಿಯ ಈ ಎಂಜಿನ್ 290 ಅಶ್ವಶಕ್ತಿ (8500 ಆರ್ ಪಿಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಅಲ್ಲದೆ 84 ಕೆ.ಜಿಗಳಷ್ಟು ತೂಕವನ್ನು ಪಡೆದಿತ್ತು.

More from DriveSpark

Article Published On: Monday, June 8, 2015, 12:09 [IST]
English summary
As weird as it may sound, Solvay Chemicals is taking a leadership role in developing a four-cylinder plastic engine, called the Polimotor 2.
Read more on ಎಂಜಿನ್ engine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+